Tel: 7676775624 | Mail: info@yellowandred.in

Language: EN KAN

    Follow us :


ಅಂಬೇಡ್ಕರ್ ರವರ ಹೋರಾಟದ ಬದುಕೇ ನಮಗೆ ಆದರ್ಶವಾಗಬೇಕು ಶ್ರೀರಾಮುಲು.

Posted date: 23 Jan, 2021

Powered by:     Yellow and Red

ಅಂಬೇಡ್ಕರ್ ರವರ ಹೋರಾಟದ ಬದುಕೇ ನಮಗೆ ಆದರ್ಶವಾಗಬೇಕು ಶ್ರೀರಾಮುಲು.

ಚನ್ನಪಟ್ಟಣ:ಜ/22/21/ಶುಕ್ರವಾರ. ನಮಗೆ ಅಂಬೇಡ್ಕರ್ ರವರ ಹೋರಾಟದ ಜೀವನ ಮಾದರಿಯಾಗಬೇಕು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮತ್ತು ಇಪ್ಪತ್ತನೆಯ ಶತಮಾನದ ಅಂಬೇಡ್ಕರ್ ರವರ ಕನಸು ನನಸು ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು. ಅವರು  ನೂತನ ಡಾ.ಬಿ.ಆರ್ ಅಂಬೇಡ್ಕರ್  ಭವನವನ್ನು ಉದ್ಘಾಟಿಸಿ ಮಾತನಾಡಿದರು.


ಅವರ ಅಂದಿನ ದಿನಗಳ ಜಾತಿ ವ್ಯವಸ್ಥೆಯಲ್ಲೂ ಉನ್ನತ ಸ್ಥಾನಕ್ಕೇರಿದ ಅವರ ಜೀವನಗಾಥೆ ನಮ್ಮೆಲ್ಲರ ಕಣ್ಣು ತೆರೆಸಬೇಕಾಗಿದೆ.

ಲೈಬ್ರರಿಯಲ್ಲಿ ಬ್ರೆಡ್ ತಿನ್ನಲು ಸಹ ಬಿಡದ ಅಂದಿನ ವ್ಯವಸ್ಥೆಯ ವಿರುದ್ಧ ಹೋರಾಡಿದ ಫಲವೇ ಇಂದಿನ ಎಲ್ಲಾ ಲೈಬ್ರರಿಯಲ್ಲಿ ಅವರ ಪುಸ್ತಕ ರಾರಾಜಿಸುತ್ತಿವೆ.

ಡಾ .ಅಂಬೇಡ್ಕರ್ ರವರ ಜನ್ಮ‌ದಿನಾಚರಣೆ ವಿಶ್ವದಾದ್ಯಂತ ಆಚರಣೆಯಾಗುತ್ತಿರುವುದು ನಮ್ಮ ದೇಶದ ಹೆಮ್ಮೆ ಎಂದರು.


ಮಾತಿನ‌ ಮಧ್ಯೆ ಮಧ್ಯೆ ಕುಮಾರಸ್ವಾಮಿ ಯವರು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಆಡಳಿತ, ಅವರು ದಲಿತರ ಬಗ್ಗೆ ಇಟ್ಟಿರುವ ಅಭಿಮಾನ ಹಾಗೂ ನಮಗೆ ರಾಜಕೀಯ ಗುರುವಾಗಿದ್ದರ ಬಗ್ಗೆ ಹೊಗಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ  ಕ್ಷೇತ್ರದ ಶಾಸಕ  ಹೆಚ್ ಡಿ' ಕುಮಾರಸ್ವಾಮಿಯವರು ಮಾತನಾಡಿ

2005 ರಲ್ಲಿ ಅಡಿಗಲ್ಲು ಹಾಕಿ‌ 2021 ರಲ್ಲಿ ಉದ್ಘಾಟನೆ ಆಗುತ್ತಿರುವುದು ನನಗೆ ನೋವು ತಂದಿದೆ. ಮೂರು ಕೋಟಿ ಗೆ ಸೀಮಿತವಾಗಿದ್ದ ಹಣ ಇಂದು ಆರು ಕೋಟಿ ಗೂ ಹೆಚ್ಚು ಹಣ ಖರ್ಚಾಗುವ ಮೂಲಕ ಇಂದು ಉದ್ಘಾಟನೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ನಾನು ಅಭಿವೃದ್ಧಿ ಕೆಲಸದಲ್ಲಿ ರಾಜಕಾರಣ ಮಾಡುವುದಿಲ್ಲ. ಕೆಲವು ಸ್ಥಳೀಯ ಮಾಧ್ಯಮದವರು‌ ಇಂದು ಏನೋ‌ ಆಗಿಬಿಡುತ್ತದೆ ಎಂದು ಬಿಂಬಿಸಿರುವುದು ಸರಿಯಲ್ಲ. ಉಳಿದ ಕೆಲಸಗಳನ್ನು ಶೀಘ್ರವಾಗಿ ಮಾಡಲು ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸಹಾಯಧನಕ್ಕಾಗಿ ಶ್ರೀರಾಮುಲು ರವರಿಗೆ ಮನವಿ ಮಾಡಿದ್ದು ಅವರು ಒಪ್ಪಿದ್ದಾರೆ ಎಂದರು.

ತಾಲ್ಲೂಕಿನ ದಲಿತ ಮುಖಂಡರ ಜೊತೆ ಸಮಾಲೋಚಿಸಿ, ಮುಂದಿನ ದಿನ ಇದೇ ಭವನದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡುವುದು ಶತಸಿದ್ದ ಎಂದು ಮುಖಂಡರಿಗೆ ಭರವಸೆ ನೀಡಿದರು.


ಮಾರ್ಮಿಕವಾಗಿ ಮಾತನಾಡಿದ ಕುಮಾರಸ್ವಾಮಿಯವರು   ಇಗ್ಗಲೂರು ಡ್ಯಾಮನ್ನು ದೇವೆಗೌಡರು ನಿರ್ಮಿಸದೇ ಹೋಗಿದ್ದರೆ ಕೆರೆಗೆ ನೀರು ಎಲ್ಲಿಂದ ತುಂಬಿಸುತ್ತಿದ್ದರು. ನಾನು ಯಾವ ಗುತ್ತಿಗೆದಾರರ ಬಳಿಯೂ ಕಮಿಷನ್ ಕೇಳುವವನಲ್ಲ, ಒಳ್ಳೆಯ ಕೆಲಸ ಮಾಡಿ ಎಂದೇ ಹೇಳುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ನನ್ನ ‌ಕ್ಷೇತ್ರದ ಹೃದಯವಂತ ಜನರ ಜೊತೆ ಇರುವುದೇ ನನ್ನ ಭಾಗ್ಯ ಎಂದು ಯೋಗೇಶ್ವರ್ ಹೆಸರೇಳದೇ ನಯವಾಗಿ ಟಾಂಗ್ ನೀಡಿದರು.


15 ವರ್ಷಗಳ ನಂತರ ಈ‌ಭವನ ಉದ್ಘಾಟನೆ ಕಂಡಿದೆ. ಶಾಸಕರು, ಸಂಸದರು, ಸಮಾಜ ಕಲ್ಯಾಣ ಇಲಾಖೆ ಅನುದಾನ ಬಳಸಿಕೊಳ್ಳಲಾಗಿದೆ ಎಂದ ಅವರು ಭವನವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ ಎಂದು‌ ಸಲಹೆ ನೀಡಿದರು.


ನಾನು ಕ್ಷೇತ್ರದ ಶಾಸಕನಾದ ಮೇಲೆ ಭವನ ಉದ್ಘಾಟನೆ ಮಾಡಲು ಶ್ರಮ ವಹಿಸಿದ್ದೇನೆ.

ಚುನಾವಣೆ ನಂತರ ರಾಜಕೀಯ ಮುಖ್ಯವಲ್ಲಾ  ಕ್ಷೇತ್ರದ ಮತದಾರ ಅಭಿವೃದ್ಧಿ ಮುಖ್ಯ ಎಂದರು.

ಬಿಜೆಪಿ ಸರ್ಕಾರದ ಕೆಲ ಸಚಿವರ ಜತೆಗೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ

ನಾನು ಯಾವ ಕಾಂಟ್ರಾಕ್ಟರ್ ಬಳಿ‌ ಕಮಿಷನ್ ಹಣ ಕೇಳಿಲ್ಲ ಗುಣಮಟ್ಟದ ಕೆಲಸವಾಗಬೇಕು ಅಷ್ಟೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಜೊತೆ (ಸಿಪಿವೈ) ನಾನು ಇರುತ್ತೇನೆ.

ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ ಎಂದು ಸಚಿವ ಸಿಪಿವೈ ಗೆ ಸಲಹೆ ನೀಡಿದರು.


*ತುಂಬಿದ ಸಭೆಯಲ್ಲಿ ಕಿಸೆ ಕಳ್ಳರ ಕೈಚಳಕ*

ಅಂಬೇಡ್ಕರ್ ಭವನದ ಉದ್ಘಾಟನೆಗೆ ಜನಜಂಗುಳಿಯೇ ಸೇರಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಿಸೆಗಳ್ಳರು, ಶಾಸಕರ ಕಛೇರಿಯ ಸಹಾಯಕ ಜಯಶೀಲಯ್ಯ ನವರ ಪ್ಯಾಂಟ್ ಜೇಬನ್ನು ಬ್ಲೇಡ್ ಮೂಲಕ ಕೊಯ್ದು 30 ಸಾವಿರ ದೋಚಿದರೆ ಪತ್ರಕರ್ತರ ಜೇಬಿನಲ್ಲಿ 23 ಸಾವಿರ ರೂಪಾಯಿ ದೋಚಿದ್ದಾರೆ.


ಶ್ರೀರಾಮುಲು ಅವರು ಈ ಕಾರ್ಯಕ್ರಮಕ್ಕೆ ಬಾರದಿರಲು ಒತ್ತಡ  ಹೇರಿರುವುದು ನನಗೆ ಗೊತ್ತು.  ತಾಲೂಕಿನಾದ್ಯಾಂತ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಹಣ ಬಿಡುಗಡೆಗೆ ಹಾಗೂ ಭವನದ ಉಳಿದ ಕೆಲಸಗಳಗೆ ಹಣ ನೀಡಲು ಒತ್ತಾಯಿಸಿದ್ದು ಸಚಿವ ಶ್ರೀರಾಮುಲು ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಗಣ್ಯರು ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಿದರು .                                        ಸಂದರ್ಭದಲ್ಲಿ ವೇದಿಕೆಯ ಮೇಲೆ  ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೊವಿಂದಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರು ದೊಡ್ಡಿ ಜಯರಾಮು, ಮುಖಂಡ ಹಾಪ್ ಕಾಮ್ಸ್ ದೇವರಾಜು, ಕಸಾಪ ಅಧ್ಯಕ್ಷ ಸಿಂಲಿಂ ನಾಗರಾಜು,ಜಿ.ಪಂ ಮಾಜಿ ಸದಸ್ಯ

ಅಣ್ಣಯ್ಯ, ವಕೀಲ ಕುಮಾರ್,ಶ್ರೀನಿವಾಸ್,ಮುನಿವೆಂಕಟಪ್ಪ,ಸಿದ್ದರಾಜು, ಸಿದ್ದರಾಮಣ್ಣ,ಪಟ್ಲು ಗೋವಿಂದರಾಜು,ಸತೀಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯ ದರ್ಶಿ ದೇವರಾಜು,ತಹಸಿಲ್ದಾರ್ ನಾಗೇಶ್, ಇಓ ಚಂದ್ರು, ನಗರಸಭೆ  ಪೌರಯುಕ್ತ  ಶಿವನಂಕಾರಿಗೌಡ, ಅಭಿಯಂತರ ಶಂಕರೆಗೌಡ, ನಿವೃತ್ತ ತಹಸಿಲ್ದಾರ್ ವೆಂಕಟೇಶಯ್ಯ, ಟಿಎಪಿಎಂಎಸ್ ಅಧ್ಯಕ್ಷೆ , ಜಿಲ್ಲಾಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯ ಶಾಂತಕುಮಾರ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑