Tel: 7676775624 | Mail: info@yellowandred.in

Language: EN KAN

    Follow us :


ಎಪಿಎಂಎಸಿ ಮಾರುಕಟ್ಟೆಯ ಮಾವಿನ ಮಂಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ತಹಶಿಲ್ದಾರ್ ನಾಗೇಶ್

Posted date: 06 May, 2021

Powered by:     Yellow and Red

ಎಪಿಎಂಎಸಿ ಮಾರುಕಟ್ಟೆಯ ಮಾವಿನ ಮಂಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರುತ್ತಿರುವ ಕಾರಣ ತಹಶೀಲ್ದಾರ್ ನಾಗೇಶ್, ಡಿವೈಎಸ್ಪಿ ರಮೇಶ್ ಮತ್ತು ಸಿಬ್ಬಂದಿಗಳು ನೆನ್ನೆ ಭೇಟಿ ನೀಡಿ, ಮಂಡಿ ವರ್ತಕರಿಗೆ ಹಾಗೂ ರೈತರಿಗೆ ಕೊರೊನಾ ಸೋಂಕಿನ ಬಗ್ಗೆ ತಿಳಿಸಿ, ಎಚ್ಚರಿಕೆ ನೀಡಿದರು.

ಇತ್ತೀಚಿಗೆ ಎಪಿಎಂಸಿ ಯಿಂದಲೇ ಹೆಚ್ಚು ಸೋಂಕು ಹರಡುತ್ತಿರುವುದಾಗಿ ತಿಳಿದು ಬಂದಿದೆ, ಹೊರ ರಾಜ್ಯಗಳಿಂದ ಮಾವಿನ ಹಣ್ಣು ಖರೀದಿಸಲು ಬರುವ ವ್ಯಾಪಾರಿಗಳು ಮತ್ತು ನೂರಾರು ಲಾರಿಗಳ ಚಾಲಕರು ಒಟ್ಟಿಗೆ ಸೇರುವ ಮೂಲಕ ಸೋಂಕು ಹರಡುತ್ತಿದೆ.


ಮಂಡಿ ವರ್ತಕರಾದ ನೀವುಗಳೇ ಎಚ್ಚೆತ್ತುಕೊಂಡು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವುದರ ಜೊತೆಗೆ ವ್ಯಾಪಾರಿಗಳು ಮತ್ತು ಚಾಲಕರಿಗೆ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಬೇಕು, ಇಲ್ಲವಾದರೆ ನೀವುಗಳೂ ಸಹ ಕೊರೊನಾ ಸೋಂಕಿನಿಂದ ಬಳಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಂಡಿ ವರ್ತಕರು ಮುಂದೆಯೂ  ಕೊರೊನಾ ಮುನ್ನೆಚ್ಚರಿಕೆ ವಹಿಸದಿದ್ದರೆ, ಕೊರೊನಾ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಮಂಡಿಗಳನ್ನು ಮುಚ್ಚಿಸಬೇಕಾಗು ತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಂದರ್ಭದಲ್ಲಿ ಎಪಿಎಂಸಿ ಆಡಳಿತ ಮಂಡಳಿ, ಪೊಲೀಸ್ ವೃತ್ತ ನಿರೀಕ್ಷರಾದ ದಿವಾಕರ್ ಮತ್ತು ಶಿವಕುಮಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑