Tel: 7676775624 | Mail: info@yellowandred.in

Language: EN KAN

    Follow us :


ಡಿಸಿ ಹೆಸರಲ್ಲಿ ನಕಲಿ ಇ-ಮೇಲ್ ಖಾತೆ : ಕಾನೂನು ಕ್ರಮದ ಎಚ್ಚರಿಕೆ

Posted date: 23 Nov, 2020

Powered by:     Yellow and Red

ಡಿಸಿ ಹೆಸರಲ್ಲಿ ನಕಲಿ ಇ-ಮೇಲ್ ಖಾತೆ : ಕಾನೂನು ಕ್ರಮದ ಎಚ್ಚರಿಕೆ

ರಾಮನಗರ, ನ. 23 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ಮತ್ತೋಂದು ನಕಲಿ ಐಡಿಯಿಂದ ಇ-ಮೇಲ್ ಕಳುಹಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಇಂದು ಎಚ್ಚರಿಸಿದ್ದಾರೆ.


ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ <director7285@gmail.com> ನಕಲಿ ಇಮೇಲ್ ಖಾತೆ ತೆರೆದು ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳಿಗೆ ಸೋಮವಾರದಂದು (ನ.23) ತಪ್ಪು ಸಂದೇಶ ಬರುವಂತಹ ಇಮೇಲ್ ಕಳುಹಿಸಲಾಗಿರುವುದು ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂಥವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


*ಅಧಿಕೃತ ಐಡಿ:* ಜಿಲ್ಲಾಧಿಕಾರಿಯವರ ಅಧಿಕೃತ ಇಮೇಲ್ ಐಡಿ ಆದ <deo.ramanagara@gmail.com> ಮೂಲಕ ಇ-ಮೇಲ್ ಕಳಿಸಲಾಗುತ್ತದೆ. ಸದರಿ ಐಡಿಯಿಂದ ಬರುವ ಸಂದೇಶಗಳನ್ನು ಹೊರತುಪಡಿಸಿ ಇನ್ನಾವುದೇ ಐಡಿಗಳಿಂದ ಬರುವಂತಹ ಸಂದೇಶ /ಮಾಹಿತಿಗಳನ್ನು ಪರಿಗಣಿಸಬಾರದು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.


ಅಧಿಕೃತ ಇ-ಮೇಲ್ ಐಡಿ ಹೊರತುಪಡಿಸಿ ಇನ್ನಾವುದೇ ನಕಲಿ ಅಥವಾ ಅನಧಿಕೃತ ಐಡಿಗಳಿಂದ ಸಂದೇಶ ಇಲ್ಲವೇ ಮಾಹಿತಿ ಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ.


ಜಿಲ್ಲಾಧಿಕಾರಿಗಳ ಹೆಸರು ಬಳಸಿಕೊಂಡು ಹೊಸದಾಗಿ ಮತ್ತೋಂದು ನಕಲಿ ಇ-ಮೇಲ್ ಖಾತೆ ತೆರೆಯುವುದು ಇಲ್ಲವೇ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳನ್ನು ರವಾನಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑