Tel: 7676775624 | Mail: info@yellowandred.in

Language: EN KAN

    Follow us :


ಕುಶಲಕರ್ಮಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ: ಸಿಇಓ ಇಕ್ರಂ

Posted date: 28 Oct, 2020

Powered by:     Yellow and Red

ಕುಶಲಕರ್ಮಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ: ಸಿಇಓ ಇಕ್ರಂ

ರಾಮನಗರ:ಅ/28/20/ಬುಧವಾರ. ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ  ಆರ್ಥಿಕ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ   ಸಂಯೋಜಿತ ವಿನ್ಯಾಸ ಮತ್ತು ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದ್ದು,   ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರು ತಿಳಿಸಿದರು.


ಅವರು ಇಂದು ಚನ್ನಪಟ್ಟಣದ ಮದೀನಾ ಚೌಕ್‌ನ ಆಲ್ ಕರೀಮ್ ಫಂಕ್ಷನ್ ಹಾಲ್‌ನಲ್ಲಿ ಎಕ್ಸ್ ಪೋರ್ಟ್ ಪ್ರಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿಕ್ರಾಫ್ಟ್ ಅವರು ಭಾರತ ಸರ್ಕಾರದ ಜವಳಿ ಇಲಾಖೆಯ ಕರಕುಶಲ ಅಭಿವೃದ್ಧಿ ಆಯುಕ್ತಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕುಶಲಕರ್ಮಿಗಳಿಗೆ  5 ತಿಂಗಳ ಅವಧಿಯ ಸಂಯೋಜಿತ ವಿನ್ಯಾಸ ಮತ್ತು ತಾಂತ್ರಿಕ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.


ಗ್ರಾಹಕರ ಖರೀದಿಗೆ ಅನುಗುಣವಾಗಿ ಕುಶಲಕರ್ಮಿಗಳು ತಮ್ಮ ನಾವೀನ್ಯತೆಯನ್ನು ರೂಡಿಸಿಕೊಳ್ಳಬೇಕು. ತಯಾರಿಸುವ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ  ಕೂಡಿರಬೇಕು ಹಾಗೂ ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುವ ರೀತಿ ಇರಬೇಕು ಎಂದರು.


ಕಾರ್ಯಕ್ರಮದಲ್ಲಿ ಎಕ್ಸ್ ಪೋರ್ಟ್ ಪ್ರಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿಕ್ರಾಫ್ಟ್ ನ ವಲಯ ಮುಖ್ಯಸ್ಥರಾದ‌ ಪಿ.ಎಲ್ ಶ್ರೀದೇವಿ, ನಿವೃತ್ತ ಸಿ.ಎ.ಓ ಕೆ.ಎಲ್ ರಮೇಶ್, ಕುಶಲಕರ್ಮಿಗಳ ಸಂಘದ ಕಾರ್ಯದರ್ಶಿ ಸೈಯದ್  ಇಬ್ರಾಹಿಂ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑