Tel: 7676775624 | Mail: info@yellowandred.in

Language: EN KAN

    Follow us :


ಉಪಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

Posted date: 27 Nov, 2020

Powered by:     Yellow and Red

ಉಪಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಚನ್ನಪಟ್ಟಣ:ನ/26/20/ಗುರುವಾರ. ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಸಿಎನ್ ಅಶ್ವಥ್ ನಾರಾಯಣ ಅವರು ಇಂದು ಮಾಗಡಿ ತಾಲ್ಲೂಕಿನಲ್ಲಿ‌ ಗುರುವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.


ಕೌಶಲ್ಯಭಿವ್ಯದ್ಧಿ ಇಲಾಖೆ ವತಿಯಿಂದ

ಮಾಗಡಿ ತಾಲ್ಲೂಕಿನ ಮಾಡಬಾಳ್ ಗ್ರಾಮ ಪಂಚಾಯತ್‌ನ ಮೇಲನಹಳ್ಳಿಯಲ್ಲಿ4.15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಯ   ಶಂಕುಸ್ಥಾಪನೆಯನ್ನು ಉಪಮುಖ್ಯಮಂತ್ರಿಗಳು

 ನೆರವೇರಿಸಿದರು.


ಪಶುಪಾಲನಾ ಮತ್ತು ಪಾಶುವೈದ್ಯ ಸೇವಾ ಇಲಾಖೆ ವತಿಯಿಂದ 34 ಲಕ್ಷ ರೂ ವೆಚ್ಚದಲ್ಲಿ ಹುಲಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.


ಲೋಕೋಪಯೋಗಿ ಇಲಾಖೆಯಿಂದ 2.50 ಕೋಟಿ ರೂ ವೆಚ್ಚದಲ್ಲಿ ನಡೆಸಲಾಗುತ್ತಿರುವ ತಿಪ್ಪಸಂದ್ರ ಹೋಬಳಿಯ ಎನ್.ಎಚ್.-75 ಮುಖ್ಯ ರಸ್ತೆಯಿಂದ ಚಿಕ್ಕಕಲ್ಯಾ, ಸಂಕಿಘಟ್ಟ, ನಾರಾಯಣಪುರ, ಅಡಲಿಂಗಯ್ಯನಪಾಳ್ಯ, ಮುಳ್ಳಕಟ್ಟಮ್ಮನ ಪಾಳ್ಯ, ಸಣ್ಣೇನಹಳ್ಳಿ ಮಾರ್ಗವಾಗಿ ತಾವರೆಕೆರೆ ಸೇರುವ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು‌.


ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಿಪ್ಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕುದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 1.80 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡವನ್ನು ಉದ್ಘಾಟಿಸಿದರು.


ಜೇನುಕಲ್ಲುಪಾಳ್ಯದಲ್ಲಿ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಬಡಜನರಿಗೆ ಸ್ವಂತ ಸೂರು ಕಟ್ಟಿಕೊಳ್ಳಲು ಅನುಕೂಲವಾಗುವಂತೆ 94 ಸಿ ಹಕ್ಕು ಪತ್ರ ವಿತರಿಸಿದರು.


ಏಳಿಗೇಹಳ್ಳಿ ಕಾಲೋನಿಯಲ್ಲಿ 40 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಿದರು.


ಮಾಗಡಿ ತಾಲ್ಲೂಕಿನಲ್ಲಿ 3.99 ಕೋಟಿ ರೂ ವೆಚ್ಚದಲ್ಲಿ ಹಮ್ಮಿಕೊಂಡಿರುವ ಚಕ್ರಬಾವಿ ಹಾಗೂ ಇತರೆ 12 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ  ಕಾಮಗಾರಿಯನ್ನು ಪರಿಶೀಲಿಸಿದರು.


ಬೃಹತ್ ನೀರಾವರಿ ಇಲಾಖೆ ವತಿಯಿಂದ ಸೋಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಶ್ರೀರಂಗ ಏತ ನೀರವಾರಿ ಕಾಮಗಾರಿಯನ್ನು ಪರಿಶೀಲಿಸಿದರು.


ಕಾರ್ಯಕ್ರಮದಲ್ಲಿ ಶಾಸಕರಾದ ಎ.ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑