ಜಿಲ್ಲೆಯಲ್ಲಿ ಮೊದಲನೇ ದಿನ 353 ಜನರಿಗೆ ಕೋವಿಡ್-19 ಲಸಿಕೆ
ರಾಮನಗರ:ಜ/16/21/ಶನಿವಾರ. ಕೋವಿಡ್-19 ಲಸಿಕೆ ನೀಡಲು ಪ್ರಾರಂಭವಾದ ಮೊದಲನೇ ದಿನವಾದ ಇಂದು (ದಿನಾಂಕ 16-01-2020) 353 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಆರ್.ಸಿ.ಹೆಚ್ ಅಧಿಕಾರಿ ಡಾ: ಪದ್ಮ ಅವರು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆ-39, ರಾಮಕೃಷ್ಣ ಆಸ್ಪತ್ರೆ- 53,
ದಯಾನಂದ ಸಾಗರ್ ಆಸ್ಪತ್ರೆ- 75, ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆ- 10, ಕನಕಪುರ ಮೆಟರ್ ನಿಟಿ ಆಸ್ಪತ್ರೆ,- 67, ಮಾಗಡಿ ತಾಲ್ಲೂಕು ಆಸ್ಪತ್ರೆ- 20, ಇಗ್ಗಲೂರು ಪ್ರಾಥಮಿಕ ಆರೋಗ್ಯ ಕೇಂದ್ರ- 49, ಕನಕಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ-.40
ಒಟ್ಟು 353 ಜನರು ಲಸಿಕೆ ಪಡೆದುಕೊಂಡಿದ್ದಾರೆ.
ಇಂದು ಜಿಲ್ಲೆಯ 8 ಲಸಿಕಾ ಕೇಂದ್ರದಲ್ಲಿ ಒಟ್ಟು 696 ಜನರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. 353 ಜನರಿಗೆ ಲಸಿಕೆ ನೀಡಿ ಶೇ 50.7 ರಷ್ಟು ಯಶಸ್ಸನ್ನು ಸಾಧಿಸಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು