Tel: 7676775624 | Mail: info@yellowandred.in

Language: EN KAN

    Follow us :


ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ

Posted date: 19 Mar, 2021

Powered by:     Yellow and Red

ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ

ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಶ್ರೀ ಕರಿತಿಮ್ಮಪ್ಪಸ್ವಾಮಿ ಕಲಾಬಳಗದ ವತಿಯಿಂದ ಮಾ.20ರ ಶನಿವಾರ ರಾತ್ರಿ ಶ್ರೀಕೃಷ್ಣ ಸಂಧಾನ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಬಳಗದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗ್ರಾಮದ ವಿ.ವೆಂಕಟಪ್ಪ ಬಯಲು ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದ್ದು, ಕೆಪಿಎಸ್‍ಸಿ ಸದಸ್ಯ ರಘುನಂದನ್ ರಾಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಟಿ.ಕೆ.ಯೋಗೇಶ್(ಪಾಪು) ಉದ್ಘಾಟಿಸಲಿದ್ದು, ಜಿಪಂ ಮಾಜಿ ಸದಸ್ಯ ಟಿ.ಪಿ.ಪುಟ್ಟಸಿದ್ದೇಗೌಡ ಘನ ಉಪಸ್ಥಿತಿ ವಹಿಸಲಿದ್ದಾರೆ. ತಹಸೀಲ್ದಾರ್ ಎಲ್. ನಾಗೇಶ್, ಡಿವೈಎಸ್‍ಪಿ ರಮೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್, ಗ್ರಾಮಾಂತರ ಪಿಎಸ್‍ಐ ಎಚ್.ಎಂ.ಶಿವಕುಮಾರ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.


ತಾಪಂ ಮಾಜಿ ಅಧ್ಯಕ್ಷ ಬಿ.ನಾಗೇಶ್, ಮಾಜಿ ಗ್ರಾಪಂ ಅಧ್ಯಕ್ಷರಾದ ಟಿ.ಪಿ.ಹನುಮಂತಯ್ಯ, ಕೃಷ್ಣಪ್ಪ, ಮುಖಂಡರಾದ ಪರಮಶಿವಯ್ಯ, ನಿಂಗೇಗೌಡ (ಎನ್‍ಜಿ), ಟಿ.ಕೆ.ನಾಗರಾಜು, ಮೊಡ್ಡೆ ಬೋರೇಗೌಡ, ಬಿ.ಸಿದ್ದೇಗೌಡ, ಪಿ.ಸಿದ್ದೇಗೌಡ, ಚಿಕ್ಕರಾಜು, ಕೃಷ್ಣಪ್ಪ, ಶಿವಣ್ಣ, ಟಿ.ಪಿ.ಪ್ರಕಾಶ್, ರವೀಶ್, ಟಿ.ಎಲ್ ಮಂಜುನಾಥ್, ಟಿ.ಎಲ್‍ರಾಜು, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್ ಸೇರಿದಂತೆ ಊರಿನ ಹಲವು ಹಿರಿಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಗ್ರಾಮದ ಎಲ್ಲಾ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಈ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದು, ಖ್ಯಾತ ನಿರ್ದೇಶಕ ಆಶೋಕಪ್ರಭು ನಾಟಕವನ್ನು ನಿರ್ದೇಶನ ಮಾಡಿದ್ದಾರೆ.


32 ವರ್ಷಗಳ ನಂತರ, ಗ್ರಾಮದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿರುವುದು ವಿಶೇಷವಾಗಿದ್ದು, ಹಲವು ಹಿರಿಯ ಮತ್ತು ಕಿರಿಯ ಕಲಾವಿದರು ನಾಟಕ ಪ್ರದರ್ಶನ ನಡೆಸಿಕೊಡಲಿದ್ದಾರೆ. ಈ ನಾಟಕ ಪ್ರದರ್ಶನಕ್ಕೆ ತಾಲೂಕಿನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಕಲಾಬಳಗದ ಸದಸ್ಯರು ಮನವಿ ಮಾಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑