Tel: 7676775624 | Mail: info@yellowandred.in

Language: EN KAN

    Follow us :


ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ

Posted date: 19 Apr, 2021

Powered by:     Yellow and Red

ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ  ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ

ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ, ಪರಿಶಿಷ್ಟ ಜಾತಿ ಜನರನ್ನು ಕುರಿತು ಅವಹೇಳನಕಾರಿ ಹೇಳಿಕೆ ಕೊಡಿಸಿರುವುದು ಆಘತಕಾರಿ ಜೊತೆಗೆ ಅವರ ಬಾಯಿಮಾತಿನ ಚಪಲವನ್ನು ಹಾಗೂ ನಾವು ಪರಿಶಿಷ್ಟ ಸಮುದಾಯದ ವಿರುದ್ದ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನೀಲಸಂದ್ರ ಸದಾನಂದ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಭಾರತೀಯ ಜನತಾ ಪಾರ್ಟಿ ಚನ್ನಪಟ್ಟಣ ಗ್ರಾಮಾಂತರ ಮಂಡಲ ಎಸ್ ಸಿ ಮೋರ್ಚಾ ವತಿಯಿಂದ ಉಪ ತಹಶಿಲ್ದಾರ್ ಸೋಮೇಶ್ ರವರ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.


ಗ್ರಾಮಾಂತರ ಎಸ್ ಸಿ ಮೋರ್ಚಾ ದ ಅಧ್ಯಕ್ಷರಾದ ಹೆಚ್ ಸಿ ನಾಗರಾಜು ರವರು ಮಾತನಾಡಿ ಮಮತಾ ಬ್ಯಾನರ್ಜಿಯವರು ಬಡವರಾದ ಪರಿಶಿಷ್ಟ ಜಾತಿಯವರಿಗೆ ನೆರವಾಗಿದ್ದರೂ ಸಹ ಅವರ ಸಣ್ಣತನ ಬದಲಾಗಿಲ್ಲ. ಕೆಲವರು ತಮ್ಮ ಪ್ರವೃತ್ತಿಯಿಂದ ಭಿಕ್ಷುಕರಾಗಿದ್ದರೆ ಇನ್ನೂ ಕೆಲವರು ಸಂಧರ್ಭಗಳಿಗನುಸಾರವಾಗಿ ಭಿಕ್ಷುಕರಾಗಿದ್ದಾರೆ. ಅದನ್ನೇ ದೊಡ್ಡದು ಮಾಡಿ ಪರಿಶಿಷ್ಟ ಜಾತಿಯವರೆಲ್ಲರೂ ಭಿಕ್ಷುಕ ಪ್ರವೃತ್ತಿಯನ್ನೇ ಹೊಂದಿದ್ದಾರೆ ಎಂಬ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.


ಚನ್ನಪಟ್ಟಣ ನಗರ ಪ್ರಾಧಿಕಾರದ ಸದಸ್ಯ ಚಕ್ಕಲೂರು ಚಿಕ್ಕಚೌಡಯ್ಯ ಮಾತನಾಡಿ ಪಶ್ಚಿಮ ಬಂಗಾಳದ ಪರಿಶಿಷ್ಟ ಜಾತಿಯವರನ್ನಷ್ಟೇ ಇವರು ಅವಮಾನಿಸಿಲ್ಲ, ಇಡೀ ರಾಷ್ಟ್ರದ ಪರಿಶಿಷ್ಟ ಜಾತಿಗಳ ಜನರನ್ನು ಭಿಕ್ಷುಕರು ಎಂದು ಜರಿದು ಅವಮಾನಿಸಿದ್ದಾರೆ. ಇವರ ವಿರುದ್ಧ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಹೇಳಿಕೆಗಳು ಸಂವಿಧಾನ ರಚನಾಕಾರ ಡಾ ಬಿ ಆರ್ ಅಂಬೇಡ್ಕರ್ ರವರ ಪ್ರಜಾಪ್ರಭುತ್ವದ ಚಿಂತನೆಗಳನ್ನು ಖಂಡಿಸುವಂತಿವೆ. ಇಂತಹ ಹೇಳಿಕೆ ನೀಡುವ ಯಾವುದೇ ವ್ಯಕ್ತಿಗೂ ಕಾನೂನು ಕ್ರಮ ಜರುಗಿಸಿಬೇಕೆಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ವಂದಾರಗುಪ್ಪೆ ರಾಜೇಶ್, ಜಯಬೋರಯ್ಯ, ವೆಂಕಟರಾಮು ಅವ್ವೇರಹಳ್ಳಿ, ಶಿವಲಿಂಗಯ್ಯ ಮಂಗಳವಾರಪೇಟೆ, ಶಿವಪ್ಪ ಗರಕಹಳ್ಳಿ ಮತ್ತು ಕಿರಣ್ ಭೈರಾಪಟ್ಟಣ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑