Tel: 7676775624 | Mail: info@yellowandred.in

Language: EN KAN

    Follow us :


ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

Posted date: 17 Mar, 2021

Powered by:     Yellow and Red

ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

ಕೋವ್ಯಾಕ್ಷಿನ್ ಲಸಿಕೆ ಪಡೆಯುವದರಿಂದ ಯಾವುದೇ ಅಡ್ಡಪರಣಾಮಗಳಾಗುವುದಿಲ್ಲ. ನಲವತ್ತೈದು ವರ್ಷ ತುಂಬಿದ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ತಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು. ಕೆಲ ಖಾಸಗಿ ಆಸ್ಪತ್ರೆ ಗಳಲ್ಲೂ

ಲಸಿಕೆ ಲಭ್ಯವಿದ್ದು, ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ತಿಳಿಸಿದರು.

ಅವರು ಇಂದು ಪ್ರಪ್ರಥಮವಾಗಿ ನಗರಕ್ಕೆ ಭೇಟಿ ನೀಡಿದ್ದು, ಮೊದಲಿಗೆ ತಹಶಿಲ್ದಾರ್ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು.


ಕೋವ್ಯಾಕ್ಸೀನ್ ಲಸಿಕೆ ಪಡೆದುಕೊಳ್ಳಲು ಬಂದಿದ್ದವರ ಹಾಗೂ ಲಸಿಕೆ ಪಡೆದುಕೊಂಡು ವಿಶ್ರಮಿಸುತ್ತಿದ್ದವರನ್ನ ಮಾತನಾಡಿಸಿ ಲಸಿಕೆ ಬಗ್ಗೆ ಆತಂಕ ಬೇಡ, ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರವುದಿಲ್ಲ, ಲಸಿಕೆ ಪಡೆದುಕೊಂಡ ನಂತರ ಅರ್ಧ ತಾಸು  ವಿಶ್ರಮಿಸಿ, ಯಾವುದೇ ತೊಂದರೆ ಇಲ್ಲವೆಂದ ಮೇಲೆಯೇ ತಾವು ಆಸ್ಪತ್ರೆಯಿಂದ ಹೋಗಿ ಎಂದು ಲಸಿಕೆ ತೆಗೆದುಕೊಂಡವರಿಗೆ ಕಿವಿಮಾತು ಹೇಳಿದರು.


ಆಸ್ಪತ್ರೆಯ ಆಗುಹೋಗುಗಳ ಬಗ್ಗೆ ಅಧೀಕ್ಷಕ ಡಾ ವಿಜಯನರಸಿಂಹ, ತಾಲ್ಲೂಕು ವೈದ್ಯಾಧಿಕಾರಿ ರಾಜು ರವರು ಜಿಲ್ಲಾಧಿಕಾರಿ ಯವರಿಗೆ ಮನವಿ ಮಾಡಿಕೊಟ್ಟರು. ಐಸಿಯು, ಕೋವ್ಯಾಕ್ಷಿನ್ ಕೇಂದ್ರ, ಓಪಿಡಿಯನ್ನಷ್ಟೇ ಪರೀಶೀಲಿಸಿದ ಅವರು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು.


ಶವಾಗಾರ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚೀಕೆಯಾಗಿದೆ, ಶವಾಗಾರ ಮತ್ತು ಆಸ್ಪತ್ರೆಯ ಹೊರಾಂಗಣವನ್ನು ಒಮ್ಮೆ ನೋಡಿ ಎಂದ ಪತ್ರಕರ್ತರ ಪ್ರಶ್ನೆಗೆ ಸ್ಪಂದಿಸಿದ ಅವರು ಶವಾಗಾರ, ಅದರ ಹಿಂಭಾಗ ಗುಡ್ಡೆ ಹಾಕಿರುವ ಬಯೋ ಮೆಡಿಕಲ್ ಮತ್ತಿತರ ಕಸದ ರಾಶಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ಭೇಟಿ ವೇಳೆಗೆ ಎಲ್ಲವೂ ಸರಿ ಇರಬೇಕು ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಯಾವ್ಯಾವ ಕಸ ಎಲ್ಲಿ, ಹೇಗೆ ವಿಲೇವಾರಿ ಮಾಡಬೇಕು ಎಂಬುದನ್ನು ಸೂಚಿಸಿದ ಅವರು ನಗರಸಭೆಯ ಅಧಿಕಾರಿಗಳ ಬಳಿ ಚರ್ಚಿಸಿ ಎಂದರು.


ಆಸ್ಪತ್ರೆಯ ಬಾಗಿಲಲ್ಲಿ ಕುಳಿತಿದ್ದ ಹೊರ ರೋಗಿಗಳನ್ನು ಇಲ್ಲಿ ಕುಳ್ಳಿರಿಸಿರುವುದು ಏಕೆ ಎಂದು ವೈದ್ಯರನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಒಳಗೆ ಕ್ಲೀನಿಂಗ್ ನಡೆಯುತ್ತಿದೆ ಎಂದು ಹೇಳಿದ ಡಾ ವಿಜಯನರಸಿಂಹ ರವರಿಗೆ, ಸೂಕ್ಷ್ಮವಾಗಿ ಗದರಿದ ಅವರು, ಎಲ್ಲಾ ರೋಗಿಗಳು ಒಳಗಡೆಯೇ ಕೂರಬೇಕು. ಇಲ್ಲಾ ಹೊರಗಡೆ ಕುರ್ಚಿಗಳನ್ನು ಹಾಕಿಸಿ ಕುಳ್ಳಿರಿಸಿ. ನೆಲದ ಮೇಲೆ ಏಕೆ ಕೂರುಸುತ್ತೀರಿ ಎಂದು ಪ್ರಶ್ನಿಸಿದರು.


ಪೋಲಿಸ್ ತರಬೇತಿ ಕೇಂದ್ರದ ಪೋಲೀಸರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಪಡೆದುಕೊಂಡರು. ನಂತರ ತಾಲ್ಲೂಕಿನ ಕೂರಣಗೆರೆ, ಹೊಂಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವ್ಯಾಕ್ಷಿನ್ ಲಸಿಕಾ ಕೇಂದ್ರಗಳನ್ನು ಪರಿಶೀಲಿಸಿದರು. ತಹಶಿಲ್ದಾರ್ ನಾಗೇಶ್ ಹಾಜರಿದ್ದರು.



ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑