Tel: 7676775624 | Mail: info@yellowandred.in

Language: EN KAN

    Follow us :


ಅರವಿಂದ್ ಫ್ಯಾಷನ್ ಲಿ, ಲಾಕ್ ಔಟ್. ಬೀದಿಗೆ ಬಂದ ಅರವತ್ತಾರು ಕುಟುಂಬ. ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರು

Posted date: 30 Nov, 2020

Powered by:     Yellow and Red

ಅರವಿಂದ್ ಫ್ಯಾಷನ್ ಲಿ, ಲಾಕ್ ಔಟ್. ಬೀದಿಗೆ ಬಂದ ಅರವತ್ತಾರು ಕುಟುಂಬ. ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರು

ರಾಮನಗರ:ನ/30/20/ಸೋಮವಾರ.

ರಾಮನಗರ ಚನ್ನಪಟ್ಟಣ ನಡುವಿನ ಹೆದ್ದಾರಿ ಬಳಿ ಇರುವ ಅರವಿಂದ್ ಫ್ಯಾಶನ್ ಲಿಮಿಟೆಡ್ ಕಾರ್ಖಾನೆಯನ್ನು ಕೆಲ ಕಾರಣ ನೀಡಿ ಲಾಕ್ ಔಟ್ ಮಾಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಿರುವುದರ ವಿರುದ್ದ ಸುಮಾರು ಹನ್ನೆರಡು ವರ್ಷಗಳಿಂದ ಕೆಲಸ ನಿರ್ವಹಿಸುತಿದ್ದ ಕಾರ್ಮಿಕರು ಕಾರ್ಖಾನೆಯ ವಿರುದ್ಧ ಧರಣಿ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಅಂದರೆ 07/11/20 ರಲ್ಲಿ ಕಾರ್ಮಿಕರಿಗೆ ಸೂಚನಾ ಪತ್ರವೊಂದನ್ನು ನೀಡಿದ್ದು ವಂದನ ಎಂಟರ್ ಪ್ರೈಸಸ್ ಮತ್ತು ಅರವಿಂದ್ ಲೈಪ್ಸ್ಟೈಲ್ ಬ್ರಾಂಡ್ m/s ಅರವಿಂದ್ ಫ್ಯಾಷನ್ ಲಿಮಿಟೆಡ್ ನ ಗುತ್ತಿಗೆ ಅವಧಿಯು 28/11/20 ಕ್ಕೆ ಮುಕ್ತಾಯಗೊಳ್ಳುವುದರಿಂದ ನೀವುಗಳು ಇನ್ನು ಮುಂದೆ ಕೆಲಸಕ್ಕೆ ಬರಬಾರದೆಂದು ನೋಟೀಸ್ ಜಾರಿ ಮಾಡಿದ್ದಾರೆ. ಕಾನೂನು ಪ್ರಕಾರ ತಮಗೆ ಬರಬೇಕಾದ ಹಣವನ್ನು ಡಿಸೆಂಬರ್ ಒಳಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಆದರೆ ಬೀದಿ ಪಾಲಾಗಿರುವ ಕಾರ್ಮಿಕರು ಹೇಳುವ ಪ್ರಕಾರ ಆಡಳಿತ ಮಂಡಳಿಯ ವಿರುದ್ದ ನಾವುಗಳು ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತರು (ADLC) ರವರ ಬಳಿ ಕೇಸು ದಾಖಲಿಸಿದ್ದೇವೆ.  ಸಂಧಾನ ನಡೆಯುತ್ತಿರುವ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಕಂಪನಿಗೆ ಬೀಗ ಹಾಕಿ  ಕಾರ್ಮಿಕರನ್ನು ಬೀದಿ ಪಾಲು ಮಾಡಲು ಅರವಿಂದ್ ಫ್ಯಾಶನ್ ಲಿಮಿಟೆಡ್ ಕಂಪನಿ ಹೊರಟಿದೆ. 
ಕಾನೂನಿನ ಪ್ರಕಾರ ಐ. ಡಿ ಆಕ್ಟ್  ಸಕ್ಷನ್ 33 ನ್ನು ವೈಲೇಷನ್ ಮಾಡಿದ್ದಾರೆ. 
ಆದ್ದರಿಂದ ಕಂಪನಿಯು ಈ ದೇಶದ ಕಾನೂನನ್ನೇ ಗಾಳಿಗೆ ತೂರಿದ್ದು ನಾವು ಇವತ್ತಿನಿಂದ ಆಡಳಿತ ಮಂಡಳಿ ವಿರುದ್ಧ ನಮಗೆ ಕೆಲಸ ನೀಡಬೇಕಾಗಿ ಪ್ರತಿಭಟನೆ ನಡೆಸುತಿದ್ದೇವೆ ಎಂದು ಒಕ್ಕೊರಲಿನಿಂದ ಹೇಳುತ್ತಿದ್ದಾರೆ.
ಸಂಬಂಧ ಪಟ್ಟ ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಕಾರ್ಮಿಕರಿಗೆ ಮರಳಿ ಕೆಲಸ ನೀಡಿ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑