Tel: 7676775624 | Mail: info@yellowandred.in

Language: EN KAN

    Follow us :


ಸರಳವಾಗಿ ಆಚರಣೆಗೊಂಡ ಗಣರಾಜ್ಯೋತ್ಸವ

Posted date: 27 Jan, 2021

Powered by:     Yellow and Red

ಸರಳವಾಗಿ ಆಚರಣೆಗೊಂಡ ಗಣರಾಜ್ಯೋತ್ಸವ

ಚನ್ನಪಟ್ಟಣ:ಜ/26/21/ಮಂಗಳವಾರ. ಇಂದು ತಾಲ್ಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ, ಕೋವಿಡ್ ನಿಯಮವನ್ನು ಪಾಲಿಸಿ 72 ನೇ ಗಣರಾಜ್ಯೋತ್ಸವ ಆಚರಣೆ ಗೊಂಡಿತು.

 ಧ್ವಜಾರೋಹಣ ನೆರವೇರಿಸಿ, ಜನತೆಗೆ ಶುಭಾಶಯ ಕೋರಿದ ತಹಶೀಲ್ದಾರ್ ನಾಗೇಶ್ ಅವರು, ಬಹುದೊಡ್ಡ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರು ಸಮಾ ನವಾಗಿ ಬದುಕುವುದೇ ಒಂದು ವಿಶಿಷ್ಟ ಕಲ್ಪನೆಯಾ ಗಿದೆ ಎಂದು ಹೇಳಿದರು.


ಅಂಬೇಡ್ಕರ್ ಸಂವಿಧಾನಕ್ಕೂ ಮೊದಲಿದ್ದ ಮನು ಸಂವಿಧಾನಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಮನು ಸಂವಿಧಾನ ದೇಶದ ಬ್ರಾಹ್ಮಣ ವರ್ಗಕ್ಕೆ ಸೀಮಿತವಾಗಿತ್ತು. ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲಾ ವರ್ಗಗಳು ಮನುಷ್ಯರೇ ಅಲ್ಲ ಎಂಬ ರೀತಿಯಲ್ಲಿ ಅನಾವರಣ ಆಗಿತ್ತು. ವಿಶೇಷವಾಗಿ ಹೆಣ್ಣು ಮಕ್ಕಳು ಮತ್ತು ಶೋಷಿತರು ಶಿಕ್ಷಣದಿಂದ ವಂಚಿತ ರಾಗಿದ್ದರು. ಸಂವಿಧಾನ ಸಮಾಜದ ಎಲ್ಲರನ್ನೂ ಒಗ್ಗೂಡಿಸಿದೆ ಎಂದು ಡಾ ವಿಜಯನರಸಿಂಹ ಹೇಳಿದರು.


ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಚನ್ನಮ್ಮ ನವರು ಸುಧೀರ್ಘವಾಗಿ ಮಾತನಾಡಿ,

1946 ರಲ್ಲಿ ಸಭೆ ಸೇರಿದ ವಿವಿಧ ಸಂಘಟನೆಗಳು ಭಾರತಕ್ಕೆ ಸ್ವಾತಂತ್ರ್ಯದ ಅನಿವಾರ್ಯತೆಯ ಬಗ್ಗೆ ಚರ್ಚಿಸಿ, ಭಾರತಕ್ಕೊಂದು ಗಟ್ಟಿಯಾದ ಸಂವಿಧಾನ ದೊರಕಿದರೆ ಆ ಮೂಲಕ ನಾವು, ನಮ್ಮ ದೇಶವನ್ನು ಸುಭದ್ರವಾಗಿ ಕಟ್ಟಬಹುದು ಎಂದು ಆಲೋಚಿಸಿ, ಚರ್ಚಿಸಲಾಯಿತು. ಆನಂತರ ಮುಸ್ಲಿಂ ಲೀಗ್, ಅದರಿಂದ ಹೊರ ನಡೆಯಿತು ಎಂದರು.


೬೦ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಭಾರತದ ಸಂವಿಧಾನವನ್ನು ರಚಿಸಲಾಯಿತು. ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಈ ಸಂವಿಧಾನಕ್ಕೆ ಒಂದು ದಾರಿ ಸಿಕ್ಕಿತು. ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನ ಗೌರವ, ಇವುಗಳನ್ನು ಅಲ್ಲಿನ ಪ್ರಜೆಗಳಿಗೆ ತಂದು ಕೊಡುವ ದಿಕ್ಕಿನಲ್ಲಿ ಚರ್ಚೆಯಾಯಿತು.


ಸಂವಿಧಾನ ಇಲ್ಲದಿದ್ದರೆ ನಾವೆಲ್ಲರೂ ಗುಲಾಮಿ ಬದುಕನ್ನು ಬದುಕಬೇ ಕಾಗಿತ್ತು. ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ರಜೆಗಳಿಗೆ ಅಧಿಕಾರ ಎಂಬ ಒಂದು ಆಶಯ ಸಂವಿಧಾನದ ಮೂಲಕ ಈಡೇರಿದಂತೆ ಆಗಿದೆ.


ಈವರೆಗೆ ಜನರ ಹಿತಕ್ಕಾಗಿ ಆಡಳಿತ ನಡೆಸುವ ಹಿನ್ನೆಲೆಯಲ್ಲಿ 104 ತಿದ್ದುಪಡಿಗಳಾಗಿ, ಆಮೂಲಕ ಅಧಿಕಾರ, ಹಕ್ಕುಗಳು ಹಂಚಿಕೆಯಾಗಿವೆ. ಸಂವಿಧಾನ ಎಂಬುದು ಮೂಲ ಭೂತ ಶಾಶನ ಅದನ್ನು ಸಶಕ್ತವಾಗಿ ಕಟ್ಟಿಕೊಟ್ಟ, ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಅವರ ಅನುಭವಿ ತಂಡ ನಿಜಕ್ಕೂ ಸ್ಮರಣಾರ್ಹರು ಎಂದರು.


ಪರಿಸರ ಪ್ರೇಮಿ ಡಾ ಮಲವೇಗೌಡ ಸೇರಿದಂತೆ ಹಲವಾರು ಮಂದಿಗೆ ತಾಲ್ಲೂಕು ಆಡಳಿತ ಸನ್ಮಾನಿಸಿ ಗೌರವಿಸಲಾಯಿತು.

ಬಹುತೇಕ ಎಲ್ಲಾ ಗಣ್ಯರ ಗೈರುಹಾಜರಿ ಎದ್ದು ಕಾಣುತ್ತಿತ್ತು.


ಬ್ಯಾಡ್ಜ್ ನಲ್ಲಿ ಡಾ ಅಂಬೇಡ್ಕರ್ ರವರ ಪೋಟೋ ಇಲ್ಲದಿರುವುದನ್ನು ಕೆಲವರು ದೂರಿದರು.


ನಗರಸಭೆಯ ಆವರಣ ದಲ್ಲೂ ರಾಷ್ಟ್ರಧ್ವಜ ಆಚರಿಸುವ ಮೂಲಕ ಗಣ ರಾಜ್ಯೋತ್ಸವ ಆಚರಿಸಲಾಯಿತು. ತಹಶೀಲ್ದಾರ್ ನಾಗೇಶ್, ಪೌರಾಯುಕ್ತ ಶಿವನಂಕಾರಿಗೌಡ, ಇಓ ಚಂದ್ರು,  ಬಿಇಓ ನಾಗರಾಜು ಆ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.


ತಾಲ್ಲೂಕಿನ ಬಹುತೇಕ ಎಲ್ಲಾ ಸರ್ಕಾರಿ ಕಛೇರಿ ಗಳಲ್ಲಿಯೂ ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಪೋಟೋ ಇಟ್ಟು ಧ್ವಜಾ ರೋಹಣ ನೆರವೇರಿ ಸಲಾಯಿತು.

ಅಲ್ಲದೆ ಹಿಂದಿನ ದಿನ ರಾತ್ರಿ ಎಲ್ಲಾ ಕಛೇರಿಗಳನ್ನು ದೀಪಾಲಂಕಾರಗೊಳಿಸಿ, ಗಣ ರಾಜ್ಯೋತ್ಸವದ ಸವಿ ನೆನಪನ್ನು ಹಂಚುವ ಕೆಲಸ ನಡೆದಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑