Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ, ನಗರಾಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತನೀಡಿ. ಸಂಸದ ಡಿ ಕೆ ಸುರೇಶ್

Posted date: 24 Apr, 2021

Powered by:     Yellow and Red

ರಾಮನಗರ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ, ನಗರಾಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತನೀಡಿ. ಸಂಸದ ಡಿ ಕೆ ಸುರೇಶ್

ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಯ ಚುನಾವಣೆಯೂ ತ್ರಿಕೋನ ಸ್ಪರ್ಧೆಯಿಂದ ಕೂಡಿದೆ. ನಗರವೂ ಅನೈರ್ಮಲ್ಯದಿಂದ ಕೂಡಿದೆ. ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಕಸ ವಿಲೇವಾರಿ ಸಮಸ್ಯೆ, ಇ-ಖಾತೆ ಸಮಸ್ಯೆ ಬಹಳಷ್ಟಿದೆ. ಸ್ಥಳೀಯ ಆಡಳಿತದಲ್ಲಿ ಒಮ್ಮತ ಮೂಡಿಸುವ ಮೂಲಕ ಕೆಲಸ ಮಾಡಬೇಕಾದ್ದರಿಂದ ಕಾಂಗ್ರೆಸ್ ಮತ ನೀಡಿ ಎಂದು ಸಂಸದ ಡಿ ಕೆ ಸುರೇಶ್ ಮಾಧ್ಯಮದ ಮೂಲಕ ನಗರದ ಮತದಾರರಲ್ಲಿ ಮನವಿ ಮಾಡಿದರು.

ಅವರು ನಿನ್ನೆ ಸಂಜೆ ನಗರದ ಕೆ ಹೆಚ್ ಬಿ ಬಡಾವಣೆಯಲ್ಲಿರುವ ಮಾಜಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಶಿವಮಾದು ರವರ ಮನೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಇ-ಖಾತಾ ಸಮಸ್ಯೆಯಂತೂ ಬಹಳಷ್ಟಿದೆ. ಸ್ಥಳೀಯ ಆಡಳಿತದಲ್ಲಿ ಒಮ್ಮತದ ಕೊರತೆ ಇರುವುದೇ ಇದಕ್ಕೆ ಕಾರಣ. ಒಂದೇ ಪಕ್ಷ ಆಡಳಿತದಲ್ಲಿದ್ದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ನಗರಾಭಿವೃದ್ಧಿ ಕಛೇರಿಗೆ ತನ್ನದೇ ಆದ ಕಟ್ಟಡ ಇಲ್ಲ. ನಗರದಲ್ಲಿ ಅತಿ ಹೆಚ್ಚು ಬಡವರಿದ್ದಾರೆ ಅವರಿಗೆ ಸ್ವಂತ ನಿವೇಶನ ಇಲ್ಲ. ಎರಡು ನಗರಗಳಿಗೆ ಸಂಬಂಧಿಸಿದಂತೆ ಒಂದೊಳ್ಳೆ ಪಾರ್ಕ್ ಇಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ ನೀಡಿದರೆ ಈ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.


ಬಿಜೆಪಿ ಆಡಳಿತ ಅವಧಿಯಲ್ಲಿ ಜನರಿಗೆ ಕಷ್ಟವಾಗುತ್ತಿದೆ. ದಿನನಿತ್ಯದ ಸಾಮಾನುಗಳ ಬೆಲೆ ಶೇ 25 ರಷ್ಟು ಏರಿಕೆಯಾಗಿದೆ.

ನಮ್ಮ ಸರ್ಕಾರದ ಅವಧಿಗೆ ಹೋಲಿಸಿಕೊಂಡರೆ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡಿವೆ.

ಆರ್ಥಿಕವಾಗಿ ಜನರು ಹಿಂದುಳಿಯಲು ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಅವರು ದೂರಿದರು. ಮುಂದುವರೆದು ಮಾತನಾಡಿದ ಅವರು ಹಾಲಿ ಶಾಸಕ ಮತ್ತು ಮಂತ್ರಿಗಳಿಬ್ಬರೂ ಅಧಿಕಾರಸ್ಥರೇ ವಿನಹ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಮತ ನೀಡಿದರೆ ನಗರಾಭಿವೃದ್ಧಿ ಸಾಧ್ಯ ಎಂದರು.


ಕೋವಿಡ್ ಕೈಮೀರುತ್ತಿದೆ. ಇದರಲ್ಲಿ ರಾಜಕೀಯ ಬೇಡ. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೋವಿಡ್ ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕಿತರನ್ನು ಇರಿಸಲು ಸೂಚಿಸಲು ಡಿ ಸಿ ಗೆ ತಿಳಿಸುತ್ತೇನೆ.

ಸರ್ಕಾರ ನಂಬಿ ನೀವು ಕೊರೊನಾ ಸೋಂಕನ್ನು ಅಂಟಿಸಿಕೊಳ್ಳಬೇಡಿ. ನಿಮ್ಮ ಜೀವವನ್ನು ಉಳಿಸಿಕೊಳ್ಳಿ, ಜೀವ ಇದ್ದರೆ ಜೀವನ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಅಂತರ, ಮಾಸ್ಕ್ ಸ್ಯಾನಿಟೈಸರ್ ಜೊತೆಗೆ ಸಾಧ್ಯವಾದಷ್ಟು ಮನೆಯಲ್ಲಿರಿ.


ದೇಹದಲ್ಲಿ ಯಾವುದೇ ರೀತಿಯ ಉಲ್ಬಣ ಕಂಡುಬಂದರೆ ತಕ್ಷಣ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ.

ಕಳೆದ ವರ್ಷಕ್ಕೂ ಈ ವರ್ಷಕ್ಕೂ ಕೊರೊನಾ ಅಜಗಜಾಂತರವಿದೆ. ಮಕ್ಕಳಿಗೂ ಸೋಂಕು ತಗುಲಿದೆ, ಯುವಕರು ಸಾವನ್ನಪ್ಪುತ್ತಿದ್ದಾರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ಸರ್ಕಾರವನ್ನೇ ನಂಬಿ ನಿಮ್ಮ ಅಮೂಲ್ಯವಾದ ಜೀವವನ್ನು ಕೊರೊನಾ ಮಹಾಮಾರಿಯ ಕೈಗೆ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು.


ಮೇ 4 ರ ತನಕ ಸೆಮಿ ಲಾಕ್ಡೌನ್ ಘೋಷಣೆ‌ ಮಾಡಿದ್ದಾರೆ, ಇದು ಮೇ ಪೂರ್ತಿ ಅಥವಾ ಜೂನ್ ನಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಜನರ ಹಿತ ದೃಷ್ಟಿಯಿಂದ ಸರ್ಕಾರದ ಜೊತೆ ನಾವಿರುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂಎಲ್ಸಿ ಎಸ್ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ನಗರಾಧ್ಯಕ್ಷ ಸುನಿಲ್, ಮಾಜಿ ಅಧ್ಯಕ್ಷ ಶಿವಮಾದು, ಟಿ ಕೆ ಯೋಗೇಶ್ ಮತ್ತು ತಾಲ್ಲೂಕು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑