Tel: 7676775624 | Mail: info@yellowandred.in

Language: EN KAN

    Follow us :


ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ

Posted date: 20 Mar, 2021

Powered by:     Yellow and Red

ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ

ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಈ ಬಾರಿ ಸದರಿ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು  ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.


ಅವರು ಇಂದು ಆಯೋಜಿಸಲಾಗಿದ್ದ, *ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ* ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಬಹಳಷ್ಟು ಸಮಸ್ಯೆಗಳನ್ನು ಆನ್‌ಲೈನ್ ನಲ್ಲಿ ಪರಿಹರಿಸಬೇಕಿರುತ್ತದೆ. ಇದಕ್ಕೆ ಸಮಯಾವಕಾಶ ಬೇಕಿರುತ್ತದೆ ಎಂದರು.


*ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ:* ಚರ್ಚೆಯಿಂದ ಪ್ರಯೋಜನವಿಲ್ಲ. ಜಿಲ್ಲಾಧಿಕಾರಿಗಳು ಬಂದರೂ ಹೋದರು ಎನ್ನುವ ರೀತಿಯಾಗಬಾರದು‌. ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ ಅದರ ಆಧಾರದ ಮೇಲೆ ಅಧಿಕಾರಿಗಳು ಕೈಗೊಳ್ಳುವ ಕ್ರಮದ ಬಗ್ಗೆ ಆದೇಶಿಸಲಾಗುವುದು ಎಂದರು.


*ಇಂಡಿಕರಣ ಹಾಗೂ ಪೋಡಿಗೆ ಸ್ಥಳದಲ್ಲೇ ಕಚೇರಿ ಮಾಡಿದ ಜಿಲ್ಲಾಧಿಕಾರಿಗಳು:* ಗ್ರಾಮದಲ್ಲಿ ಬಹಳಷ್ಟು ಜನರು ಪೌತಿ ಖಾತೆ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಮನವಿ ಸಲ್ಲಿಸಿದರು. ದೊಡ್ಡಮಣ್ಣುಗುಡ್ಡೆ ಸರ್ವೆ ನಂ 1 ಕ್ಕೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆಯಿಂದ ಯಾವುದೇ ವಿವಾದವಿಲ್ಲ. ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಸ್ಥಳ ಹಸ್ತಾಂತರ ಮಾಡಲು ಕಡತವನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕಡತ ಬಂದ ನಂತರ ಡಿನೊಟೀಫಿಕೇಷನ್ ಮಾಡಿ ಕಂದಾಯ ದಾಖಲೆಗಳಲ್ಲಿ ದುರಸ್ತಿ ಮಾಡುವುದು, ಖಾತೆಗೆ ಹೆಸರು ಸೇರಿಸುವ ಕೆಲಸ ಮಾಡಲಾಗುವುದು ಎಂದರು.


 ಈ ಹಿನ್ನಲೆಯಲ್ಲಿ ರೈತರಿಂದ ಸರ್ಕಾರ ವಿಧಿಸಿರುವ ಮಾನದಂಡದಂತೆ ರಾಮನಗರ ತಹಶೀಲ್ದಾರ್  ಕಚೇರಿ ಸಿಬ್ಬಂದಿಗಳು ದಾಖಲೆ ಸಂಗ್ರಹಿಸಲು ಇಂದಿನಿಂದಲೇ ಪ್ರತಿ ರೈತರಿಗೆ ಪ್ರತ್ಯೇಕ ಕಡತ ತೆರೆಯುವಂತೆ ತಿಳಿಸಿ‌, ಹೊಸ ಕಡತವನ್ನು ಸ್ಥಳಕ್ಕೆ ತರಿಸಿದರು. ರೈತರಿಗೆ ತಮ್ಮ ಬಳಿ ಇರುವ ಸಾಗುವಳಿ ಚೀಟಿ ಹಾಗೂ ಇತರೆ ದಾಖಲೆಗಳ ಮೂಲ ಪ್ರತಿಯನ್ನು ನೀಡಬಾರದು. ಜೆರಾಕ್ಸ್ ಪ್ರತಿಯನ್ನು ನೀಡುವಂತೆ ಸೂಚನೆ ನೀಡಿದರು.

ದಾಖಲೆಗಳನ್ನು ಸಂಗ್ರಹಿಸಿ ನೈಜತೆಯನ್ನು ಪರಿಶೀಲಿಸಿ ಸಿದ್ದಪಡಿಸಿ ಇಟ್ಟಿಕೊಂಡರೆ. ಡಿ ನೋಟಿಫಿಕೇಷನ್ ಆದ ತಕ್ಷಣ ಕ್ರಮವಹಿಸಬಹುದು ಎಂದು ತಹಶೀಲ್ದಾರ್ ಗೆ ತಿಳಿಸಿದರು.


*ಕಂದಾಯ ಗ್ರಾಮ:* ಗ್ರಾಮದಲ್ಲಿ 100 ಕುಟುಂಬವಿದ್ದು, 250 ಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರವಾದ ತಕ್ಷಣ ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗುವುದು.   ಇ-ಖಾತೆ ಒದಗಿಸಲಾಗುವುದು. ಗ್ರಾಮದಲ್ಲಿ, ಶಾಲೆ, ಡೈರಿ, ಸಮುದಾಯಭವನ ಮತ್ತಿತರ ಅವಶ್ಯಕತೆ ಯ ಬಗ್ಗೆ ಚರ್ಚೆ ನಡೆಸಿ ಯೋಜನೆ ಸಿದ್ದಪಡಿಸಿಕೊಳ್ಳುವಂತೆ ತಿಳಿಸಿದರು.


*ಅರ್ಜಿ ನೀಡಲು ಬಂದವರಿಗೆ ಲಸಿಕೆ ಜಾಗೃತಿ:* ಅರ್ಜಿ ಸಲ್ಲಿಸಲು ಬಂದ ಬಹಳಷ್ಟು ಗ್ರಾಮಸ್ಥರು ವಯಸ್ಸಾದವರಾಗಿದ್ದು, ಅವರಿಗೆ ಅರ್ಜಿ ಸಲ್ಲಿಸಲು ಬಂದ ಸಂದರ್ಭದಲ್ಲಿ ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆ ಮಾಡಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಯಸ್ಸಿನ ಹಾಗೂ  ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ವಿಚಾರಿಸಿ, ಪಡೆಯದಿದ್ದಲಿ, ಪಡೆದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದು, ವಿಶೇಷವಾಗಿತ್ತು‌ 


*ರಸ್ತೆಗಾಗಿ ಅರ್ಜಿ:* ಗ್ರಾಮದ ವಿವಿಧ ಭಾಗದಲ್ಲಿ ಕಾಂಕ್ರೀಟ್  ರಸ್ತೆ ಮಾಡಿಕೊಡುವಂತೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಮನರೇಗಾ ಯೋಜನೆಯಡಿ ಗ್ರಾಮದ ಒಳಭಾಗದಲ್ಲಿರುವ ರಸ್ತೆಯನ್ನು ಹಂತ ಹಂತವಾಗಿ ಮಾಡಿಕೊಡುವುದಾಗಿ ತಿಳಿಸಿದರು.


*ನಳ ಸಂಪರ್ಕ:* ಗ್ರಾಮ ಸಭೆ ನಡೆಸಿ ನಳ ಒದಗಿಸುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಿದರೆ  ಜಲಜೀವನ್‌ ಮಿಷನ್ ಎರಡನೇ ಹಂತದಲ್ಲಿ ಕನ್ನಮಂಗಲ ಗ್ರಾಮವನ್ನು ಆಯ್ಕೆ ಮಾಡಿ  ನಳ ಒದಗಿಸಲಾಗುವುದು ಎಂದರು.


*ಆಧಾರ್ ತಿದ್ದುಪಡಿ:* ಶಿವಲಿಂಗಮ್ಮ ಎಂಬುವವರು ತಮಗೆ 63 ವರ್ಷವಾಗಿದ್ದು,  ಆಧಾರ್ ಕಾರ್ಡಿನಲ್ಲಿ ವಯೋಮಿತಿ ಸರಿಯಾಗಿ ನಮೂದಾಗಿಲ್ಲದ ಕಾರಣ ವೃದ್ಧಾಪ್ಯದ ವೇತನ ದೊರಕುತ್ತಿಲ್ಲ ಎಂದು ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ವೈದ್ಯರು ಪರಿಶೀಲಿಸಿ ಅವರ ವಯಸ್ಸಿನ ದೃಢೀಕರಣ ಪತ್ರ ನೀಡುವಂತೆ ನಂತರ ಆಧಾರ್ ನಲ್ಲಿ ತಿದ್ದುಪಡಿ ಮಾಡುವಂತೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಡಿ.ಡಿ.ಎಲ್ ಆರ್. ಸಂತೋಷ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑