Tel: 7676775624 | Mail: info@yellowandred.in

Language: EN KAN

    Follow us :


ಪುರಾಣ ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು ಇಓ‌ ತಮ್ಮೇಗೌಡ

Posted date: 12 Jan, 2021

Powered by:     Yellow and Red

ಪುರಾಣ ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು ಇಓ‌ ತಮ್ಮೇಗೌಡ

ಚನ್ನಪಟ್ಟಣ:ಜ/12/21/ಮಂಗಳವಾರ. ಪುರಾಣ ಪ್ರಸಿದ್ಧ ಐತಿಹಾಸಿಕ ಅಯ್ಯನಗುಡಿ(ಕೆಂಗಲ್)ಯಲ್ಲಿ

ನಡೆಯುತಿದ್ದ ಜನ,ಜಾನುವಾರುಗಳ ಜಾತ್ರೆಯು ಕೋವಿಡ್೧೯ ಕಾರಣದಿಂದ ಹಾಗೂ ಕೋವಿಡ್ ಹರಡಬಾರದೆಂಬ ಮುನ್ನೆಚ್ಚರಿಕೆ ಯೊಂದಿಗೆ ಸರ್ಕಾರದ ಆದೇಶದನ್ವಯ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ ದ ಕಾರ್ಯ ನಿರ್ವಾಹಕ ಅಧಿಕಾರಿ ತಮ್ಮೇಗೌಡ ಅವರು ಕೆಂಗಲ್ ಜಾತ್ರೆಯ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದರು.


ಪ್ರತಿ ವರ್ಷದಂತೆ ಈ ವರ್ಷವು ಸಹ ಜಾತ್ರೆಯು ಜರುಗಬೇಕಾಗಿತ್ತು. ಆದರೆ ಕೋವಿಡ್ ಇರುವುದರಿಂದ ಸರ್ಕಾರದ ಆದೇಶದನ್ವಯ ಸಾರ್ವಜನಿಕರ ಹಿತ ದೃಷ್ಟಿಯಿಂದ ಜಾತ್ರೆಯನ್ನು ರದ್ದು ಗೊಳಿಸಲಾಗಿದೆ.

ಭಕ್ತಾದಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.


ಪ್ರಧಾನ ಅರ್ಚಕ ರವೀಂದ್ರ ರವರು ಮಾತನಾಡಿ ಇದೇ ತಿಂಗಳ 14 ರ ಮಕರ ಸಂಕ್ರಾಂತಿ ದಿನದಂದು ಜಾತ್ರೆಯು ಪ್ರಾರಂಭವಾಗಿ 7 ದಿನಗಳು ಅಂದರೆ 20 ನೇ ತಾರೀಖಿನ. ತನಕ ಜಿಲ್ಲಾಡಳಿತ ಮತ್ತು ಸಾರ್ವಜನಿಕ ರ ಸಹಕಾರ ದೊಂದಿಗೆ ಜರುಗಬೇಕಾಗಿತ್ತು, ಕೋವಿಡ್ ಕಾರಣದಿಂದ ಜಾತ್ರೆ ರದ್ದು ಪಡಿಸಲಾಗಿದೆ. 


ಜಾತ್ರೆ ರದ್ದಾಗಿದ್ದರೂ ಸಹ ದೇವರಿಗೆ ನಡೆಯುವ ಸೇವಾ ಕೈಂಕರ್ಯಗಳು ಭಕ್ತಾದಿಗಳಿಗೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಭಗವಂತನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮತ್ತೋರ್ವ ಅರ್ಚಕ ಶರತ್ ಕುಮಾರ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ್...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑