Tel: 7676775624 | Mail: info@yellowandred.in

Language: EN KAN

    Follow us :


ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

Posted date: 01 Nov, 2020

Powered by:     Yellow and Red

ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ:ಅ/31/20/ಶನಿವಾರ.


ಬಿಡದಿ ಬಳಿಯ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ  ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 30 ದಿನಗಳ ಉಚಿತ ಸೆಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್. ತರಬೇತಿಯನ್ನು ಆಯೋಜಿಸಲಾಗಿದೆ.


ಆಸಕ್ತಿ ಉಳ್ಳವರು ಕನಿಷ್ಠ 7 ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿರಬೇಕು. 18 ರಿಂದ 35  ವರ್ಷ 

ವಯೋಮಾನದವರಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವಿರುತ್ತದೆ.


ತರಬೇತಿಯ ಮುಖ್ಯ ಉದ್ದೇಶ ಯುವಕರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸುವುದಾಗಿರುತ್ತದೆ. ಆಸಕ್ತರು ತಮ್ಮ ಇತ್ತೀಚಿನ 3 ಭಾವಚಿತ್ರಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲಿನೊಂದಿಗೆ ನೇರವಾಗಿ ಅಭ್ಯರ್ಥಿಗಳು ಅರ್ಜಿಗಳನ್ನು ದಿನಾಂಕ 05.11.2020 ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ ತಮ್ಮ ಹೆಸರನ್ನು  ತರಬೇತಿಗೆ  ನೊಂದಾಯಿಸಬಹುದಾಗಿದೆ.


ತರಬೇತಿಯು ದಿನಾಂಕ 09.11.2020 ರಂದು ಪ್ರಾರಂಭವಾಗುತ್ತದೆ. 


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ವಿಳಾಸ: 

ಕೆನರಾ ಬ್ಯಾಂಕ್,

ಎ.ಡಿ.ಪೈ  ಗ್ರಾಮೀಣ  ಅಭಿವೃದ್ಧಿ ತರಬೇತಿ ಸಂಸ್ಥೆ,

ಬೆಂಗಳೂರು  -  ಮೈಸೂರು ಹೆದ್ದಾರಿ,

ವಂಡರ್ ಲಾ ಹಾಗೂ ಬಿಡದಿಯ ಮಧ್ಯ ಭಾಗ ಲಕ್ಷ್ಮಿ ಸಾಗರ ಗೇಟ್, ವಾಜರಹಳ್ಳಿ, ಬಿಡದಿ ಹೋಬಳಿ, 

ರಾಮನಗರ ಜಿಲ್ಲೆ  - 562109.


 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ: 


ತರಬೇತಿ ಸಂಯೋಜಕರು. 

96862 69653, 9591752123.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑