Tel: 7676775624 | Mail: info@yellowandred.in

Language: EN KAN

    Follow us :


ಅಧಿಕಾರಿಗಳ ವರ್ಗಾವಣೆಯ ಮ‌ೂಲಕ ದಂಧೆ ಮಾಡುವ ಬದಲು, ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ. ಸಿಪಿವೈ ಗೆ ಹೆಚ್ಡಿಕೆ ಚುಚ್ಚು ಮಾತು

Posted date: 07 Jan, 2021

Powered by:     Yellow and Red

ಅಧಿಕಾರಿಗಳ ವರ್ಗಾವಣೆಯ ಮ‌ೂಲಕ ದಂಧೆ ಮಾಡುವ ಬದಲು, ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ. ಸಿಪಿವೈ ಗೆ ಹೆಚ್ಡಿಕೆ ಚುಚ್ಚು ಮಾತು

ಚನ್ನಪಟ್ಟಣ:ಜ/06/21/ಬುಧವಾರ. ನಾನು ಇವತ್ತು ಮಂತ್ರಿ ಆಗ್ತೀನಿ ನಾಳೆ ಮಂತ್ರಿ ಆಗ್ತೀನಿ ಅಂತಾ ಹೇಳಿ ಜನರನ್ನ ಸೆಳೆಯುತ್ತಿದ್ದಾರೆ. ಅವರ ಮಂತ್ರಿಯಾಸೆ ಕನಸಿನ ಮಾತು. ವರ್ಗಾವಣೆ ಮೂಲಕ ದುಡ್ಡು ಮಾಡುವ ಬದಲು ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ‌ ಪಿ ಯೋಗೇಶ್ವರ್ ಹೆಸರೇಳದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಕುಟುಕಿದರು. ಅವರು ಇಂದು ತಾಲೂಕಿನ ಕೆಂಗಲ್ ಬಳಿ ಇರುವ ಪುಷ್ಪ ಬೈರೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನೂತನ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ  ಜ್ಯೋತಿ ಬೆಳಗಿಸಿ   ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲ್ಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್ ಇಟ್ಟುಕೊಂಡು ಆ್ಯಕ್ಷನ್ ಹಾಕಿಕೊಂಡು ಕೂತಿದ್ದಾರೆ, ಈ ರೀತಿ ಹಣ ಸಂಪಾದನೆ ಮಾಡಲು ಅವರಿಗೆ ಅವಶ್ಯಕತೆ ಇದ್ದೀಯಾ‌‌ ಅಂತಾ ಲೇವಡಿ ಮಾಡಿದ್ರು. ಚನ್ನಪಟ್ಟಣದ ಓರ್ವ ಪಿಎಸ್ಐ ವರ್ಗಾವಣೆಗೆ 30 ಲಕ್ಷ ಹಣ ಬೇಡಿಕೆ ಇಟ್ಟಿದ್ದಾರೆ, 30 ಲಕ್ಷ ಹಣ ಕೊಟ್ಟು ಬಂದ ಆ ಪಿಎಸ್ ಐ ಜನರ ಜೀಬಿಗೆ ಕೈ ಹಾಕಬೇಕಾಗುತ್ತೆ. ಇಲ್ಲಾ ಇದನ್ನ ಬಿಟ್ಟು ಯೋಗೇಶ್ವರ್ ಜೇಬಿಗೆ ಕೈ ಹಾಕ್ತಾರಾ,  ಜೀವನದಲ್ಲಿ ಮನುಷ್ಯನಿಗೆ ದುಡ್ಡು ಬೇಕು, ಹಾಗಂತ ಹಗಲು ದರೋಡೆ ಮಾಡಬಾರದು, ಈ ತರಹ ಮಾಡಿಕೊಂಡು ಇರುವುದಕ್ಕಿಂತ ಗೌರವಯುತವಾಗಿ ರಾಜಕೀಯ ಬಿಟ್ಟು ಮನೆಯಲ್ಲಿ ಇರೋದು ಒಳ್ಳೆಯದು ಅಂತಾ ಯೋಗೀಶ್ವರ್ ಗೆ ಕಿವಿಮಾತು ಹೇಳಿದರು.

ಇನ್ನೂ ಜೆಡಿಎಸ್ ಶಾಸಕರನ್ನ ಸೆಳೆಯುವ ಕೆಲಸ ಕಳೆದ ಎರಡು ವರ್ಷಗಳಿಂದಲೂ ನಡೆಯುತ್ತಲೆ ಇದೆ, ಈ ಹಿಂದೆ ದೇವೇಗೌಡರ ಕಾಲದಲ್ಲಿ ಕೂಡ ಶಾಸಕರ ರಾಜೀನಾಮೆ ಕೊಡಿಸುವ ಕೆಲಸ ನಡೆದಿತ್ತು. 1977. ರಲ್ಲಿ ಅರವತ್ತು ಮಂದಿ ಇದ್ದ ಶಾಸಕರು 1983 ರ ಸಮಯಕ್ಕೆ ಕೇವಲ ಹನ್ನೆರಡು ಮಂದಿ‌ ಇದ್ದರು. ಆದರೂ‌ ನಮ್ಮ ಪಕ್ಷ ಉಳಿದು ಬೆಳೆದು‌ ಬರುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ನಮ್ಮ ಶಾಸಕರನ್ನ ಯಾಕೆ ಸೆಳೆಯುತ್ತಾರೆ ಅಂದರೆ ಅವರಿಗೆ ಶಾಸಕರನ್ನು ತಯಾರು ಮಾಡುವ ಶಕ್ತಿ ಇಲ್ಲಾ. ಹಾಗಾಗಿ ತಮ್ಮ ಶಕ್ತಿ ವೃದ್ಧಿ ಮಾಡಿಕೊಳ್ಳಲು ನಮ್ಮ ಶಾಸಕರನ್ನ ಸೆಳೆಯುವ ಕೆಲಸ ಮಾಡುತ್ತಾರೆ ಎಂದು ಎರಡು ಪಕ್ಷಗಳನ್ನ ಕಿಚ್ಚಾಯಿಸಿದ್ರು.

ನಾನು ಯಾವತ್ತು ಯಾರ ಮನೆ ಬಾಗಿಲಿಗು ಹೋಗಿ ನಮ್ಮ ಪಕ್ಷಕ್ಕೆ ಬನ್ನಿ ಎಂದು ಯಾರನ್ನು ಕರೆದಿಲ್ಲಾ, ರಾಜ್ಯದ ಜನತೆಯ ಕಷ್ಟ ಸುಖ ಗಳಿಗೆ ಸ್ಪಂದನೆ ಮಾಡುವ ಯಾರಾದರೂ ನಮ್ಮ ಪಕ್ಷಕ್ಕೆ ಬಂದರೆ ಬರಲಿ ಅಂತಾ ಆಹ್ವಾನ ನೀಡಿದರು. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಯುವಕರನ್ನ ಬೆಳೆಸುವ ನಿಟ್ಟಿನಲ್ಲಿ ರೂಪುರೇಷೆಗಳನ್ನ ಸಿದ್ದಪಡಿಸಲಾಗಿದೆ, ಸಂಕ್ರಾಂತಿ‌ ಹಬ್ಬದ ವೇಳೆಗೆ ಬಿಡುಗಡೆ ಮಾಡುತ್ತೇನೆ ಎಂದರು.

ಗ್ರಾಮಗಳ ಅಭಿವೃದ್ದಿಗೆ ನಿಮ್ಮ ಮತದಾರರು ನಿಮ್ಮನ್ನು ಗೌರವಿಸುವಂತ ಮಟ್ಟದಲ್ಲಿ ಈಗಾಗಲೆ ಅಭಿವೃದ್ದಿ ಕಾಮಗಾರಿಗಳ ಚಾಲನೆ ಮಾಡಿದ್ದೇನೆ. ಯಾವುದೇ ಒತ್ತಡಕ್ಕೆ ಮಣಿಯದೆ ತಾಲೂಕಿನ ಅಭಿವೃದ್ದಿಯ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೈ ಜೋಡಿಸಿ ನಿಮ್ಮ ನಿಮ್ಮ ಕ್ಷೇತ್ರದ ಜನರ ವಿಶ್ವಾಸ ಗಳಿಸಿ ಎಂದರು. ನಿಮ್ಮಗಳ ಶ್ರಮದಿಂದ ತಾಲೂಕನ್ನು ಮಾದರಿ ತಾಲೂಕು ಮಾಡುತ್ತೆನೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯ ಕ್ರಮ ಇಟ್ಟು ಕೊಳ್ಳಲಾಗುವುದೆಂದರು.

ಈ ವೇಳೆ ತಾಲೂಕು ಅಧ್ಯಕ್ಷ ಜಯಮುತ್ತು, ಹಿರಿಯ ಮುಖಂಡರಾದ ಹಾಪ್ ಕಾಮ್ಸ್ ದೇವರಾಜ್, ಪಿಎಲ್ ಡಿ ಬ್ಯಾಂಕ್ ಅದ್ಯಕ್ಷ ಜಿ.ಎಚ್.ನಾಗರಾಜು, ವಡ್ಡರಹಳ್ಳಿ ರಾಜಣ್ಣ, ವಕೀಲ ಹನುಮಂತು, ವಿನೋದ್,  ಸಿಂ ಲಿಂ ನಾಗರಾಜು, ಬೋರ್ವೆಲ್ ರಾಮಚಂದ್ರು, ಅಭಿ, ಎಲೇಕೇರಿ ನಂದೀಶ್, ಸಿದ್ದಪ್ಪ, ಯಾಲಕ್ಕಿಗೌಡ, ಗುರುಕುಮಾರ್  ಬಾನುಪ್ರಸಾದ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಮಾಜಿ‌ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್ ಲಿಂಗೇಶ್‌ಕುಮಾರ್ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಬಂದು ಹೋದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑