Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ಡಾ ವೆಂಕಟಪ್ಪ ನವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ

Posted date: 28 Oct, 2020

Powered by:     Yellow and Red

ತಾಲ್ಲೂಕಿನ ಡಾ ವೆಂಕಟಪ್ಪ ನವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ

ಚನ್ನಪಟ್ಟಣ:ಅ/28/20/ಬುಧವಾರ. ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದಲ್ಲಿ 02-10-1945 ರಲ್ಲಿ ಚೆನ್ನಮ್ಮ ಮತ್ತು ಮಂಚೇಗೌಡರ ಸುಪುತ್ರರಾಗಿ ಜನಿಸಿದ ಡಾ. ಹೆಚ್.ಎಂ ವೆಂಕಟ್ಟಪ್ಪನವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯು ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಲಭ್ಯವಾಗಿದೆ.

ಇದು ಅರ್ಹ ವ್ಯಕ್ತಿಯೊಬ್ಬರಿಗೆ ಸಂದ ಗೌರವವಾಗಿದೆ. ಅಷ್ಟೇ ಅಲ್ಲದೆ, ಇದರಿಂದ ಈ ತಾಲ್ಲೂಕಿನ ಹಿರಿಮೆ ಗರಿಮೆಯು ಹೆಚ್ಚಿದಂತೆ ಆಗಿದೆ.


ಇವರು 1963-69ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ೨ನೇ ರ‍್ಯಾಂಕ್ ವಿದ್ಯಾರ್ಥಿಯಾಗಿ ವೈದ್ಯಕೀಯ ಶಿಕ್ಷಣವನ್ನು ಮುಗಿಸುತ್ತಾರೆ. 1973-75 ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಎಂ.ಡಿಯನ್ನು ಔಷಧ ಶಾಸ್ತ್ರ ವಿಭಾಗದಲ್ಲಿ ಪೂರ್ಣ ಗೊಳಿಸುತ್ತಾರೆ.


1971 ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಸರ್ಕಾರಿ ಸೇವೆಯನ್ನು ಪ್ರಾರಂಭಿಸುತ್ತಾರೆ. 24 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡಿ 1978 ರಿಂದ 88ರ ವರೆಗೆ 11 ವರ್ಷಗಳ ಕಾಲ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾರೆ.


ಅಲ್ಲಿ ಜನಪ್ರಿಯ ವೈದ್ಯರಾಗಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ವಿಶ್ವಾಸಗಳಿಸುತ್ತಾರೆ. 89-92 ರ ವರೆಗೆ ಚನ್ನಪಟ್ಟಣ ಜನರಲ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ 50 ಹಾಸಿಗೆಯುಳ್ಳ ಈ ಆಸ್ಪತ್ರೆಯನ್ನು 100 ಹಾಸಿಗೆಗೆ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲು ಸಾರ್ವಜನಿಕ ರಿಂದ 30 ಲಕ್ಷ ದೇಣಿಗೆಯನ್ನು ಸಂಗ್ರಹಿಸಿ ಈ ಆಸ್ಪತ್ರೆಯನ್ನು 30 ಸಾವಿರ ಚದರ ಅಡಿಗೆ ವಿಸ್ತರಿಸಿದ್ದು ಇವರ ಸಾಧನೆಗೆ ಹಿಡಿದ ಕನ್ನಡಿ.


ಈಗ ಅವರು ಬೆಂಗಳೂರಿನ ಕಣ್ವ ಡಯೋಗ್ನೋಸ್ಟಿಕ್‌ನ ಎಂ.ಡಿ ಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜಧಾನಿ ಯಲ್ಲಿ ಅದೊಂದು ಪ್ರತಿಷ್ಠಿತವಾದ ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ವೈದ್ಯಕೀಯ ಸೌಲಭ್ಯ ಗಳನ್ನು ಒದಗಿಸುವ ಸಂಸ್ಥೆಯಾಗಿ ಬೆಳೆದಿದೆ.

2014 ರಲ್ಲಿ ಕಣ್ವ ಫೌಂಡೇಷನ್ ಎಂಬ ಟ್ರಸ್ಟ್ ಮಾಡಿ ಅದರ ಮೂಲಕ ತಮ್ಮ ಹುಟ್ಟೂರಿನ ಬಳಿಯ ನಾಲ್ಕೂವರೆ ಎಕರೆ ಭೂಮಿಯನ್ನು ದಾನವಾಗಿ ಕೊಟ್ಟು ಗ್ರಾಮೀಣ ಜನರ ಅಭಿವೃದ್ಧಿಗೆ ಮೀಸಲಿ ರಿಸಿದ್ದು ಸಾಧನೆಯೇ ಸರಿ.

ಅಲ್ಲಿಂದ ಇಲ್ಲಿಯ ವರೆಗೆ ಹಿಂದಿರುಗಿ ನೋಡದೆ, ಬೆಳೆದ ಕೀರ್ತಿ ಅವರದ್ದಾಗಿದೆ ಎಂಬುದರಲ್ಲಿ ಸಂಶಯವಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑