Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ: ಉಚಿತ ಕಾನೂನು ನೆರವು ನೀಡಲು ಸಹಾಯವಾಣಿ ಆರಂಭ

Posted date: 02 May, 2021

Powered by:     Yellow and Red

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ:  ಉಚಿತ ಕಾನೂನು ನೆರವು ನೀಡಲು ಸಹಾಯವಾಣಿ ಆರಂಭ

ಕೋವಿಡ್-19 ರ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನೊಂದವರಿಗೆ ಕಾನೂನು ನೆರವು ಒದಗಿಸಲು ಉಚಿತ ಸಹಾಯವಾಣಿಯನ್ನು ಆರಂಭಿಸಿದೆ.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಬಿ. ಜಿ. ರಮಾ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಕುರಿತು ಸಹಾಯವಾಣಿ (ಲೀಗಲ್ ಏಡ್ ಹೆಲ್ಪ್ ಲೈನ್) ಆರಂಭಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟಪ್ಪ ಬಿ ಅವರು ತಿಳಿಸಿದ್ದಾರೆ.


ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸಲಹಾ ಸಹಾಯವಾಣಿ 180042590900 ಕ್ಕೆ ಕರೆಮಾಡಿ ನೆರವು ಪಡೆದುಕೊಳ್ಳಬಹುದು. ಹಾಗೆಯೇ, ರಾಮನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕಾನೂನು ಸಲಹೆಗಾಗಿ ವಕೀಲರ ಪ್ಯಾನಲ್ ರಚಿಸಿದೆ. ಪ್ಯಾನೇಲ್ ವಕೀಲರುಗಳಾದ ಹನುಮಂತೇಗೌಡ ಎಸ್ 9632879495, ಶಶಿಧರ್ ಪಿ 7019427872 ಮತ್ತು ಆಡಳಿತ ಸಹಾಯಕರಾದ ದಿನೇಶ್ 9632329555 ಅವರುಗಳನ್ನು ಸಂಪರ್ಕಿಸುವಂತೆ ಇಲ್ಲವೆ msdlsaramanagara@gmail.com ಗೆ ಇಮೇಲ್‍ ಮೂಲಕ ಸಂಪರ್ಕಿಸಿ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟಪ್ಪ ಬಿ ಅವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑