Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲೆಯಲ್ಲಿ ರೌಂಡ್ಸ್‌, ರಾಜರಾಜೇಶ್ವರಿ ಆಸ್ಪತ್ರೆಗೂ ಭೇಟಿ ನೀಡಿದ ಡಿಸಿಎಂ

Posted date: 27 Apr, 2021

Powered by:     Yellow and Red

ರಾಮನಗರ ಜಿಲ್ಲೆಯಲ್ಲಿ ರೌಂಡ್ಸ್‌, ರಾಜರಾಜೇಶ್ವರಿ ಆಸ್ಪತ್ರೆಗೂ ಭೇಟಿ ನೀಡಿದ  ಡಿಸಿಎಂ

ಬೆಂಗಳೂರು: ಕೋವಿಡ್‌ ಎರಡನೇ ಅಲೆಯಿಂದ ಬಹತೇಕ ಸುರಕ್ಷಿತ ಸ್ಥಿತಿಯಲ್ಲಿರುವ ರಾಮನಗರದಲ್ಲಿ ಸೋಂಕು ಹೆಚ್ಚದಂತೆ ತಡೆಯಲು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಸೋಮವಾರ ರಾಜರಾಜೇಶ್ವರಿ ಆಸ್ಪತ್ರೆ ಹಾಗೂ ದಯಾಂದ ಸಾಗರ್‌ ಮೆಡಿಕಲ್‌ ಕಾಲೇಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಎರಡೂ ಆಸ್ಪತ್ರೆಗಳಲ್ಲಿ ಬೆಡ್‌ಗಳ ಲಭ್ಯತೆ, ವೆಂಟಿಲೇಟರ್‌, ಆಮ್ಲಜನಕ, ರೆಮಿಡಿಸ್ವಿರ್‌ ಬಗ್ಗೆ ತೀವ್ರ ಪರಿಶೀಲನೆ ನಡೆಸಿದರು.


ದಯಾನಂದ ಸಾಗರ್‌ ಆಸ್ಪತ್ರೆ ವೈದ್ಯಾಧಿಕಾರಿಗಳು ಇಪ್ಪತ್ತು ವೆಂಟಿಲೇಟರ್‌ಗಳ ಅಗತ್ಯವಿದೆ ಎಂದು ಬೇಡಿಕೆ ಇಟ್ಟ ಕೂಡಲೇ ಸ್ಪಂದಿಸಿದ ಡಿಸಿಎಂ, ಕೂಡಲೇ ಅವುಗಳನ್ನು ಒದಗಿಸುವಂತೆ ವೈದ್ಯಕೀಯ ಆಯುಕ್ತರಿಗೆ ಸೂಚಿಸಿದರು.


*ರಾಜ್ಯಾದ್ಯಂತ ಏಪ್ರಿಲ್ 27 ರ ರಾತ್ರಿಯಿಂದ 14 ದಿನ 'ಕೊರೋನಾ ಕರ್ಫ್ಯೂ' ನಾಳೆಯಿಂದ ಜಾರಿ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು, ಮುಂದಿನ 14  ದಿನ ಜನರೇ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಅದಕ್ಕಿಂತ ಉತ್ತಮ ಕೆಲಸ ಬೇರೊಂದಿಲ್ಲ ಎಂದರು.*


ಇನ್ನೊಂದೆಡೆ ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ಚುರುಕಾಗಬೇಕು. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ. ಎಲ್ಲೆಲ್ಲಿ ಲಸಿಕೆ ಹಾಕಲಾಗುತ್ತದೆ? ಎಲ್ಲೆಲ್ಲಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಉಪ ಮುಖ್ಯಮಂತ್ರಿ ಹೇಳೀದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑