Tel: 7676775624 | Mail: info@yellowandred.in

Language: EN KAN

    Follow us :


ಪ್ರೊ|| ದೊಡ್ಡಅರಸಿನಕೆರೆ ಮಾಯಪ್ಪ ಅವರಿಗೆ ಅಭಿನಂದನೆ ಮತ್ತು ವಾಕ್ ಪ್ರಭೆ ಗೌರವ ಗ್ರಂಥ ಬಿಡುಗಡೆ

Posted date: 21 Feb, 2021

Powered by:     Yellow and Red

ಪ್ರೊ|| ದೊಡ್ಡಅರಸಿನಕೆರೆ ಮಾಯಪ್ಪ ಅವರಿಗೆ   ಅಭಿನಂದನೆ ಮತ್ತು ವಾಕ್ ಪ್ರಭೆ ಗೌರವ ಗ್ರಂಥ ಬಿಡುಗಡೆ

ರಾಮನಗರ:ಫೆ/20/21/ಶನಿವಾರ. ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೊಡ್ಡ ಅರಸಿನಕೆರೆ ಮಾಯಪ್ಪನವರ   ವಾಕ್ ಪ್ರಭೆ ಗೌರವ ಕೃತಿಯನ್ನು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಬಿಡುಗಡೆ ಮಾಡಿದರು.


ಗ್ರಂಥ ಬಿಡುಗಡೆಯ ನಂತರ ಸಹಕಾರ ಸಚಿವರು ಮಾತನಾಡಿ ಮಾಯಪ್ಪ ಅವರ‌ ವಾಕ್ ಚಾತುರ್ಯ , ಜನಪದ ಮಾತುಗಳು, ಮಾತನಾಡುವ ಕಲೆ ಮತ್ತು ಭಾಷಣಗಳು ನನ್ನನು ಅವರ ಅಭಿಮಾನಿಯಾಗುವಂತೆ  ಮಾಡಿದೆ ಎಂದರು.


ಮಾಯಣ್ಣ ಅವರು ನಾನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡುವುದನ್ನು ಗಮನಿಸಿ ಯಾವುದಾದರೂ ತಪ್ಪುಗಳು ಇದ್ದ ಸಂದರ್ಭದಲ್ಲಿ ತಿದ್ದುಕೊಳ್ಳುವಂತೆ ತಿಳಿಸುತ್ತಾರೆ. ಮಾಯಪ್ಪ ಅವರು ನನಗೆ   ಭಾಷಣಗಳನ್ನು ಮಾಡುವ ಕಲೆಯನ್ನು ಕಲಿಸಿದ್ದಾರೆ. ನನ್ನ ವಾಕ್ ಚಾತುರ್ಯ ಅವರಿಂದ ಉತ್ತಮವಾಗಿದೆ ಎಂದರು


ಮೈಸೂರಿನ ಮೃಗಾಲಯದಲ್ಲಿ ಕೋವಿಡ್ ಸಂದರ್ಭದಲ್ಲಿ ಪ್ರಾಣಿಗಳಿಗೆ  ಆಹಾರ ಕೊರತೆ ಉಂಟಾದ ಸಂದರ್ಭದಲ್ಲಿ  3 ರಿಂದ 4 ಕೋಟಿ ಹಣ ಸಂಗ್ರಹಿಸಿ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾಯಣ್ಣ ಅವರು ಸಹ ತಮ್ಮ  ಬಡಾವಣೆಯಲ್ಲಿ ಹಣ ಸಂಗ್ರಹಿಸಿ ನೀಡಿದರು. ಇದರ ಜೊತೆಯಲ್ಲಿ ಅವರು ಬರೆದಂತಹ ಸಾಲನ್ನು ಮೈಸೂರು ಮೃಗಾಲಯದಲ್ಲಿ ಅನಾವರಣಗೊಳಿಸಲಾಗಿದೆ. ಇದರ ಮುಂದೆ ಪ್ರವಾಸಿಗರು ನಿಂತು ಭಾವಚಿತ್ರ ತೆಗೆದುಕೊಳ್ಳುವುದು ಹೆಮ್ಮೆಯ ವಿಷಯ ಎಂದರು.


ವಿದ್ಯಾಭ್ಯಾಸದ ನಂತರ ಪಟ್ಟಣ ಸೇರುವ ಜನ ತಮ್ಮ ಗ್ರಾಮವನ್ನು ಮರೆಯುತ್ತಾರೆ.ಆದರೆ ಮಾಯಣ್ಣ ಅವರು ತಮ್ಮ ಹುಟ್ಟೂರನ್ನು ಮರೆತಿರುವುದಿಲ್ಲ ಅಲ್ಲಿಗೆ ಬೇಕಿರುವ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದರು.


ನಿವೃತ್ತಿಯ ನಂತರವು ಕೂಡ ಮಾಯಣ್ಣ ಅವರು ಸೃಜನಾತ್ಮಕ ಚಟುವಟಿಕೆಗಳು ಕುಂದದಂತೆ ಅವರಿಗೆ  ಸರ್ಕಾರದಿಂದ ಎಲ್ಲಾ ಸವಲತ್ತುಗಳನ್ನು ನೀಡಲು ಸರ್ಕಾರದ ಗಮನಕ್ಕೆ ತರಲು ಚಿಂತನೆ ಮಾಡಿದ್ದೇನೆ. ಅವರ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಸಚಿವರು ಹಾರೈಸಿದರು. 


ಕಾರ್ಯಕ್ರಮದಲ್ಲಿ  ಚಿಂತಕ ಪಾವಗಡ ಪ್ರಕಾಶ, ಮಾಗಡಿ ಶಾಸಕ ಎ,ಮಂಜುನಾಥ್, ವಿಧಾನ ಪರಿಷತ್ತಿನ ಮಾಜಿ ಶಾಸಕ ಲಿಂಗಪ್ಪ ಹಾಗೂ ಅಪ್ಪಾಜಿ ಗೌಡ ಅವರು ಪುರಸಭೆ ಉಪಾಧ್ಯಕ್ಷೆ ಸರಸ್ವತಿ ಮತ್ತು ಪ್ರೊ|| ಮಾಯಪ್ಪ ನವರ ಬಂಧು ಮಿತ್ರರು ಉಪಸ್ಥಿರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑