Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಎರಡನೇ ಅಲೆಯ ಹಿನ್ನೆಲೆ, ನಗರಕ್ಕೆ ಲಗ್ಗೆ ಇಟ್ಟ ಜಿಲ್ಲಾಡಳಿತ

Posted date: 18 Apr, 2021

Powered by:     Yellow and Red

ಕೊರೊನಾ ಎರಡನೇ ಅಲೆಯ ಹಿನ್ನೆಲೆ, ನಗರಕ್ಕೆ ಲಗ್ಗೆ ಇಟ್ಟ ಜಿಲ್ಲಾಡಳಿತ

ಕೊರೊನಾ ಎರಡನೆ ಅಲೆಯೂ ಎಗ್ಗಿಲ್ಲದೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಜಿಲ್ಲಾಡಳಿತ ಚನ್ನಪಟ್ಟಣ  ನಗರಕ್ಕೆ ಲಗ್ಗೆ ಇಟ್ಟು ಅಂಗಡಿಮುಂಗಟ್ಟುಗಳು, ಹೋಟೆಲ್ ಗಳು, ಬೀದಿಬದಿ ವ್ಯಾಪಾರಿಗಳಿಗೆ, ಆಟೋ ಟ್ಯಾಕ್ಸಿ ಮಾಲೀಕರಿಗೆ ಎಚ್ಚರಿಕೆ ನೀಡಿ, ಮಾಸ್ಕ್ ಧರಿಸದವರಿಗೆ ಮಾಸ್ಕ್ ನೀಡಿದರು.

ಬಹಳ ಮುಖ್ಯವಾಗಿ ತಾಲ್ಲೂಕು ಆಡಳಿತಾಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮಗಳನ್ನು ಹೇಗೆ ಮಾಡಬೇಕು ಎಂದು ತಿಳಿಸಿದರು.


ಮೊದಲಿಗೆ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಅಧಿಕಾರಿಗಳು ಎರಡನೇ ಅಲೆಯನ್ನು ಹೇಗೆ ತಡೆಗಟ್ಟಬೇಕು. ಯಾವ ಮಾನದಂಡ ಉಪಯೋಗಿಸಬೇಕು. ಸ್ವಾಬ್ ಪರೀಕ್ಷೆ ಹೇಗೆ ಮತ್ತು ಪ್ರತಿನಿತ್ಯ ಎಷ್ಟು ನಡೆಸಬೇಕು, ಕೋವ್ಯಾಕ್ಷಿನ್ ನೀಡಲು ಕ್ರಮ ವಹಿಸಬೇಕಾದ ಕ್ರಮದ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.


*ರೋಡಿಗಿಳಿದ ಜಿಲ್ಲಾ ಅಧಿಕಾರಿಗಳು*

ಸಭೆಯ ನಂತರ ನಗರದ ಬಸ್ ನಿಲ್ದಾಣದ ಬಳಿ ಬಂದ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಅಂಗಡಿಗಳು, ಹೋಟೆಲ್ ಗಳು, ಆಟೋ, ಟ್ಯಾಕ್ಸಿಗಳು, ಪಾದಚಾರಿಗಳನ್ನು ಸಂಪರ್ಕಿಸಿ ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ಮಾಸ್ಕ್ ವಿತರಿಸಿದರು. ಮಾಸ್ಕ್ ಧರಿಸದ ಹಾಗೂ ಅಂತರ ಕಾಯ್ದುಕೊಳ್ಳದವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವಂತೆ ಎಸ್ಪಿ ಗಿರೀಶ್ ರವರು ಪೋಲಿಸರಿಗೆ ಸೂಚಿಸಿದರು.


ಸಭೆ ಮತ್ತು ಅರಿವು ಮೂಡಿಸುವ ಕಾರ್ಯದಲ್ಲಿ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗಿರೀಶ್, ತಹಶಿಲ್ದಾರ್ ನಾಗೇಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ, ಉಪ ಪೋಲಿಸ್ ವರಿಷ್ಠಾಧಿಕಾರಿ ಕೆ ಎನ್ ರಮೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑