Tel: 7676775624 | Mail: info@yellowandred.in

Language: EN KAN

    Follow us :


ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು

Posted date: 24 Mar, 2021

Powered by:     Yellow and Red

ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು

ಪವರ್ ಸ್ಟಾರ್ ಎಂದೇ ಹೆಸರಾದ ಡಾ ರಾಜಕುಮಾರ್ ರವರ ಪುತ್ರ ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಚಿತ್ರದ ಪ್ರಮೋಷನ್‍ಗಾಗಿ ನಗರಕ್ಕೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರನ್ನು ತಾಲ್ಲೂಕಿನ ಸಹಸ್ರಾರು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು.


ನಗರದ ಪೊಲೀಸ್ ಠಾಣೆ ಮುಂಭಾಗದಿಂದ ಪುನೀತ್‍ರನ್ನು ಬೆಳ್ಳಿ ರಥದೊಂದಿಗೆ ಪ್ರವಾಸಿಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಬಸ್‍ನಿಲ್ದಾಣದ ಮುಂಭಾಗ 10 ಕ್ಕೂ ಹೆಚ್ಚಿನ ಜೆಸಿಬಿಗಳ ಮೂಲಕ ರಾಜ್‍ಪುತ್ರನಿಗೆ ಹೂವಿನ ಸುರಿಮಳೆ ಸುರಿಸಲಾಯಿತು. ಇದರೊಂದಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ನೆಚ್ಚಿನ ನಟನನ್ನು ಸ್ವಾಗತಿಸಲಾಯಿತು. ಸಾವಿರಾರು ಅಭಿಮಾನಿಗಳ ಹಷ್ಟೋದ್ಘಾರ ಮುಗಿಲುಮುಟ್ಟಿತ್ತು. ಹತ್ತಾರು ಜಾನಪದ ಕಲಾಮೇಳಗಳು ಮೆರವಣಿಗೆಯಲ್ಲಿ ಸಾಗಿದವು.


ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪುನೀತ್‍ರಾಜ್‍ಕುಮಾರ್, ಚನ್ನಪಟ್ಟಣ ಬೊಂಬೆಗಳಿಗೆ ಹೆಸರುವಾಸಿ, ನೀವು ನಿಮ್ಮ ಅಭಿಮಾನದ ಮೂಲಕ ನನ್ನನ್ನು ಬೊಂಬೆಯನ್ನಾಗಿಸಿದ್ದೀರಿ. ನಾನು ಚನ್ನಪಟ್ಟಣಕ್ಕೆ ಅಧಿಕೃತ ಭೇಟಿ ಯಾವಾಗಲೂ ನೀಡಿರಲಿಲ್ಲ. ನಿಮ್ಮ ಅಭಿಮಾನ ನನ್ನನ್ನು ಮೂಕವಿಸ್ಮಿತನಾಗಿಸಿದೆ. ನಮ್ಮ ಯುವರತ್ನ ಚಿತ್ರತಂಡಕ್ಕೆ ಹಾಗೂ ಇಡೀ ಚಿತ್ರರಂಗಕ್ಕೆ ನಿಮ್ಮ ಪ್ರೋತ್ಸಾಹ ಸದಾ ಇರಲಿ. ಇಲ್ಲಿನ ಜನರ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ತಿಳಿಸಿದರು.


*ಬಿಸಿಲಲ್ಲಿ ಕಾದ ಸಾವಿರಾರು ಅಭಿಮಾನಿಗಳು:*

ಇದೆ ಪ್ರಥಮಬಾರಿಗೆ ತಾಲೂಕಿಗೆ ಆಗಮಿಸಿದ್ದ ಪುನೀತ್‍ಗಾಗಿ ಅಭಿಮಾನಿಗಳು ಸುಡುವ ಬಿಸಿಲನ್ನು ಲೆಕ್ಕಿಸದೇ ಹಲವು ಘಂಟೆಗಳ ಕಾಲ ಕಾಯ್ದು ಕುಳಿತಿದ್ದರು. ಪುನೀತ್ ಆಗಮಿಸುತ್ತಲೇ ತಮ್ಮ ಅಭಿಮಾನಿಗಳ ಹಷೋದ್ಘಾರ ಮುಗಿಲುಮುಟ್ಟಿತ್ತು. ತಾಲೂಕಿನ ಪುನೀತ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ನಟ ಧನಂಜಯ(ಡಾಲಿ) ನಿರ್ದೇಶಕ ಸಂತೋಷ್ ಆನಂದ್‍ರಾಮ್, ನಿರ್ಮಾಪಕ ವಿಜಯ್ ಕಿರಗಂದೂರ್ ಪುನೀತ್‍ಗೆ ಸಾಥ್ ನೀಡಿದರು.


ಕೆಪಿಸಿಸಿ ಸದಸ್ಯ ಟಿ.ಕೆ,ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್, ವಕೀಲರ ಸಂಘದ ಅಧ್ಯಕ್ಷ ಗಿರೀಶ್, ಯುವಘಟಕದ ಜಿಲ್ಲಾಧ್ಯಕ್ಷ ಸಚಿನ್‍ಗೌಡ, ಮುಖಂಡರಾದ ಶರತಚಂದ್ರ, ಮುದ್ದುಕೃಷ್ಣೇಗೌಡ, ತಗಚಗೆರೆ ಕುಳ್ಳಪ್ಪ, ಕುಕ್ಕುರುದೊಡ್ಡಿ ಶಿವಣ್ಣ, ಪಿಡಿ ರಾಜು, ಅಭಿಮಾನಿ ಸಂಘದ ತಗಚಗೆರೆ ನಾಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑