Tel: 7676775624 | Mail: info@yellowandred.in

Language: EN KAN

    Follow us :


ಭೂಮಾಲೀಕರು ಸಾಂತ್ವನ ನಿವೇಶನವನ್ನು ಮಾರಾಟ ಮಾಡಬೇಡಿ : ವಿ ಸೋಮಣ್ಣ

Posted date: 29 Nov, 2020

Powered by:     Yellow and Red

ಭೂಮಾಲೀಕರು ಸಾಂತ್ವನ ನಿವೇಶನವನ್ನು ಮಾರಾಟ ಮಾಡಬೇಡಿ : ವಿ ಸೋಮಣ್ಣ

ರಾಮನಗರ:ನ/28/20/ಶನಿವಾರ. ಕರ್ನಾಟಕ ಗೃಹ ಮಂಡಳಿಯಿಂದ ರಾಯಸಂದ್ರ ವಸತಿ ಬಡಾವಣೆಗೆ ಭೂಮಿ ನೀಡಿರುವ ಭೂಮಾಲೀಕರಿಗೆ ನೀಡಲಾಗುವ ಸಾಂತ್ವನ ನಿವೇಶನವನ್ನು ಮಾಲೀಕರು ಮಾರಾಟ ಮಾಡಬೇಡಿ ಮುಂದಿನ ದಿನಗಳಲ್ಲಿ ನಿವೇಶನ  ಹೆಚ್ಚಿನ ಮೌಲ್ಯಯುತವಾಗಲಿದೆ ಎಂದು ವಸತಿ ಸಚಿವ  ವಿ.ಸೋಮಣ್ಣ ಅವರು ತಿಳಿಸಿದರು.


ಅವರು ಇಂದು ರಾಯಸಂದ್ರ ಸಂಯುಕ್ತ ವಸತಿ ಬಡಾವಣೆಯಲ್ಲಿ ಭೂ ಮಾಲೀಕರಿಗೆ ಸಾಂತ್ವನ ನಿವೇಶನಗಳ ಸಾಂಕೇತಿಕ ಹಂಚಿಕೆ ಪತ್ರ ವಿತರಣೆ ಹಾಗೂ ಸಾರ್ವಜನಿಕರಿಗೆ ಇ-ಲಾಟರಿ ಮುಖಾಂತರ ನಿವೇಶನ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಮಿ ಮಾಲೀಕರಿಗೆ ನೀಡಬೇಕಿರುವ ಪರಿಹಾರವನ್ನು ಇನ್ನೂ ಮುಂದೆ ಆರ್.ಟಿ.ಜಿ.ಎಸ್. ಮೂಲಕ ಪಾವತಿಸಲಾಗುವುದು ಕರ್ನಾಟಕ ಗೃಹ ಮಂಡಳಿಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಣೆಯಾಗಲಿದೆ. ದಾಖಲೆಗಳು ಸರಿಯಾಗಿದ್ದು, ಭೂ ಮಾಲೀಕರು ಹಣಪಡೆದುಕೊಳ್ಳಲು ಯಾವುದೇ ರೀತಿಯ ತೊಂದರೆಯಿದ್ದಲ್ಲಿ ವಸತಿ ಸಚಿವರ ಕಚೇರಿಗೆ ದೂರು ಸಲ್ಲಿಸಿ ಎಂದರು.


ಬಡವರಿಗೆ, ಕಾರ್ಮಿಕ ವರ್ಗದವರು ರಿಯಲ್ ಎಸ್ಟೇಟ್ ಅಥವಾ ಖಾಸಗಿ ಅವರ ಹತ್ತಿರ ನಿವೇಶನ ಖರೀದಿಸುವುದು ಕಷ್ಟಕರವಾಗಿರುತ್ತದೆ. ಈ ವರ್ಗದವರಿಗ  ನಿವೇಶನವನ್ನು  ಕಡಿಮೆ ಬೆಲೆಯಲ್ಲಿ ಒದಗಿಸಲು ಕರ್ನಾಟಕ ಗೃಹ ಮಂಡಳಿ ಶ್ರಮಿಸುತ್ತಿದೆ ಎಂದರು.

ಕನಕಪುರ ತಾಲ್ಲೂಕಿನ ರಾಯಸಂದ್ರದಲ್ಲಿ ೨೪೬೧ ಸ್ವತ್ತು ಅಭಿವೃದ್ಧಿ ಪಡಿಸಿದ್ದು, ನಿವೇಶನಕ್ಕಾಗಿ ಭೂಮಿ ನೀಡಿರುವ ಭೂಮಾಲೀಕರಿಗೆ ಒಟ್ಟು ೨೧೦ ಸಾಂತ್ವನ ನಿವೇಶನ ಹಾಗೂ ೨೦೧೩ ಮತ್ತು ೨೦೧೬ ರಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿರುವವರಿಗೆ  ಇ-  ಲಾಟರಿ ಮುಖೇನ ೧೫೪೪ ನಿವೇಶನವನ್ನು ಸಚಿವರು ಹಂಚಿಕೆ ಮಾಡಿದರು.

 ವಸತಿ ಬ್ಲಾಕ್ ನಲ್ಲಿ ಇWS ನಿವೇಶನ- ೪೧೭,  ಐIಉ ನಿವೇಶನ- ೧೦೬೧, ಒIಉ ನಿವೇಶನ- ೬೫೦, ಊIಉ ನಿವೇಶನ -೩೧೫, ಊIಉ ಮನೆ -೫, ಒIಉ ಮನೆ -೧೩, ಸಾರ್ವಜನಿಕ ಸೌಲಭ್ಯ ನಿವೇಶನ-೯, ವಾಣಿಜ್ಯ ನಿವೇಶನ-೮ ಹಾಗೂ ಉದ್ಯಾನವನ-೨೪ ಅಭಿವೃದ್ಧಿ ಪಡಿಸಲಾಗಿರುತ್ತದೆ.

ವಿವಿಧ ಸೌಲಭ್ಯ: ರಾಯಸಂದ್ರ ವಸತಿ ಬಡಾವಣೆಗೆ ಮುಂದಿನ ದಿನಗಳಲ್ಲಿ ಅಂಗನವಾಡಿ, ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರ, ಸಮುದಾಯಭವನದ ನಿರ್ಮಾಣ ಸಹ ಮಾಡಲಾಗುವುದು. ೪.೫ ಎಕರೆ ಭೂಮಿ ಅರಣ್ಯ ಇಲಾಖೆಯ ಬಫರ್ ವಲಯದಲ್ಲಿದೆ ಎನ್ನಲಾಗುತ್ತಿದೆ. ಇಲ್ಲಿ ಉತ್ತಮ ಪಾರ್ಕ್ ಮಾಡಲಾಗುವುದು ಎಂದರು.


ಕರ್ನಾಟಕ ಗೃಹ ಮಂಡಳಿ ವತಿಯಿಂದ ಮೊದಲ ಹಂತದಲ್ಲಿ 

೧೬೩ ಎಕರೆ ಜಮೀನಿನಲ್ಲಿ ಎರಡು ವಸತಿ ಬ್ಲಾಕ್ ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಯೋಜನಾ ವೆಚ್ಚ ಗುತ್ತಿಗೆ ಮೊತ್ತ ಸೇರಿ ೩೭೪.೦೫ ಕೋಟಿ ರೂ ಆಗಿರುತ್ತದೆ. ಬಡಾವಣೆಯು ರಾಷ್ಟ್ರೀಯ ಹೆದ್ದಾರಿ-೨೦೯ ಕ್ಕೆ ಹೊಂದಿಕೊAಡಿದ್ದು, ೧೮ ಮೀಟರ್ ಅಗಲದ ಚತುಷ್ಪದ ಮುಖ್ಯ ಕಾಂಕ್ರೀಟ್ ರಸ್ತೆ, ಯು.ಜಿ.ಡಿ ವ್ಯವಸ್ಥೆ, ನೀರು ಸರಬರಾಜು ವ್ಯವಸ್ಥೆ, ಮತ್ತು ಇತರೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ.


ಕಾರ್ಯಕ್ರಮದಲ್ಲಿ ಸಂಸದರಾದ ಡಿ.ಕೆ.ಸುರೇಶ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಅ.ದೇವೇಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಜಯರತ್ನ, ಕನಕಪುರ ತಾಲ್ಲೂಕು ಪಂಚಾಯತ್ ಅಧ್ಯಕ್ಷ ನಾಗು ಎನ್, ಜಿಲ್ಲಾ ಪಂಚಾಯತ್ ಸದಸ್ಯೆ ಉಷಾರವಿ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑