Tel: 7676775624 | Mail: info@yellowandred.in

Language: EN KAN

    Follow us :


ಉಪಮುಖ್ಯಮಂತ್ರಿಗಳಿಂದ ಹಕ್ಕುಪತ್ರ ವಿತರಣೆ

Posted date: 27 Nov, 2020

Powered by:     Yellow and Red

ಉಪಮುಖ್ಯಮಂತ್ರಿಗಳಿಂದ  ಹಕ್ಕುಪತ್ರ ವಿತರಣೆ

ರಾಮನಗರ:ನ/26/20/ಗುರುವಾರ. ಮಾಗಡಿ ತಾಲ್ಲೂಕಿನ ಜೇನುಕಲ್ಲುಪಾಳ್ಯದ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಹಾಡಿ ಜನರು ಸರ್ಕಾರಿ ಜಮೀನಿನಲ್ಲಿ ವಾಸವಾಗಿದ್ದು, ಇವರಿಗೆ ಶಾಶ್ವತ ಸೂರು ಪಡೆಯುವ ಕನಸು ಇಂದು ನೆನಸಾಗಿದೆ. ಸರ್ಕಾರಿ ಜಮೀನಿನಲ್ಲಿ ವಾಸವಾಗಿದ್ದ 16 ಮಂದಿಗೆ ಇಂದು ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು 94 ಸಿ ಹಕ್ಕುಪತ್ರ ವಿತರಿಸಿದರು.


ಹಕ್ಕುಪತ್ರ ವಿತರಿಸಿ ಹಕ್ಕು ಪತ್ರ ಪಡೆದುಕೊಂಡವರು ಮನೆ ನಿರ್ಮಾಣ ಮಾಡಿಕೊಂಡು ಉತ್ತಮ ರೀತಿಯಲ್ಲಿ ಜೀವನ ನಡೆಸಿ ಸಮಾಜದ ಮುಖ್ಯವಾಹಿನಿಗೆ ಬಂದು ಆರ್ಥಿಕವಾಗಿ, ಸಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ ಶುಭಹಾರೈಸಿದರು.

ಮಾವು ಸಂಸ್ಕರಣಾ ಘಟಕಕ್ಕೆ ಸಿದ್ಧತೆ: ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರೇಷ್ಮ ಇಲಾಖೆಯಿಂದ 15 ಎಕರೆ ಸ್ಥಳವನ್ನು ಘಟಕ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆಗೆ ನೀಡಲಾಗಿದೆ. ರೂಪುರೇಷುಗಳನ್ನು ಸಿದ್ಧ ಮಾಡಲು ಎಕ್ಸ್‍ಪ್ರೆಷನ್ ಆಫ್ ಇಂಟ್ರಸ್ಟ್‍ನ್ನು ಸಹ ಕರೆಯಲಾಗುವುದು.  ಮಾವಿನ ಜೊತೆಗೆ ತರಕಾರಿ ಬೆಳೆಗಳಿಗೂ  ಸಹ ಆದ್ಯತೆ ನೀಡಿ ಸಂಸ್ಕರಣಾ ಘಟಕ ಸಿದ್ಧಪಡಿಸಲಾಗುವುದು. ರೈತರು ಹಣ್ಣು ಮತ್ತು ತರಕಾರಿಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ತರಕಾರಿ ಬೆಳೆಯನ್ನು ಯಾವ ರೀತಿ ಬೆಳೆದು ಹೆಚ್ಚು ಆದಾಯಗಳಿಸಬಹುದು ಎಂದು ಜನರಲ್ಲಿ ಜನಜಾಗೃತಿ ಮೂಡಿಸಲಾಗುವುದು. ವರ್ಷಪೂರ್ತಿ ರೈತರಿಗೆ ಅನುಕೂಲವಾಗುವ ರೀತಿ ಮಾವು ಸಂಸ್ಕರಣಾ ಕೇಂದ್ರವನ್ನು ಸಿದ್ಧಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.


    ಸಾಂಸ್ಕøತ ವಿಶ್ವವಿದ್ಯಾನಿಲಯದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಜನರಿಗೂ ಅನುಕೂಲವಾಗುವ ರೀತಿ ತಯಾರಿ ಮಾಡಿ ನೀಲಿನಕ್ಷೆ ರಚಿಸಲಾಗುತ್ತಿದೆ. ಮುಂದಿನ ವಾರ ಕುಲಪತಿಗಳೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಪಡೆದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು ಎಂದರು.


   ಕಾರ್ಯಕ್ರಮದಲ್ಲಿ 

 ಶಾಸಕರಾದ ಎ.ಮಂಜುನಾಥ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಹೆಚ್.ಆರ್. ಅಶೋಕ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑