Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ

Posted date: 14 Apr, 2021

Powered by:     Yellow and Red

ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ

ಕಳೆದ ವರ್ಷ ಯುಗಾದಿ ಹಬ್ಬಕ್ಕೂ ಮುನ್ನ ಕೊರೊನಾ ವಕ್ಕರಿಸಿತ್ತು. ಜನರು ಗೊಣಗುತ್ತಲೇ ಸರ್ಕಾರದ ಆದೇಶದ ಮೇರೆಗೆ ಸರಳವಾಗಿ ಯುಗಾದಿ ಹಬ್ಬ ಆಚರಿಸಿದರು.

ಆದರೆ ಈ ವರ್ಷವೂ ಸಹ ಕೊರೊನಾ ಎರಡನೆಯ ಅಲೆ ಶುರುವಾಗಿರುವುದರಿಂದ ಬಹುತೇಕ ಜನರು ಕೊರೊನಾಗೆ ಒಗ್ಗಿಕೊಂಡಂತೆ ಇದೆ. ಚನ್ನಪಟ್ಟಣ ನಗರದ ಎಲ್ಲಾ ರೀತಿಯ ಮಾರುಕಟ್ಟೆಯು ಇಷ್ಟೊತ್ತಿಗೆ ಕಳೆ ಕಟ್ಟಬೇಕಾಗಿತ್ತು. ಇಂದು ಕಳೆದರೆ ನಾಳೆಯೇ ಹಬ್ಬ. ಕಡಿಮೆ ಮಂದಿ ಕಡಿಮೆ ಖರೀದಿಯಲ್ಲಿ ತೊಡಗಿದ್ದಾರೆ.


ಹಿಂದೂಗಳಿಗೆ ಇದು ವರ್ಷದ ಮೊದಲ ಹಬ್ಬವಾಗಿದ್ದು, ಒಂದಲ್ಲ ಒಂದು ರೀತಿಯ ಹೊಸ ಬಟ್ಟೆ ಹಾಕಬೇಕು ಎನ್ನುವ ಕನಸು ಎಲ್ಲರಿಗೂ ಇರುತ್ತದೆ. ಆ ದಿಶೆಯಲ್ಲಿ ಬಟ್ಟೆ ಅಂಗಡಿಗಳಲ್ಲಿ ಮಾತ್ರ ಸ್ವಲ್ಪ ಜನ ಜಂಗುಳಿ ಇದ್ದು, ಹೂವು, ಹಣ್ಣು, ತರಕಾರಿ ಮಾರುಕಟ್ಟೆಗಳಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಖರೀದಿಸುತ್ತಿದ್ದಾರೆ.


*ಜಾಗೃತಿ:* ರಾಜ್ಯದಲ್ಲಿ ಕೊರೊನಾ ಎರಡನೆಯ ಅಲೆಯು ಹೆಚ್ಚಾಗಿದ್ದು, ಹಬ್ಬದ ಸಂದರ್ಭದಲ್ಲಿ ಜನ ಸೇರುವುದು, ಗುಂಪು ಗೂಡುವುದನ್ನು ನಿಷೇಧಿಸಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳಿಂದ ಜನ ಜಾಗೃತಿ ಮೂಡಿಸಲಾಗುತ್ತಿದೆ.

ಜೊತೆಗೆ ಆರ್ಥಿಕ ಸಂಕಷ್ಟವೂ ತಲೆದೋರಿರುವುದರಿಂದ ಕಡಿಮೆ ಖರ್ಚಿನಲ್ಲಿ ಹಬ್ಬದ ಆಚರಣೆಗೆ ಸಾರ್ವಜನಿಕರು ಹೊಂದಿಕೊಳ್ಳುತ್ತಿದ್ದಾರೆ.


*ಎಲ್ಲಾ ಓದುಗ ಮಿತ್ರರಿಗೂ sanmitra.co.in online ಪತ್ರಿಕೆ ಮತ್ತು Red & Yellow ಬಳಗದಿಂದ ಯುಗಾದಿ ಹಬ್ಬದ ಶುಭಾಶಯಗಳು*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑