Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಕಾರಣದಿಂದ ಕಾರ್ಯಕ್ರಮಗಳನ್ನು ನಡೆಸಿಲ್ಲ. ಮುಂದಿನ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ಜರುಗಲಿವೆ. ಟಿ ತಿಮ್ಮೇಗೌಡ

Posted date: 11 Jan, 2021

Powered by:     Yellow and Red

ಕೊರೊನಾ ಕಾರಣದಿಂದ ಕಾರ್ಯಕ್ರಮಗಳನ್ನು ನಡೆಸಿಲ್ಲ. ಮುಂದಿನ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ಜರುಗಲಿವೆ. ಟಿ ತಿಮ್ಮೇಗೌಡ

ರಾಮನಗರ:ಜ/09/21/ಶನಿವಾರ. ಕೊರೊನಾ ಕಾರಣದಿಂದ ಜಾನಪದ ಲೋಕದಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮಗಳು ನಡೆಯಲಿಲ್ಲ. ಮುಂದಿನ ತಿಂಗಳಿನಿಂದ ಎಲ್ಲಾ ಕಾರ್ಯಕ್ರಮಗಳನ್ನು ಹಂತಹಂತವಾಗಿ ನಡೆಸಲಾಗುವುದು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ ತಿಮ್ಮೇಗೌಡ ರು ತಿಳಿಸಿದರು.

ಅವರು ಇಂದು ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ಪ್ರತಿ ವರ್ಷದಂತೆ ಲೋಕೋತ್ಸವ ನಡೆಯಬೇಕಾಗಿತ್ತು. ಆದರೆ ಕೊರೊನಾ ಸಂಕಷ್ಟ ಎದುರಾಗಿದ್ದರಿಂದ ಆಂತಹ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ನಡಸಲಾಗಲಿಲ್ಲ. ಫೆಬ್ರುವರಿ ತಿಂಗಳಲ್ಲಿ ಲೋಕೋತ್ಸವ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.


ಜಾನಪದ ಲೋಕದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಯುವಕ ಯುವತಿಯರಿಗೆ ಜಾನಪದ ದ ಹಲವು ಪ್ರಕಾರಗಳನ್ನು ಕಲಿಸಿಕೊಡಲು ಕಲೆ ಬಲ್ಲವರನ್ನು ನೇಮಿಸಿಕೊಳ್ಳಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರು ತಂಡ ರಚಿಸಿಕೊಂಡು ಕಛೇರಿಯಲ್ಲಿ ನೋಂದಾಯಿಸಿಕೊಂಡರೆ ಅವರಿಗೆ ಇಷ್ಟವಾದ ಜಾನಪದ ಕಲೆಗಳನ್ನು ಕಲಿಸಿಕೊಡಲಾಗುವುದು ಎಂದರು.


ಜಾನಪದ ಲೋಕದಲ್ಲಿ ಅನೇಕ ಜಾನಪದ ಪ್ರಕಾರಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಕೊರೊನಾ ನಂತರ ಪ್ರವಾಸಿಗರು ಬರುತ್ತಿದ್ದಾರೆ. ಇನ್ನೂ ಹಲವು ಪ್ರತಿಕೃತಿಗಳನ್ನು ನಿರ್ಮಿಸಿ ಜಾನಪದದ ಸೊಗಡನ್ನು ಬಿತ್ತರಿಸುತ್ತೇವೆ. ಲೋಕದೊಳಗಿರುವ ಕೆರೆಯನ್ನು ಪುನಶ್ಚೇತನಗೊಳಿಸಿ ಬೋಟಿಂಗ್ ಮತ್ತು ಉದ್ಯಾನ ನಿರ್ಮಿಸಲಾಗುವುದು ಎಂದರು.


ಡಾ ಹೆಚ್ ಎಲ್ ನಾಗೇಗೌಡರು ಕಟ್ಟಿದ ಈ ಸಂಸ್ಥೆಯನ್ನು ನಾಡೋಜ ಜಿ ನಾರಾಯಣ ರವರು ಮುನ್ನಡೆಸಿದರು. ಅವರಿಬ್ಬರ ಇಚ್ಛೆಯಂತೆ ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಮುಂದೆ ಇಡೀ ರಾಷ್ಟ್ರದ ಪ್ರವಾಸಿಗರು ಭೇಟಿ ನೀಡುವಂತೆ ಮಾಡುವ ಉದ್ದೇಶವಿದೆ ಎಂದು ಅವರು ಹೇಳಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ ರುದ್ರಪ್ಪ, ಚನ್ನಪಟ್ಟಣ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ, ಕಜಾಪ ಜಿಲ್ಲಾಧ್ಯಕ್ಷ ಸು ತ ರಾಮೇಗೌಡ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑