Tel: 7676775624 | Mail: info@yellowandred.in

Language: EN KAN

    Follow us :


ಕ್ಲಸ್ಟರ್ ಪಾರ್ಕಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಜಗದೀಶ್ ಶೆಟ್ಟರ್

Posted date: 20 Jan, 2021

Powered by:     Yellow and Red

ಕ್ಲಸ್ಟರ್ ಪಾರ್ಕಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಜಗದೀಶ್ ಶೆಟ್ಟರ್

ರಾಮನಗರ:ಜ/20/21/ಬುಧವಾರ. ಕೈಗಾರಿಕಾ ಕ್ಲಸ್ಟರ್‌ಗಳಿಂದ ಹೆಚ್ಚಿನ ಕೈಗಾರಿಕೆಗಳು ರಚನೆಯಾಗಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ದೊರೆಯುತ್ತದೆ. ಇದರಿಂದ ಜಿಲ್ಲೆಯು ಸಹ ಅಭಿವೃದ್ಧಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ 

ಅವರು ಅವರು ತಿಳಿಸಿದರು.


ಅವರು ಇಂದು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರಿಂಟ್ ಟೆಕ್ ಪಾರ್ಕ್ ಕ್ಲಸ್ಟರ್ ಮತ್ತು ಕಾಮನ್ ಫೆಸಿಲಿಟಿ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು. ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್‌ನ್ನು ಸ್ಥಾಪನೆ ಪ್ರಾರಂಭವಾಗಿದ್ದು, 400 ಎಕರೆ ಪ್ರದೇಶದಲ್ಲಿ ಯಸಸ್ ಹೂಡಿಕೆದಾರರು 5,000 ಕೋಟಿ ಹೂಡಿಕೆ ಮಾಡಲಿದ್ದು, 20 ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ. ಇದರಿಂದ ಕೆಲಸಕ್ಕಾಗಿ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ತೆರಳುತ್ತಿದ್ದ ಜನರು ಸ್ಥಳೀಯವಾಗಿ ಉದ್ಯೋಗ ಕಂಡುಕೊಳ್ಳುವಂತಾಗಿದೆ.


ಹುಬ್ಬಳಿಯಲ್ಲಿ ಎಫ್.ಎಂ.ಸಿ.ಜಿ ಕ್ಲಸ್ಟರ್ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ. ಇಲ್ಲೂ ಕೂಡ ಉದ್ಯೋಗ ಸೃಷ್ಠಿಯಾಗಲಿದೆ ಎಂದರು.


*ರಾಜ್ಯಕ್ಕೆ ಮೊದಲ ಕ್ಲಸ್ಟರ್:* ರಾಜ್ಯದ ವಿವಿಧ ಭಾಗದಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳು ಪ್ರಾರಂಭವಾಗುತ್ತಿದ್ದು, ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮೊದಲ ಕಾರ್ಯಗತ ಪ್ರಿಂಟ್‌ಟೆಕ್ ಕ್ಲಸ್ಟರ್ ಪ್ರಾರಂಭವಾಗಿದೆ. ಆಧುನಿಕ ಪ್ರಿಂಟಿಂಗ್ ಯಂತ್ರಗಳನ್ನು ಬಳಸಿ ಇಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಲು ಕೈಗಾರಿಕೆಗಳು ಉದ್ದೇಶಿಸಿದೆ.ಪ್ರಿಂಟಿಂಗ್ ಎಂದ ಕೂಡಲೇ ಹಿಂದೆ ತಮಿಳುನಾಡು ನೆನಪಾಗುತ್ತಿತ್ತು. ಇನ್ನೂ ಮುಂದೆ ಪ್ರಿಂಟಿಂಗ್ ಎಂದ ಕೂಡಲೇ ಇಡೀ ರಾಜ್ಯಕ್ಕೆ ಹಾರೋಹಳ್ಳಿ ನೆನಪಿಗೆ ಬರುವ ರೀತಿ ಬೆಳೆಯಬೇಕು ಎಂದರು.


*ಕೋವಿಡ್ ಸಂದರ್ಭದಲ್ಲೂ ಕೈಗಾರಿಕೆಗಳು ಪ್ರಾರಂಭ:*  ಯಾದಗಿರಿ ಜಿಲ್ಲೆಯಲ್ಲಿ 4,000 ಹೆಕ್ಟೇರ್ ಭೂಸ್ವಾಧೀನ ಮಾಡಿ ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಮೂಲಭೂತ ವ್ಯವಸ್ಥತೆ ಅಭಿವೃದ್ಧಿ ಪಡಿಸಲಾಗಿತ್ತು. ಹೂಡಿಕೆದಾರರೊಂದಿಗೆ  ಸಭೆ ನಡೆದ ಸಂದರ್ಭದಲ್ಲಿ ಹೈದರಾಬಾದ್‌ಗೆ ಹತ್ತಿರವಾದ ಯಾದಗಿರಿ, ರಾಯಚೂರಿನಲ್ಲಿ ಫಾರ್ಮಸಿಟಿಕಲ್ ಕಂಪನಿಗಳನ್ನು ಪ್ರಾರಂಭಿಸುವಂತೆ ಚರ್ಚಿಸಲಾಯಿತು. ಕೋವಿಡ್‌ನಂತಹ ಸಂದರ್ಭದಲ್ಲೂ ಅಂದಾಜು 70 ಫಾರ್ಮಸಿಟಿಕಲ್ ಕಂಪನಿಗಳು ಇಲ್ಲಿ ಪ್ರಾರಂಭವಾಗಿದೆ ಎಂದರು.


ಬೆಂಗಳೂರಿನಲ್ಲಿ ಹೆಚ್ಚಿನ ಕೈಗಾರಿಕೆಗಳಿದ್ದು, ನಗರ ಅಭಿವೃದ್ಧಿಗೊಂಡಿದೆ. 2 ಟೈಯರ್ ಮತ್ತು 3 ಟೈಯರ್ ನಗರಗಳಲ್ಲಿ ಕೈಗಾರಿಕೆಗಳನ್ನು  ಪ್ರಾರಂಭಿಸಲು ಹೊಸ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೇರೆ ನಗರಗಳಲ್ಲೂ ಕೈಗಾರಿಕೆಗಳು ಪ್ರಾರಂಭವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಕೇರಳ, ತಮಿಳುನಾಡಿಗೆ ಹತ್ತಿರವಾಗಿದ್ದು, ಇಲ್ಲಿ ಕೈಗಾರಿಕೆಗಳನ್ನು ಸೆಳೆಯಲು ರೋಡ್ ಷೋ ನಡೆಸಲು ಚಿಂತಿಸಲಾಗುತ್ತಿದೆ ಎಂದರು.


ಇಂಡಸ್ಟ್ರಿಯಲ್ ಫೆಸಿಲಿಟೈಜೇಷನ್ ಆಕ್ಟ್ನಲ್ಲಿ ಸರಳೀಕರಣ ಮಾಡಲಾಗಿದೆ. ಉದ್ದಿಮೆದಾರರು ಉದ್ದಿಮೆ ಪ್ರಾರಂಭಿಸಲು ಯೋಜನೆಯನ್ನು ಸರ್ಕಾರ ಸಲ್ಲಿಸಿ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಿಸ್ಟಂ ಮೂಲಕ ಕ್ಲಿಯರೆನ್ಸ್ ಪಡೆದರೆ ಸೆಲ್ಫ್ ಡಿಕ್ಲರೇಷನ್ ಅಫ್‌ಡಿವೀಟ್ ನೀಡಿ ಉದ್ದಿಮೆಗೆ ಬೇಕಿರುವ ಕೆಲಸಗಳನ್ನು ಪ್ರಾರಂಭಿಸಬಹುದು. ವಿವಿಧ ರೀತಿಯ ಪರವಾನಗಿ ಪಡೆದು ಸಲ್ಲಿಸಲು ನಿಗಧಿತ ಕಾಲವಧಿಯನ್ನು ಉದ್ದಿಮೆದಾರರಿಗೆ ನೀಡಲಾಗುವುದು ಎಂದರು.


ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್‌ನ ಅಧ್ಯಕ್ಷರಾದ ಜನಾರ್ಧನ ಅವರು ಮಾತನಾಡಿ ಮುದ್ರಣ ಉದ್ಯಮದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 12,000 ಕ್ಕೂ ಹೆಚ್ಚು ಉದ್ದಿಮೆದಾರರಿದ್ದಾರೆ. ಹಾರೋಹಳ್ಳಿ ಕೈಗಾರಿಕ ಪ್ರದೇಶದಲ್ಲಿ 57 ಎಕರೆ ಪ್ರದೇಶದಲ್ಲಿ ಪ್ರಿಂಟೆಕ್‌ಪಾರ್ಕ್ ಪ್ರಾರಂಭಿಸಲಾಗಿದೆ. ಇಲ್ಲಿನ ಕೆಲವು ಮೂಲಭೂತ ಅಭಿವೃದ್ಧಿ ಕೆಲಸಕ್ಕಾಗಿ 2 ಕೋಟಿ ರೂ ಸರ್ಕಾರದಿಂದ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ವಿಧಾನಸಭಾ ಸದಸ್ಯರಾದ ಅನಿತಾ ಕುಮಾರಸ್ವಾಮಿ, ಲೋಕಸಭಾ ಸದಸ್ಯರಾದ ಕೆ.ನಾರಾಯಣ್, ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಆಯುಕ್ತರಾದ ಪಿ.ಜಿ.ಆರ್. ಸಿಂದಿಯಾ, ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑