Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚನ್ನಪಟ್ಟಣ ದವರಿಗೆ ಸಿಗಲಿ. ಬೇರೆ ತಾಲ್ಲೂಕಿನ ಪಾಲಾಗುವುದು ಬೇಡ. ಶಿವಮಾದು

Posted date: 20 Apr, 2021

Powered by:     Yellow and Red

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚನ್ನಪಟ್ಟಣ ದವರಿಗೆ ಸಿಗಲಿ. ಬೇರೆ ತಾಲ್ಲೂಕಿನ ಪಾಲಾಗುವುದು ಬೇಡ. ಶಿವಮಾದು

ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಜಿಲ್ಲೆಯ ಅರ್ಧದಷ್ಟು ಮತದಾರರಿರುವುದರಿಂದ ಈ ಬಾರಿಯೂ ನಮ್ಮ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬ ದೃಷ್ಟಿಯಿಂದ ನಾವೆಲ್ಲರೂ ನಾಮಪತ್ರವನ್ನು ಹಿಂಪಡೆದು ಶಿಕ್ಷಕ ಯೋಗೇಶ್  ಗೆ ಬೆಂಬಲ ನೀಡುತ್ತಿದ್ದೇವೆ ಎಂದು ನಿಕಟಪೂರ್ವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಶಿವಮಾದು ರವರು ತಿಳಿಸಿದರು.

ಅವರು ಇಂದು ನಗರದ ಕೋಟೆ ಯಲ್ಲಿರುವ ಮಿಲೇನಿಯಂ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ನಾನು ಕಳೆದ ಒಂದೂವರೆ ದಶಕದಿಂದ ಸಾಹಿತ್ಯ ಪರಿಚಾರಕನಾಗಿ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಪರಿಷತ್ತಿನ ಹಲವು ಹುದ್ದೆಗಳ ಜೊತೆಗೆ ತಾಲ್ಲೂಕು ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದೇನೆ. ಹೆಚ್ಚು ಮತದಾರರ ಒಲವು ನನಗಿದ್ದುದ್ದರಿಂದ ನಾನೂ ಸಹ ನಾಮಪತ್ರ ಸಲ್ಲಿಸಿದ್ದೆ. ನಮ್ಮ ತಾಲ್ಲೂಕಿನಲ್ಲಿಯೇ ಏಳು ಮಂದಿ ಸ್ಪರ್ಧಿಸಿದ ಕಾರಣ ಮತಗಳು ಒಡೆದು ಬೇರೆ ತಾಲ್ಲೂಕಿನ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ದಟ್ಟವಾಗಿದ್ದರಿಂದ ಈ ಹಿಂದೆ ಸಭೆ ನಡೆಸಿ ಒಮ್ಮತದ ಅಭ್ಯರ್ಥಿ ಉಳಿಸಲು ಪ್ರಯತ್ನ ನಡೆಯಿತು. ಎರಡನೇ ಬಾರಿ ಸ್ಪರ್ಧಿಸಿರುವ ಬಿ ಟಿ ನಾಗೇಶ್ ಒಪ್ಪದ ಕಾರಣ ನಾಲ್ಕು ಮಂದಿ ಸ್ಪರ್ಧಿಗಳಾದ ಶಿವಮಾದು, ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ, ವಸಂತಕುಮಾರ್ ಮತ್ತು ಗುರುಮಾದಯ್ಯ ನಾವುಗಳು ಚರ್ಚಿಸಿ ನಾಮಪತ್ರ ಹಿಂಪಡೆದು ಯೋಗೇಶ್ ರವರಿಗೆ ಬೆಂಬಲ ಸೂಚಿಸಿದ್ದೇವೆ ಎಂದು ತಿಳಿಸಿದರು.


ಅಭ್ಯರ್ಥಿ ಯೋಗೇಶ್ ಮಾತನಾಡಿ ಶಿವಮಾದು ರವರು ಅಭ್ಯರ್ಥಿ ಆದರೆ ನಾನು ಹಿಂಪಡೆಯುವುದಾಗಿ ಘೋಷಿಸಿದ್ದೆ. ಈ ಮೊದಲು ಬೇರೆ ತಾಲ್ಲೂಕಿನ ಅದರಲ್ಲೂ ಮಹಿಳೆಗೆ ಸ್ಥಾನ ಸಿಗುವುದಾದರೂ ಹಿಂಪಡೆಯುತ್ತೇನೆ ಎಂದು ತಿಳಿಸಿದ್ದೆ. ಓರ್ವ ಅಭ್ಯರ್ಥಿ ಬೇರೆಯವರ ಕಡೆಯಿಂದ ಧಮ್ಕಿ ಹಾಕಿಸುವುದು, ಸರ್ಕಾರಿ ನೌಕರ ಎಂಬ ಕಾರಣಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರುವುದರ ಜೊತೆಗೆ ನನಗೆ ಮಾನಸಿಕವಾಗಿ ತೊಂದರೆ ನೀಡಿದ್ದಾರೆ ಎಂದು ಬಿ ಟಿ ನಾಗೇಶ್ ಹೆಸರೇಳದೆ ದೂರಿದರು.


ನಾನು ಚಿಕ್ಕಂದಿನಿಂದಲೇ ಕನ್ನಡದ ಗೀಳು ಅಂಟಿಸಿಕೊಂಡವನು, ಮೂರು ಪದವಿಗಳನ್ನು ಕನ್ನಡದಲ್ಲಿಯೇ ಪಡೆದುಕೊಂಡಿದ್ದೇನೆ. ನಾನು ಸರ್ಕಾರಿ ಹುದ್ದೆಯಲ್ಲಿದ್ದರೂ ಸಹ ನನ್ನ ಕನ್ನಡ ಸಾಹಿತ್ಯ ಸೇವೆಗೆ ಚ್ಯುತಿಯಾಗದಂತೆ ಕೆಲಸ ಮಾಡುತ್ತೇನೆ. ಜಿಲ್ಲೆಯ ಈಗಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಶಿಕ್ಷಕರಾದಿಯಾಗಿ ಮತದಾರರ ಹೆಚ್ಚಿನ ಬೆಂಬಲ ನನಗಿದೆ. ಎಲ್ಲರೂ ಸಹ ನನಗೆ ಮತ ನೀಡುವ ಮೂಲಕ ಕನ್ನಡಮ್ಮನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡಿದರು.


ಮಾಧ್ಯಮ ಗೋಷ್ಠಿಯಲ್ಲಿ ಭಾರತ್ ವಿಕಾಸ ಪರಿಷದ್ ನ ಅಧ್ಯಕ್ಷ ವಸಂತಕುಮಾರ್, ಲೇಖಕ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ ಮತ್ತು ವೀರಶೈವ ಸಂಘದ ಜಿಲ್ಲಾಧ್ಯಕ್ಷ ಗುರುಮಾದಯ್ಯ ನವರು ಯೋಗೇಶ್ ಬೆಂಬಲ ಸೂಚಿಸಿ ಮಾತನಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑