Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಹಿನ್ನೆಲೆ, ಕಳೆಗಟ್ಟದ ಸಂಕ್ರಾಂತಿ ವ್ಯಾಪಾರ. ರೈತರು ಮತ್ತು ವ್ಯಾಪಾರಿಗಳಲ್ಲಿ ಅಸಮಧಾನ

Posted date: 13 Jan, 2021

Powered by:     Yellow and Red

ಕೊರೊನಾ ಹಿನ್ನೆಲೆ, ಕಳೆಗಟ್ಟದ ಸಂಕ್ರಾಂತಿ ವ್ಯಾಪಾರ. ರೈತರು ಮತ್ತು ವ್ಯಾಪಾರಿಗಳಲ್ಲಿ ಅಸಮಧಾನ

ಚನ್ನಪಟ್ಟಣ:ಜ/13/20/ಬುಧವಾರ. ಸಂಕ್ರಾಂತಿ ಹಬ್ಬ ಎಂದರೆ ಸುಗ್ಗಿಯ ಹಬ್ಬ, ಅದರಲ್ಲೂ ರೈತರಿಗೆ ಮತ್ತು ರಾಶಿ ರಾಸುಗಳಿಗೆ ಸಿಹಿ ಸುಗ್ಗಿಯ ಹಬ್ಬ. ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬಕ್ಕೆ ಕೊರೊನಾ ಮಾರಿ ಬಡಿದಿರುವುದರಿಂದ ಸಂಕ್ರಾಂತಿ ಹಬ್ಬದ ವ್ಯಾಪಾರಿಗಳಿಗೂ ಗರ ಬಡಿದಂತಾಗಿದೆ.


ಸಂಕ್ರಾಂತಿಯ ಹಬ್ಬದ ಮುನ್ನಾದಿನವಾದ ಇಂದು ನಗರದಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಕಳೆಗಟ್ಟುವ ಬದಲು ಕಳಾಹೀನವಾಗಿ ಬದಲಾಗಿದೆ. ರಾಸುಗಳಿಗೆ ಬೇಕಾದ ಹೊಸ ಹಗ್ಗ, ಮೂಗುದಾರ ಹಾಗೂ ರಾಸುಗಳ ಅಲಂಕಾರಿಕ ವಸ್ತುಗಳ ಮಾರಾಟವು ಸಾಧಾರಣವಾಗಿ ನಡೆಯುತ್ತಿತ್ತು. ಕೊಳ್ಳುವ ರೈತರು ಸಹ ಕಡಿಮೆ ಪ್ರಮಾಣದಲ್ಲಿ ಕಂಡುಬಂದರು.


ಹಬ್ಬಕ್ಕೆ ಬೇಕಾದ ಎಳ್ಳು, ಬೆಲ್ಲ, ಕಬ್ಬು, ಗೆಣಸು ಅವರೆಕಾಯಿ, ಹೂವು, ಹಣ್ಣು ಮತ್ತು ಪೂಜಾ ಸಮಾಗ್ರಿಗಳು ಹೆಚ್ಚಿನ ರೀತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕೊಳ್ಳುವವರು ಮಾತ್ರ ಕಡಿಮೆ ಸಂಖ್ಯೆಯಲ್ಲಿ ಕಂಡುಬಂದರು. ಹಲವಾರು ವ್ಯಾಪಾರಿಗಳು ಕೊಳ್ಳುವವರಿಲ್ಲದೆ ಹ್ಯಾಪು ಮೋರೆ ಹಾಕಿಕೊಂಡಿರುವುದು ಕಂಡುಬಂತು.


ಒಟ್ಟಾರೆ ಈ ಬಾರಿ ಬಂದ ಕೊರೊನಾ ಹೆಮ್ಮಾರಿಯು ರೈತರ ಸುಗ್ಗಿ ಹಬ್ಬವಾದ ಸಂಕ್ರಮಣಕ್ಕೂ ಬಡಿದ ಕಾರಣ ರೈತರು ಮತ್ತು ವ್ಯಾಪಾರಿಗಳಿಗೂ ಸಂಕಷ್ಟ ತಂದೊಡ್ಡಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑