Tel: 7676775624 | Mail: info@yellowandred.in

Language: EN KAN

    Follow us :


ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾನೆ. ಹೆಚ್ ಡಿ ಕುಮಾರಸ್ವಾಮಿ

Posted date: 20 Jan, 2021

Powered by:     Yellow and Red

ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾನೆ. ಹೆಚ್ ಡಿ ಕುಮಾರಸ್ವಾಮಿ

ಚನ್ನಪಟ್ಟಣ:ಜ/20/21ಬುಧವಾರ. ಈ ತಿಂಗಳ 22 ನೇ ತಾರೀಖಿನ ಶುಕ್ರವಾರದಂದು ನಗರದ ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀರಾಮುಲು ಅವರ ಅಧ್ಯಕ್ಷತೆ ಯಲ್ಲಿ ಉದ್ಘಾಟಿಸಲಾಗುವುದು ಎಂದು ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.


ಅವರು ಇಂದು ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಧ್ಯಮದವರೊಂದಿಗೆ ಮಾತನಾಡಿದರು.

ಸ್ಥಳದಲ್ಲಿಯೇ ಗುತ್ತಿಗೆದಾರರಿಗೆ ಕರೆ ಮಾಡಿ, ಇಷ್ಟು ವಿಳಂಬವಾಗಿರುವುದೇ ಸಾಕು, ಉದ್ಘಾಟನೆಯಾದ  15 ದಿನಗಳ ಒಳಗೆ ಸಂಪೂರ್ಣ ಕಾಮಗಾರಿ ಮುಗಿಯಬೇಕು, ನಿಮಗೆ ಏನು ಸಹಾಯ ಬೇಕೋ ಅದನ್ನು ಮಾಡಿಕೊಡಲು ನಾನು ಸಿದ್ದವಿದ್ದೇನೆ. ಕಾಮಗಾರಿ ಮುಗಿದ ನಂತರವೇ ಸಾರ್ವಜನಿಕರಿಗೆ ಉಪಯೋಗವಾಗುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಖಡಕ್ ಎಚ್ಚರಿಕೆ ನೀಡಿದರು.


*ಸ್ಥಳದಲ್ಲಿಯೇ ಸಚಿವರಿಗೆ ಕರೆ*

ಸಚಿವ ಶ್ರೀರಾಮುಲು ಅವರಿಗೆ ಕರೆ ಮಾಡಿದ ಶಾಸಕರು, 22 ಕ್ಕೆ ಅಂಬೇಡ್ಕರ್ ಭವನ ತಮ್ಮ ಅಧ್ಯಕ್ಷತೆಯಲ್ಲಿ ಉದ್ಘಾಟನೆಯಾಗಲಿದೆ, ಸ್ಥಳೀಯ ರಾಜಕಾರಣಗಳ ಅವಾಂತರಗಳಿಂದ 15 ವರ್ಷಕ್ಕೂ ಹೆಚ್ಚು ಕಾಲ ವಿಳಂಬವಾಗಿದೆ. ಮುಂದೆ ಹೀಗೆ ಆಗುವುದು ಬೇಡ,  ಉದ್ಘಾಟನೆಯಾದ ನಂತರ ಭವನಕ್ಕೆ ಬೇಕಾದ ಸವಲತ್ತುಗಳನ್ನು ಅಧಿಕಾರಿ ಗಳಿಗೆ ಹೇಳಿ ಕೊಡಿಸುವುದು ತಮ್ಮ ಜವಾಬ್ದಾರಿ. ಹಾಗೆಯೇ ತಾಲ್ಲೂಕಿನಾದ್ಯಂತ ಹತ್ತಕ್ಕೂ ಹೆಚ್ಚು ಅಂಬೇಡ್ಕರ್ ಭವನಗಳಿಗೆ ಬೇಡಿಕೆ ಇಟ್ಟಿದ್ದಾರೆ. ಎರಡು ಅಥವಾ ಮೂರು ಭಾರಿ ಅನುದಾನ ಕೊಡುವ ಬದಲು, ಒಂದೇ ಬಾರಿಗೆ ಸಂಪೂರ್ಣ ಅನುದಾನ ಒದಗಿಸಿದರೆ. ಏಕ ಕಾಲದಲ್ಲಿಯೇ ಅಂಬೇಡ್ಕರ್ ಭವನ ತಲೆ ಎತ್ತಲಿವೆ ಎಂದು ಮನವಿ ಮಾಡಿದರು.


ಯೋಗೇಶ್ವರ್ ಹೆಸರೇಳದೆ, ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ ಯವರು ಆಹ್ವಾನ ಪತ್ರಿಕೆಯಲ್ಲಿ ನೂತನ ಸಚಿವರ ಹೆಸರನ್ನು ಮುದ್ರಿಸಿ, ಅವರಿಗೂ ಆಹ್ವಾನ ಪತ್ರಿಕೆ ತಲುಪಿಸಿ ಎಂದರು.

ನೀಲಸಂದ್ರದ ಅಣ್ಣಯ್ಯ ನವರು, ಕುಮಾರಸ್ವಾಮಿ ಯವರಿಗೆ 22 ನೇ ತಾರೀಖು ತುಂಬಾ ಹತ್ತಿರವಿರುವುದರಿಂದ ಎಲ್ಲಾ ದಲಿತ ಮುಖಂಡರನ್ನು ಆಹ್ವಾನಿಸಲು ಕಷ್ಟವಾಗುತ್ತದೆ ಎಂದಾಗ, ಕಿಡಿಯಾದ ಕುಮಾರಸ್ವಾಮಿ, ಕರೆಯುವುದು ನಿಮ್ಮ ಜವಾಬ್ದಾರಿ, ಎಲ್ಲರನ್ನು ಕರೆಯಿರಿ, 22 ನೇ ತಾರೀಖು ಉದ್ಘಾಟನೆಯಾಗುತ್ತದೆ, ಉಳಿದ ಕೆಲಸವನ್ನು ನಾನು ಮಾಡಿಸಿಕೊಡುತ್ತೇನೆ ಎಂದರು.


ನಗರಸಭೆಯ ಪೌರಾಯುಕ್ತ ಶಿವನಾಂಕಾರಿಗೌಡರನ್ನು ಕರೆದ ಅವರು, ಗಾಂಧಿಭವನದ ಎಲ್ಲಾ ದಾಖಲೆಗಳನ್ನು ಶೀಘ್ರವಾಗಿ ಹುಡುಕಿ ಕೊಡಿ, ಏನಾಗಿದೆ ಎಂದು ಪರಿಶೀಲಿಸಿ ವರದಿ ಸಲ್ಲಿಸಿ. ಸುಸಜ್ಜಿತ ಗ್ರಂಥಾಲಯವೊಂದನ್ನು ನಿರ್ಮಿಸಿ ಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.


ಭವನ ವೀಕ್ಷಣೆಯ ಸಂದರ್ಭದಲ್ಲಿ ಇಂಜಿನಿಯರ್ ಚಿಕ್ಕವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಾರದಾ, ಮುಖಂಡರಾದ ಜಯಮುತ್ತು, ಗೋವಿಂದಹಳ್ಳಿ ನಾಗರಾಜು ಹಾಗೂ ದಲಿತ ಮುಖಂಡರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑