Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಬೀಗಿದ್ದು, ಅಧಿಕಾರದ ಗದ್ದುಗೆ ತಪ್ಪಿಸಿಕೊಂಡ ಕಾಂಗ್ರೆಸ್ ಹಾಗೂ ತೃಪ್ತಿ ಪಟ್ಟು ಕೊಂಡ ಬಿಜೆಪಿ

Posted date: 30 Apr, 2021

Powered by:     Yellow and Red

ಚನ್ನಪಟ್ಟಣ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಬೀಗಿದ್ದು, ಅಧಿಕಾರದ ಗದ್ದುಗೆ ತಪ್ಪಿಸಿಕೊಂಡ ಕಾಂಗ್ರೆಸ್ ಹಾಗೂ ತೃಪ್ತಿ ಪಟ್ಟು ಕೊಂಡ ಬಿಜೆಪಿ

ನಗರಸಭೆಯಲ್ಲಿ 32 ವಾರ್ಡ್ಗಳಿದ್ದು, ಚುನಾವಣಾ ಅವಧಿ ಮುಗಿದ 2 ವರ್ಷಗಳ ನಂತರ ಚುನಾವಣೆ ನಡೆದಿತ್ತು. 31 ವಾರ್ಡ್ಗಳಲ್ಲಿ ಕಾಂಗ್ರೆಸ್, ಜನತಾದಳ, ಬಿಜೆಪಿ, ಆಮ್ ಆದ್ಮಿ, ಎಸ್ ಡಿ ಪಿ ಐ, ಪಕ್ಷೇತರ, ಬಂಡಾಯ ಸೇರಿದಂತೆ 114 ಮಂದಿ ಕಣದಲ್ಲಿದ್ದರು. ಒಟ್ಟು 59 ಮತಗಟ್ಟೆಗಳಿದ್ದು, ಒಂಭತ್ತು ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಿತು. ಇಲ್ಲಿ ಜೆಡಿಎಸ್-16, ಕಾಂಗ್ರೆಸ್-7, ಬಿಜೆಪಿ-7 ಹಾಗೂ ಪಕ್ಷೇತರರು ಒಬ್ಬರು ಗೆಲವು ಸಾಧಿಸಿದ್ದಾರೆ.


*ಎಸ್ಪಿ ಗಿರೀಶ್ ಭೇಟಿ*

ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ಭೇಟಿ ನೀಡಿ , ಮಾಹಿತಿ ಪಡೆದುಕೊಂಡರು. ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು, ಅಭ್ಯ ರ್ಥಿಗಳು ಹಾಗೂ ಏಜೆಂಟರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದರು.


*ಘರ್ಷಣೆ ಮಚ್ಚಿನಿಂದ ಹಲ್ಲೆ*

ಚುನಾವಣೆ ವಿಷಯದಲ್ಲಿ ಘರ್ಷಣೆ

ಮಚ್ಚಿನಿಂದ ಹಲ್ಲೆ ಗಾಯಾಳು ಆಸ್ಪತ್ರೆಗೆ

20 ನೇ ವಾರ್ಡಿನಲ್ಲಿ ಜೆಡಿಎಸ್‌ನ ಮಂಜುನಾಥ್ ಎಂಬುವವರು ಗೆಲವು ಸಾಧಿಸಿದ್ದು, ಈ ಗೆಲುವಿಗೆ ಗ್ರಾ.ಪಂ ಸದಸ್ಯ ಆದರ್ಶ ಎಂಬ ಯುವಕ ಕಾರಣ ಎಂದು, ಬಿಜೆಪಿ ಪಕ್ಷದ ಗುರುಮೂರ್ತಿ ಮತ್ತು ಗಗನ್ ಎಂಬ ಅಪ್ಪ ಮಕ್ಕಳು ಹಿಂದಿನಿಂದ ಬಂದು, ತಲೆಗೆ ಮಚ್ಚಿನಿಂದ ಹೊಡೆದು, ಗಾಯಗೊಳಿಸಿದ್ದಾರೆ.

ಏಟುತಿಂದ ಆದರ್ಶ ಅವರು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆರೋಪಿಗಳು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಅವರೇ ಖುದ್ದಾಗಿ ಹೋಗಿ ಶರಣಾಗಿರುವುದಾಗಿ ತಿಳಿದು ಬಂದಿದೆ.

ವಿಷಯ ತಿಳಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು  ಹಾಗೂ ಪಕ್ಷದ ಪ್ರಮುಖರು ಆಸ್ಪತ್ರೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.


*ಡಿವೈಎಸ್ಪಿ ಖಡಕ್ ಎಚ್ಚರಿಕೆ*

ಚುನಾವಣೆಯ ಸಂದರ್ಭದಲ್ಲಿ ಭಾವುಕರಾಗುವುದು ಸಹಜ. ಯಾರೇ ಆಗಲಿ ತಾಳ್ಮೆಯಿಂದ ನಡೆಯುವುದನ್ನು ಕಲಿಯ ಲಬೇಕು. ಉದಾಸೀನ ಮಾಡಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡರೆ, ನಿಮ್ಮನ್ನು ನಂಬಿದವರು ಅದಾವ ರೀತಿಯಲ್ಲಿ ಬದುಕು ಸಾಗಿಸಲು ಸಾಧ್ಯವಾದೀತು. ಇವರೆಲ್ಲರೂ ಆಂದಿನ ಶಿಕ್ಷಣ ಸಚಿವ ಹೆಚ್ ಜಿ ಗೋವಿಂದೇಗೌಡ ರವರನ್ನು ನೋಡಿ ಕಲಿಯಬೇಕು ಎಂದು ಡಿವೈಎಸ್ಪಿ ರಮೇಶ್ ಗಲಾಟೆ ಮಾಡಿಕೊಂಡವರಿಗೆ ಕಟುವಾಗಿ ನುಡಿದರು. ವೃತ್ತ ನಿರೀಕ್ಷಕ ದಿವಾಕರ್ ಮತ್ತು  ಟ್ರಾಫಿಕ್ ಇನ್ಸೆಪೆಕ್ಟರ್ ಪ್ರಕಾಶ್ ಆಸ್ಪತ್ರೆಗೆ ಧಾವಿಸಿ ಗಾಯಾಳುವಿನಿಂದ ಹೇಳಿಕೆ ಪಡೆದುಕೊಂಡರು.

*** *** ***


*ಸದ್ಯದ ಫಲಿತಾಂಶ: ಗೆದ್ದವರು*

1ನೇ ವಾರ್ಡ್ ಜೆಡಿಎಸ್‌ನ ಲಕ್ಷ್ಮೀ ಲೋಕೆಶ್.

2ನೇ ವಾರ್ಡ್ ಜೆಡಿಎಸ್‌ನ ನಾರಾಯಣ (ಕಂಠಿ).

೩ನೇ ವಾರ್ಡ್ ಜೆಡಿಎಸ್‌ನ ಲಕ್ಷ್ಮಮ್ಮ.

4ನೇ ವಾರ್ಡ್ ಜೆಡಿಎಸ್‌ನ ಮಹದೇವು.

5ನೇ ವಾರ್ಡ್ ಜೆಡಿಎಸ್‌ನ ರೇವಣ್ಣ.

6ನೇ ವಾರ್ಡ್ ಬಿಜೆಪಿಯ ಕಮಲಾ ರಾಮು.

7ನೇ ವಾರ್ಡ್ ಜೆಡಿಎಸ್‌ನ ಸತೀಶ್ ಬಾಬು.

8ನೇ ವಾರ್ಡ್ ಕಾಂಗ್ರೆಸ್‌ನ ಸರ್ವಮಂಗಳ ಲೋಕೇಶ್.

9ನೇ ವಾರ್ಡ್ ಬಿಜೆಪಿಯ ಕೋಳಿ ಚಂದ್ರು.

10ನೇ ವಾರ್ಡ್ ಬಿಜೆಪಿಯ ಜಯಮಾಲಾ.

11ನೇ ವಾರ್ಡ್ ಜೆಡಿಎಸ್‌ನ ನಾಗೇಶ್.

12ನೇ ವಾರ್ಡ್ ಜೆಡಿಎಸ್‌ನ ಲೋಕೇಶ್.

13ನೇ ವಾರ್ಡ್ ಬಿಜೆಪಿಯ ಮನೋಹರ್.

14ನೇ ವಾರ್ಡ್ ಜೆಡಿಎಸ್‌ನ ಅಭ್ಯರ್ಥಿ.

15ನೇ ವಾರ್ಡ್ ಬಿಜೆಪಿಯ ಸುಮಾ ರವೀಶ್.

16ನೇ ವಾರ್ಡ್ ಬಿಜೆಪಿಯ ಕಸ್ತೂರಿ.

17ನೇ ವಾರ್ಡ್ ಕಾಂಗ್ರೆಸ್‌ನ ವಾಸಿಲ್ ಅಲಿಖಾನ್.

18ನೇ ವಾರ್ಡ್ ಕಾಂಗ್ರೆಸ್‌ನ ಲಿಯಾಖತ್.

19ನೇ ವಾರ್ಡ್ ಜೆಡಿಎಸ್‌ನ ಹಸೀನಾ.

20ನೇ ವಾರ್ಡ್ ಜೆಡಿಎಸ್‌ನ ಮಂಜು.

21ನೇ ವಾರ್ಡ್ ಕಾಂಗ್ರೆಸ್‌ನ ತೌಷಿಫ್.

22ನೇ ವಾರ್ಡ್ ಕಾಂಗ್ರೆಸ್‌ನ ಮೊಹಮದ್‌ಸವೇರ್.

23ನೇ ವಾರ್ಡ್ ಕಾಂಗ್ರೆಸ್‌ನ ಮಥೀನ್ ಖಾನ್.

24ನೇ ವಾರ್ಡ್ ಜೆಡಿಎಸ್‌ನ ರಫೀಕ್.  

25ನೇ ವಾರ್ಡ್ ಕಾಂಗ್ರೆಸ್‌ನ ಸಾಹೀರ ಬಾನು.

26ನೇ ವಾರ್ಡ್ ಜೆಡಿಎಸ್‌ನ ಪ್ರಶಾಂತ್.

27ನೇ ವಾರ್ಡ್ ಜೆಡಿಎಸ್‌ನ ಮುಕ್ತಾರ್.

28ನೇ ವಾರ್ಡ್ ಜೆಡಿಎಸ್‌ನ ಅಭಿದಾಬಾನು.

29ನೇ ವಾರ್ಡ್ ಜೆಡಿಎಸ್‌ನ ಬಾನುಪ್ರಿಯ.

30ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಉಮಾ.

31ನೇ ವಾರ್ಡ್ ಬಿಜೆಪಿಯ ಮಂಗಳಮ್ಮ

ಗೆಲುವು ಸಾಧಿಸಿದರು.


ಅತಿ ಜಿದ್ದಾಜಿದ್ದಿ ಮತ್ತು ಕುತೂಹಲ ಕೆರಳಿಸಿದ್ದ 31  ನೇ ವಾರ್ಡ್ ನಲ್ಲಿ ಜೆಡಿಎಸ್ ಅಧ್ಯಕ್ಷರಾದ ಜಯಮುತ್ತು ಮತ್ತು ಬಂಡಾಯ ಸಾರಿ ನಿವೃತ್ತಿ ಘೋಷಿಸಿದ ಮಾಜಿ ನಗರಸಭೆ ಶ

ಸದಸ್ಯ ಜೆಸಿಬಿ ಲೋಕೇಶ್ ರವರು ತಲಾ 200 ಹಾಗೂ 120 ಮತಗಳಿಂದ ಗೆದ್ದಾಗಿದೆ ಎಂದು ಘೋಷಿಸಿಕೊಂಡಿದ್ದರು. ಆದರೆ ಮತದಾರರು ಬಿಜೆಪಿಯ ಮಂಗಳಮ್ಮನವರಿಗೆ ವಿಜಯಮಾಲೆ ಧರಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑