Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ 16 ಮಹಿಳಾ ಅಧ್ಯಕ್ಷರು. ಇನ್ನೂ ಹೆಚ್ಚಾದರೂ ಆಶ್ಚರ್ಯ ಪಡಬೇಕಾಗಿಲ್ಲ

Posted date: 27 Jan, 2021

Powered by:     Yellow and Red

ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ 16 ಮಹಿಳಾ ಅಧ್ಯಕ್ಷರು. ಇನ್ನೂ ಹೆಚ್ಚಾದರೂ ಆಶ್ಚರ್ಯ ಪಡಬೇಕಾಗಿಲ್ಲ

ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 27 ನೇ ತಾರೀಖಿನಂದು ಚುನಾವಣೆ ನಡೆದು 30 ನೇ ತಾರೀಖಿನಂದು ಫಲಿತಾಂಶ ಹೊರಬಿದ್ದಿತ್ತು. ಚುನಾವಣೆ ನಡೆದು ಒಂದು ತಿಂಗಳಿಗೆ ಸರಿಯಾಗಿ ಇಂದು ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ಸರ್ಕಾರ ಇಂದು ಪ್ರಕಟಿಸಿದೆ.


ತಾಲ್ಲೂಕಿನ ಕೆಂಗಲ್ ನಲ್ಲಿರುವ ಪುಷ್ಪ ಭೈರೇಗೌಡ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರ ನೇತೃತ್ವದಲ್ಲಿ ತಹಶಿಲ್ದಾರ್ ನಾಗೇಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಉಪಸ್ಥಿತಿಯಲ್ಲಿ, ಸಂಪೂರ್ಣ ಕಂಪ್ಯೂಟರ್ ಮುಖಾಂತರ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಮೀಸಲಾತಿ ವಿವರ;


ತಿಟ್ಟಮಾರನಹಳ್ಳಿ: ಹಿಂದುಳಿದ ವರ್ಗ (ಅ) /ಸಾಮಾನ್ಯ ಮಹಿಳೆ.

ಬೇವೂರು: ಹಿಂದುಳಿದ ವರ್ಗ (ಅ) /ಸಾಮಾನ್ಯ ಮಹಿಳೆ.

ತಗಚಗೆರೆ: ಹಿಂದುಳಿದ ವರ್ಗ (ಅ) /ಸಾಮಾನ್ಯ ಮಹಿಳೆ.

ಕೋಡಂಬಳ್ಳಿ: ಹಿಂದುಳಿದ ವರ್ಗ (ಅ) /ಸಾಮಾನ್ಯ ಮಹಿಳೆ.


ಇಗ್ಗಲೂರು: ಹಿಂದುಳಿದ ವರ್ಗ (ಅ) ಮಹಿಳೆ /ಸಾಮಾನ್ಯ.

ಹೊಂಗನೂರು: ಹಿಂದುಳಿದ ವರ್ಗ (ಅ) ಮಹಿಳೆ /ಪ ಜಾ.

ಎಲೆತೋಟದಹಳ್ಳಿ: ಹಿಂದುಳಿದ ವರ್ಗ (ಅ) ಮಹಿಳೆ /ಹಿಂದುಳಿದ ವರ್ಗ (ಬ).

ಭೂಹಳ್ಳಿ: ಹಿಂದುಳಿದ ವರ್ಗ (ಅ) ಮಹಿಳೆ /ಸಾಮಾನ್ಯ.


ವಿರುಪಾಕ್ಷಿಪುರ: ಹಿಂದುಳಿದ ವರ್ಗ (ಬ) /ಪ ಜಾ ಮಹಿಳೆ.

ಮತ್ತಿಕೆರೆ: ಹಿಂದುಳಿದ ವರ್ಗ ಮಹಿಳೆ / ಸಾಮಾನ್ಯ.

ಸುಳ್ಳೇರಿ: ಸಾಮಾನ್ಯ /ಹಿಂದುಳಿದ ವರ್ಗ (ಅ)

ಅಕ್ಕೂರು: ಸಾಮಾನ್ಯ /ಪ ಜಾ ಮಹಿಳೆ.


ಕೂಡ್ಲೂರು: ಸಾಮಾನ್ಯ /ಹಿಂದುಳಿದ ವರ್ಗ (ಅ) ಮಹಿಳೆ.

ಸೋಗಾಲ: ಸಾಮಾನ್ಯ /ಹಿಂದುಳಿದ ವರ್ಗ (ಅ) ಮಹಿಳೆ. 

ಬಾಣಗಹಳ್ಳಿ: ಸಾಮಾನ್ಯ /ಹಿಂದುಳಿದ ವರ್ಗ (ಅ) ಮಹಿಳೆ.

ಹಾರೋಕೊಪ್ಪ: ಸಾಮಾನ್ಯ /ಸಾಮಾನ್ಯ ಮಹಿಳೆ.


ಬಿ ವಿ ಹಳ್ಳಿ: ಸಾಮಾನ್ಯ /ಸಾಮಾನ್ಯ ಮಹಿಳೆ.

ಜೆ ಬ್ಯಾಡರಹಳ್ಳಿ: ಸಾಮಾನ್ಯ /ಸಾಮಾನ್ಯ ಮಹಿಳೆ.

ಮಾಕಳಿ: ಸಾಮಾನ್ಯ ಮಹಿಳೆ /ಸಾಮಾನ್ಯ.

ದಶವಾರ: ಸಾಮಾನ್ಯ ಮಹಿಳೆ / ಪ ಜಾ.


ಮೈಲನಾಯಕನಹಳ್ಳಿ: ಸಾಮಾನ್ಯ ಮಹಿಳೆ / ಹಿಂದುಳಿದ ವರ್ಗ (ಅ).

ಮಂಡ್ಯಬೊಮ್ಮನಾಯಕನಹಳ್ಳಿ: ಸಾಮಾನ್ಯ ಮಹಿಳೆ /ಪ ಜಾ ಮಹಿಳೆ.

ಮುದಗೆರೆ: ಸಾಮಾನ್ಯ ಮಹಿಳೆ /ಪ ಜಾ.

ನೀಲಸಂದ್ರ: ಸಾಮಾನ್ಯ ಮಹಿಳೆ /ಹಿಂದುಳಿದ ವರ್ಗ (ಬ)


ವಂದಾರಗುಪ್ಪೆ: ಸಾಮಾನ್ಯ ಮಹಿಳೆ /ಸಾಮಾನ್ಯ.

ರಾಂಪುರ: ಸಾಮಾನ್ಯ ಮಹಿಳೆ /ಸಾಮಾನ್ಯ.

ನಾಗವಾರ: ಪ ಜಾ /ಹಿಂದುಳಿದ ವರ್ಗ (ಅ) ಮಹಿಳೆ.

ಹೆಚ್ ಬ್ಯಾಡರಹಳ್ಳಿ: ಪ ಜಾ /ಸಾಮಾನ್ಯ ಮಹಿಳೆ.


ಸಿಂಗರಾಜಪುರ: ಪ ಜಾ /ಹಿಂದುಳಿದ ವರ್ಗ (ಅ).

ಮಳೂರು: ಪ ಜಾ ಮಹಿಳೆ /ಸಾಮಾನ್ಯ.

ಮಳೂರುಪಟ್ಟಣ: ಪ ಜಾ ಮಹಿಳೆ /ಹಿಂದುಳಿದ ವರ್ಗ (ಅ).

ಚಕ್ಕೆರೆ: ಪ ಜಾ ಮಹಿಳೆ /ಸಾಮಾನ್ಯ.


ಎಲ್ಲಾ ಮೀಸಲಾತಿ ಪ್ರಕ್ರಿಯೆಯನ್ನು ಭೂಸ್ವಾಧಿನ ಅಧಿಕಾರಿ ಜಯಮಾಧವ ರವರು ಘೋಷಿಸಿದರು. ಪೋಲಿಸ್ ಬಂದೋಬಸ್ತಿನೊಂದಿಗೆ ತಾಲ್ಲೂಕಿನ ಅಧಿಕಾರಿ ವರ್ಗ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑