Tel: 7676775624 | Mail: info@yellowandred.in

Language: EN KAN

    Follow us :


ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ

Posted date: 16 Apr, 2021

Powered by:     Yellow and Red

ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ

ರಾಮನಗರ : ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರನ್ನು ಶ್ರೀಶಂಕರ ಮಠದ ಕಾರ್ಯದರ್ಶಿ ಕೆ.ಎಲ್. ಶೇಷಗಿರಿರಾವ್ ಸನ್ಮಾನಿಸಿದರು.

‘ಕೂನಗಲ್ ಬೆಟ್ಟದ ಅಭಿವೃದ್ಧಿಗೆ ದಿವಂಗತ ಪುಟ್ಟಮಾಸ್ತಿಗೌಡರು ಅವಿರತವಾಗಿ ಶ್ರಮಸಿದ್ದರು. ಈಗ ಅವರ ಮಗ ವಾಸುಪುಟ್ಟಮಾಸ್ತಿಗೌಡರು ಕೂನಗಲ್ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿ.ಟಿ. ರಾಜೇಂದ್ರ ಅವರು ಕೂನಗಲ್ ಬೆಟ್ಟದಲ್ಲಿ ಸಸಿಗಳನ್ನು ನೆಡುವ ಮೂಲಕ ಉದ್ಯಾನವನ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ’ ಎಂದು ಕೆ.ಎಲ್. ಶೇಷಗಿರಿರಾವ್ ತಿಳಿಸಿದರು.


ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಮಾತನಾಡಿ ಹಿರಿಯ ಮುಖಂಡರಾಗಿದ್ದ ಪುಟ್ಟಮಾಸ್ತಿಗೌಡರ ಶ್ರಮದಿಂದ ಕೂನಗಲ್ ಬೆಟ್ಟ ಅಭಿವೃದ್ಧಿಯಾಗಿದೆ. ಕೂನಗಲ್ ಬೆಟ್ಟವು ಅಪರೂಪದ ನಿಸರ್ಗ ತಾಣವಾಗಿದ್ದು, ಈ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಅಮೃತ ವಿಕಲಚೇತನ ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್, ನಂದಗೋಕುಲ ವೃದ್ಧಾಶ್ರಮದ ಸಂಸ್ಥಾಪಕ ಎನ್.ವಿ. ಲೋಕೇಶ್, ಅರ್ಚಕರಾದ ಶ್ರೀನಿವಾಸ್ ಬಾಬು, ಕೃಷ್ಣಜೋಶಿ, ಎನ್.ವಿ. ವೆಂಕಟೇಶ್ ಇದ್ದರು.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑