Tel: 7676775624 | Mail: info@yellowandred.in

Language: EN KAN

    Follow us :


ಅಂಗನವಾಡಿ ಕಾರ್ಯಕರ್ತೆಯರು ಮುಂಜಾಗ್ರತೆ ವಹಿಸಿ ಕೆಲಸ ನಿರ್ವಹಿಸಿ: ನಿಮ್ಮ ಜೀವವೂ ಅಮೂಲ್ಯ. ಸಿಇಓ ಇಕ್ರಂ

Posted date: 06 May, 2021

Powered by:     Yellow and Red

ಅಂಗನವಾಡಿ ಕಾರ್ಯಕರ್ತೆಯರು ಮುಂಜಾಗ್ರತೆ ವಹಿಸಿ ಕೆಲಸ ನಿರ್ವಹಿಸಿ: ನಿಮ್ಮ ಜೀವವೂ ಅಮೂಲ್ಯ. ಸಿಇಓ ಇಕ್ರಂ

ಕೋವಿಡ್ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಹೋಮ್ ಐಸೊಲೇಷನ್ ಹಾಗೂ ಹೋಮ್ ಕ್ವಾರಂಟೈನ್ ನೀಡಲಾಗಿದೆ. ಸೋಂಕಿತರ ಆರೋಗ್ಯದ ಬಗ್ಗೆ ಪರಿಶೀಲನೆಗೆ ತೆರಳುವ ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಕೈ ಗವಸುಗಳನ್ನು ಧರಿಸಬೇಕು, ಸ್ಯಾನಿಟೈಜರ್ ಬಳಸಬೇಕು. ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ತಿಳಿಸಿದರು.


ಅವರು ಇಂದು ವರ್ಚುಯಲ್ ಸಭೆಯ ಮೂಲಕ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಬೇಕಿರುವ  ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಹಾಗೂ ಸ್ಯಾನಿಟೈಜರ್ ಗಳನ್ನು ಪ್ರಾಥಮಿಕ‌ ಆರೋಗ್ಯ ಕೇಂದ್ರದಿಂದ ನೀಡಲಾಗುವುದು. ಅಲ್ಲಿ ಕೊರತೆ ಇದ್ದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಪಡೆದುಕೊಳ್ಳುವುದು. ಇದರ ವ್ಯವಸ್ಥೆಯನ್ನು ಸಿ.ಡಿ.ಪಿ.ಓ ಗಳು ಪರಿಶೀಲಿಸಿ ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆಯರಿಗೆ ಸುರಕ್ಷತಾ ವಸ್ತು ದೊರಕಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದರು.


ಹೋಮ್ ಐಸೊಲೇಷನ್ ಸೋಂಕಿತರ ಮನೆಗೆ ಭೇಟಿ ನೀಡಿದಾಗ ಸೋಂಕಿತರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ಸೋಂಕಿತರ ವ್ಯಾಪ್ತಿಯ ಆರೋಗ್ಯಾಧಿಕಾರಿಗಳ ಗಮನಕ್ಕೆ ತನ್ನಿ, ವೈದ್ಯರು ಮುಂದಿನ ಚಿಕಿತ್ಸೆಯ ವ್ಯವಸ್ಥೆ ಮಾಡಲಿದ್ದಾರೆ ಎಂದರು.


ಆಹಾರದ ಕೊರತೆ ಇರುವ ವಲಸೆ ಕಾರ್ಮಿಕರು,ಬಡವರು, ಕಾರ್ಮಿಕರು ಕಂಡುಬಂದರೆ ತಕ್ಷಣ ತಮ್ಮ ವ್ಯಾಪ್ತಿಯ ಸಿ.ಡಿ.ಪಿ.ಓ ಗಳ ಗಮನಕ್ಕೆ ತನ್ನಿ, ಜಿಲ್ಲಾಡಳಿತದಲ್ಲಿ ಸಂಪನ್ಮೂಲದ ಕೊರತೆ ಇಲ್ಲ. ಅವರಿಗೆ ಬೇಕಿರುವ ಆಹಾರದ ವ್ಯವಸ್ಥೆಯನ್ನು ಇಲಾಖೆ ಅಥವಾ ಸಿ.ಎಸ್.ಆರ್ ಅನುದಾನದ ಮೂಲಕ ಮಾಡಲಾಗುವುದು ಎಂದರು.


ಅಂಗನವಾಡಿ ಮೂಲಕ ಮಕ್ಕಳು,ಗಭೀರ್ಣಿ, ಬಾಣಂತಿಯರಿಗೆ ನೀಡಲಾಗುವ ಆಹಾರ ನಿಗಧಿತ ಅವಧಿಯಲ್ಲಿ ಅವರಿಗೆ ತಲುಪಿಸಿ. ಪೋಷಕರಿಗೆ ಅಂಗನವಾಡಿಯಿಂದ ನೀಡಲಾಗುವ ಆಹಾರವನ್ನು ಅಂಗನವಾಡಿಯಲ್ಲಿ ನೊಂದಣಿಯಾಗಿರುವ ಮಗುವಿಗೆ ನೀಡುವಂತೆ ಜಾಗೃತಿ ಮೂಡಿಸಿ ಇದರಿಂದ ಮಕ್ಕಳ ಅಪೌಷ್ಟಿಕತೆಯನ್ನು ತಡೆಗಟ್ಟಬಹುದು ಎಂದರು.


ಗ್ರಾಮಗಳಲ್ಲಿ ಗ್ರಾಮ ಪಂಚಾಯತ್ ಪಡೆಗಳನ್ನು ರಚಿಸಲಾಗಿದೆ. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕೂಡ ಸದಸ್ಯರಾಗಿರುತ್ತಾರೆ. ಈ ಪಡೆಯಲ್ಲಿ, ಗ್ರಾಮದಲ್ಲಿ ಜನರ ಆರೋಗ್ಯದ ಬಗ್ಗೆ ಚರ್ಚಿಸಲಾಗುವುದು. ಗ್ರಾಮದ ಯಾವುದಾದರೂ ಭಾಗದಲ್ಲಿ ಜನರು ಹೆಚ್ಚಿಗೆ ಸೇರಿ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದಲ್ಲಿ, ಪೊಲೀಸ್ ಗಮನಕ್ಕೆ ತರಬೇಕು ಎಂದರು.


*ಲಸಿಕೆ ಪಡೆದುಕೊಳ್ಳಿ:* ಅಂಗನವಾಡಿ ಕಾರ್ಯಕರ್ತೆಯರು ತಪ್ಪದೇ ಲಸಿಕೆ ಪಡೆದುಕೊಳ್ಳಿ. ಮೊದಲ ಡೋಸ್ ಪಡೆದುಕೊಂಡಿರುವವರು ನಿಗಧಿತ ಸಮಯದಲ್ಲಿ ಎರಡನೇ ಡೋಸ್ ಪಡೆದುಕೊಳ್ಳಿ.  ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಕೋವಿಡ್ ಸೋಂಕಿನಿಂದ  ರಕ್ಷಿಸಿಕೊಳ್ಳಬಹುದು. ಮೊದಲ ಅಲೆಯಲ್ಲಿ ಬಹಳಷ್ಟು ವೈದ್ಯರು, ಆರೋಗ್ಯ, ಪೊಲೀಸ್ ಸಿಬ್ಬಂದಿಗಳು ಸೋಂಕಿಗೆ ಒಳಗಾಗಿದ್ದರು, ಈ ಬಾರಿ ಲಸಿಕೆ ಪಡೆದಿರುವ ಹಿನ್ನಲೆಯಲ್ಲಿ ವೈದ್ಯರು, ಆರೋಗ್ಯ, ಪೊಲೀಸ್ ಸಿಬ್ಬಂದಿಗಳು ಸೋಂಕಿಗೆ ಒಳಗಾಗುತ್ತಿಲ್ಲ  ಎಂದರು‌.


ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್ ಸಿ.ವಿ, ರಾಯರದೊಡ್ಡಿ ಪಿ.ಹೆಚ್.ಸಿ ವೈದ್ಯರಾದ ರಾಜು ರಾಥೋಡ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑