Tel: 7676775624 | Mail: info@yellowandred.in

Language: EN KAN

    Follow us :


ಸಮಾನ ಮನಸ್ಕರ ತಂಡಕ್ಕೆ ಮತನೀಡಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ

Posted date: 19 Feb, 2021

Powered by:     Yellow and Red

ಸಮಾನ ಮನಸ್ಕರ ತಂಡಕ್ಕೆ ಮತನೀಡಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿ ಶಿಕ್ಷಣ ಸೇವೆಯಿಂದ, ಗುರುತಿಸಿಕೊಂಡು, ಹೆಗ್ಗಳಿಕೆಗೆ ಪಾತ್ರವಾಗಿರುವ ಒಕ್ಕಲಿಗರ ಸಾರ್ವಜನಿಕರ ವಿದ್ಯಾರ್ಥಿ ನಿಲಯದ ಅಭಿವೃದ್ದಿಯ ಹಿತದೃಷ್ಟಿಯಿಂದ, ಸಮಾನ ಮನಸ್ಕರ ತಂಡ ರಚಿಸಿಕೊಂಡು ಈ ಬಾರಿಯ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ. ನಮ್ಮ ತಂಡಕ್ಕೆ ಮತ ನೀಡಿ ಜಯಶೀಲರನ್ನಾಗಿ ಮಾಡಿದರೆ ಇಡೀ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ನಿವೃತ್ತ ಉಪನ್ಯಾಸಕ ಡಿ ಪುಟ್ಟಸ್ವಾಮಿ (ಡಿಪಿಎಸ್) ಮಾಧ್ಯಮದ ಮೂಲಕ ಮತದಾರರಿಗೆ ಮನವಿ ಮಾಡಿದರು.

ಅವರು ನಗರದ ಮಹದೇಶ್ವರ ನಗರದ ಬಳಿ ಇರುವ ದಿವ್ಯಚೇತನ ಕಾಂಪ್ಲೆಕ್ಸ್  ನಲ್ಲಿ ಸಮಾನ ಮನಸ್ಕರ ತಂಡ ಕರೆದಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ವಿದ್ಯಾದಾನ ಮಾಡುತ್ತಾ, ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಿರುವ, ತಾಲ್ಲೂಕಿನ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಇಂದಿಗೂ ಕೂಡ ಉಜ್ವಲಗೊಳ್ಳದಿರುವುದು. ದುರದೃಷ್ಠಕರ ವಿಚಾರವಾಗಿದ್ದು, ಹಲವಾರು ವರ್ಷಗಳಿಂದ ಸಂಸ್ಥೆಯು ಇದ್ದ ಸ್ಥಿತಿಯಲ್ಲೇ ಇರುವುದು,ದೊಡ್ಡ ದುರಂತವಾಗಿದೆ. ವಿದ್ಯಾದಾನದ ಸಂಸ್ಥೆಯನ್ನು ಅಭಿವೃದ್ದಿಪಡಿಸುವ ಹಿತದೃಷ್ಟಿಯಿಂದ, ಸಮಾನ ಮನಸ್ಕರ ತಂಡದ 15 ಮಂದಿ, ಸ್ಪರ್ಧೆ ಬಯಸಿದ್ದು, ಮತದಾರರು ಆಶೀರ್ವಾದ ಮಾಡಬೇಕೆಂದರು.

   ಐದು ದಶಕಗಳನ್ನು ಪೂರೈಸಿರುವ, ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು, ಸುಸಜ್ಜಿತವಾದ ಕಟ್ಟಡ ನಿರ್ಮಾಣದ ಜೊತೆಗೆ, ಸಂಸ್ಥೆಯಲ್ಲಿ ಉನ್ನತ ಮಟ್ಟದ ಕಾಲೇಜು ಶಿಕ್ಷಣಕ್ಕೆ ಹೆಚ್ಚು ಒತ್ತು ಹಾಗೂ ಐ.ಎ.ಎಸ್.ಐಪಿ.ಎಸ್. ಐಎಪ್ಎಸ್ ,      ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ, ನುರಿತ ಅದ್ಯಾಪಕವರ್ಗದವರಿಂದ ಉಚಿತ ತರಬೇತಿ, ನೀಟ್ ಪರೀಕ್ಷೆ ಎದುರಿಸಲು ತರಬೇತಿಗಳನ್ನು ನೀಡಲು ತರಗತಿಗಳನ್ನು ಪ್ರಾರಂಭ ಮಾಡಿಸುವುದಾಗಿ ತಿಳಿಸಿದರು.


ವಿಶ್ವಮಾನವ ಇಂಗ್ಲೀಷ್ ಶಾಲೆಯ ಸಂಸ್ಥಾಪಕರಾದ ವೆಂಕಟರಾಮೇಗೌಡ ಮಾತನಾಡಿ, ರಾಜ್ಯದಲ್ಲೇ ಪ್ರಸಿದ್ದಿ ಪಡೆದ, ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯಗಳ ಸಾಲಿನಲ್ಲಿ, ಚನ್ನಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯವು ಒಂದಾಗಿರುವುದು ಹೆಮ್ಮೆಯ ವಿಚಾರವಾಗಿದೆ, ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ ನಾವು, ಸಂಸ್ಥೆಯನ್ನು ಅಭಿವೃದ್ದಿ ಮಾಡಬೇಕೆಂಬ ಛಲದಿಂದ ಈ ಭಾರಿಯ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ, ಸಮಾನ ಮನಸ್ಕರ ತಂಡದ ಚಿಂತನೆಯ ಫಲವಾಗಿ, 15 ಮಂದಿ ಸ್ಪರ್ಧೆ ಮಾಡುತ್ತಿದ್ದು, ಅಭಿವೃದ್ದಿಯ ಹಂಬಲ ಹೊತ್ತವರಿಗೆ, ಮತದಾರರು ಆಶೀರ್ವಾದ ಮಾಡಬೇಕೆಂದರು.


ನಿವೃತ್ತ ರೈಲ್ವೇ ಉಪ ನಿರೀಕ್ಷಕ ರಾಂಪುರ ಮಲ್ಲೇಶ್ ಮಾತನಾಡಿ ಕಳೆದ ಐವತ್ತು ವರ್ಷ ಗಳಿಂದಲೂ ಸಂಸ್ಥೆಯು ಕುಂಟುತ್ತ ಸಾಗಿದೆ ಇದುವರೆಗೂ ಇದ್ದ ಆಡಳಿತ ಮಂಡಳಿಯು ಸಂಸ್ಥೆಯನ್ನು ಅಭಿವೃದ್ದಿಯತ್ತ ಕೊಂಡೊಯ್ಯದೆ  ವಿನಃ ಕಾರಣ ಕಾಲಹರಣ ಮಾಡಿದ್ದಾರೆ. ನಮ್ಮ ತಂಡಕ್ಕೆ ಮತ ನೀಡಿ ಜಯಶಾಲಿಗಳಾನ್ನಾಗಿ ಮಾಡಿದರೆ ಸಂಸ್ಥೆಯ ಸಮಗ್ರ ಅಭಿವೃದ್ದಿಗಾಗಿ  ಮತ್ತು ಒಳಿತಿಗಾಗಿ ಶ್ರಮಿಸುವುದಾಗಿ

ತಿಳಿಸಿದ ಅವರು ಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ತರಗತಿಗಳನ್ನು ತೆರೆಯುವ ಮೂಲಕ ಈ ಶಿಕ್ಷಣ ಸಂಸ್ಥೆಯನ್ನು ಕಡಿಮೆ ಅವಧಯಲ್ಲಿ ಇಡಿ ಜಿಲ್ಲೆಯಲ್ಲೇ ಉನ್ನತ ಶ್ರೆಣಿಗೆ ಕೊಂಡೊಯ್ಯುತ್ತೆವೆಂದು ಭರವಸೆ ನೀಡಿದರು.


ಖಾಸಗಿ ಶಿಕ್ಷಣ ಸಂಸ್ಥೆಯವರು ಕೂಡ ಬಡಮಕ್ಕಳ ವಿದ್ಯಾಸಂಸ್ಥೆಯಾಗಿರುವ, ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದು,ಅನುಮಾನಕ್ಕೆ ಕಾರಣವಾಗಿದೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದರು, ಈ ಸಂದರ್ಭದಲ್ಲಿ ಉತ್ತರ ನೀಡಿದ ದಿವ್ಯಚೇತನ ಆಂಗ್ಲ ಪ್ರೌಢಶಾಲೆಯ ಸಂಸ್ಥಾಪಕ ಕಾರ್ಯಧರ್ಶಿ ವರದರಾಜು, ಪಟೇಲ್ ಆಂಗ್ಲ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ರಾಜು ಹಾಗೂ ವಿಶ್ವಮಾನವ ಆಂಗ್ಲಶಾಲೆಯ ವೆಂಕಟೇಗೌಡ, ಈ ವಿಚಾರದಲ್ಲಿ ನಾವು ಬದ್ದರಾಗಿದ್ದು, ಇದೇ ಶಾಲೆಯಲ್ಲಿ ಓದಿದ ನಾವು, ಖಾಸಾಗಿ ಶಾಲೆಗಳನ್ನು ನಿರ್ಮಾಣ ಮಾಡಿಕೊಂಡಿದ್ದೇವೆ, ನಾವು ಅಭಿವೃದ್ದಿ ಆಗಿದ್ದೇವೆಯೇ ಹೊರತು, ನಮಗೆ ವಿದ್ಯಾದಾನ ಮಾಡಿದ ಶಾಲೆಯನ್ನು ಅಭಿವೃದ್ದಿ ಮಾಡಬೇಕೆಂಬ ದೃಷ್ಟಿಯಿಂದ, ನಾವು ಈ ರೀತಿಯ ಅವಕಾಶಗಳನ್ನು ಉಪಯೋಗಿಸಿಕೊಂಡಿದ್ದೇವೆ, ಇದರಲ್ಲಿ ಯಾವ ದುರುದ್ದೇಶವೂ ಇಲ್ಲ ಎಂದು ಸ್ವಷ್ಟಪಡಿಸಿದರು.

ತಾಲ್ಲೂಕಿನಾದ್ಯಂತ ಇರುವ ಮತದಾರರು ನಮ್ಮ ತಂಡಕ್ಕೆ ಒಲವು ತೊರುತ್ತಿದ್ದಾರೆ ನಮ್ಮ ತಂಡವು ಗೆಲ್ಲುವ ವಿಶ್ವಾಸ ನಮಗಿದೆಯೆಂದು ತಿಳಿಸಿದರು.


ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯವು  ಬೃಹತ್ ಶಿಕ್ಷಣ ಸಂಸ್ಥೆಯಾಗಿದ್ದು ಕನಿಷ್ಟ 50 ವರ್ಷ ಗಳ ಇತಿಹಾಸದಲ್ಲಿ ಕನಿಷ್ಟ ಅಭಿವೃದ್ದಿ ಹೊಂದಿದೆ ನಾವುಗಳು ಅಧಿಕಾರಕ್ಕೆ ಬಂದರೆ  ಖಾಸಗಿ ಶಾಲೆಯಲ್ಲಿ ದೊರೆಯುವ ಎಲ್ಲ ಸೌಕರ್ಯ ಗಳನ್ನು ಹಾಗೂ ಆಂಗ್ಲ ಮಾಧ್ಯಮದ ಮೂಲಕ ಎಲ್ ಕೆಜಿ, ಯುಕೆಜಿ ಮೂಲಕ ಹೆಚ್ಚಿನ ವಿದ್ಯಭ್ಯಾಸ ಕಲ್ಪಿಸಿ,

ಉನ್ನತ ದರ್ಜೆ ಗೆ ಸಂಸ್ಥೆಯನ್ನು ಕೊಂಡೊಯ್ಯಲಾಗುವುದು. ಎಂದು ತಿಳಿಸಿದರು.


ಪತ್ರಿಕಾ ಗೋಷ್ಠಿಯಲ್ಲಿ ಸಮಾನ ಮನಸ್ಕರ ತಂಡದ ಅಭ್ಯರ್ಥಿಗಳಾದ ಕುಮಾರ್.ಕೆ. ಚಂದ್ರಯ್ಯ.ವಿ.ಬಿ, ಟೈಲರ್ ರಾಮಚಂದ್ರು, ಜಯಪ್ರಕಾಶ್, ಪುಟ್ಟರಾಜು ಹೆಚ್.ಎಸ್, ರಮೇಶ್, ಬಿ.ಜಿ., ರವಿ.ಎನ್, ರಾಮಚಂದ್ರ,  ಶಿವಕುಮಾರ್, ಶಿವಣ್ಣ ಹಾಗೂ ಹಲವಾರು ಮುಖಂಡರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


*(ಕೋಟಿ ಕೋಟಿ ಲೂಟಿ ಮಾಡಿದೆಯೇ, ಹಿಂದಿನ ಆಡಳಿತ ಮಂಡಳಿ !?)*

*ಹೀಗೊಂದು ಚರ್ಚೆ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ನಿರ್ದೇಶಕ ಸ್ಥಾನದ ಆಕಾಂಕ್ಷಿತ ಅಭ್ಯರ್ಥಿಗಳು, ತೆರೆಮರೆಯಲ್ಲಿ ಚರ್ಚೆ ಮಾಡುತ್ತಿದ್ದು. ನಮ್ಮ ತಂಡ ಗೆಲುವು ಸಾಧಿಸಿದರೆ ಈ ಹಗರಣವನ್ನು ಬಯಲಿಗೆಳೆಯುವುದಾಗಿ ಮತದಾರರ ಬಳಿ ಹೇಳಿಕೊಳ್ಳುತ್ತಿದ್ದಾರೆ.*

*ನಾಲ್ಕು ದಶಕಗಳು ಆಳಿದ ತಂಡವು ಅಧಿಕಾರಕ್ಕಾಗಿ ಕೆಲಸ ಮಾಡಿತೇ ವಿನಹ ಅಭಿವೃದ್ಧಿ ಮಾಡಿಲ್ಲ. ಕಳೆದ ಅವಧಿಯಲ್ಲಿ ಅಧಿಕಾರ ನಡೆಸಿದ ಅಧ್ಯಕ್ಷರಾದಿಯಾಗಿ ಬಹುತೇಕ ಎಲ್ಲಾ ನಿರ್ದೇಶಕರುಗಳು ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ಕೋಟ್ಯಂತರ ರೂಪಾಯಿ ಹಣ ಲಪಟಾಯಿಸಿರುವುದಾಗಿ ದೂರು ಕೇಳಿ ಬರುತ್ತಿದೆಯಾದರೂ, ಯಾವ ಅಭ್ಯರ್ಥಿಗಳು ಸಹ ನೇರವಾಗಿ ಆರೋಪ ಮಾಡದಿರುವುದು ಗೊಂದಲಕ್ಕೆಡೆ ಮಾಡಿದೆ.)*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑