Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲೊಂದು ಒಳ್ಳೆಯ ಜಾಗ. ಪಾಳುಬಿದ್ದ ಮನೆಗಳಿಗೆ ಹೊಸರೂಪ ನೀಡಿ ಹಂಚಲು ಸಕಾಲ

Posted date: 12 May, 2021

Powered by:     Yellow and Red

ಜಿಲ್ಲೆಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲೊಂದು ಒಳ್ಳೆಯ ಜಾಗ. ಪಾಳುಬಿದ್ದ ಮನೆಗಳಿಗೆ ಹೊಸರೂಪ ನೀಡಿ ಹಂಚಲು ಸಕಾಲ

ಕೊಳಚೆ ನಿರ್ಮೂಲನಾ ಮಂಡಳಿ ಇಲಾಖೆ ವತಿಯಿಂದ ರಾಮನಗರ ತಾಲ್ಲೂಕಿನ ಚನ್ನಪಟ್ಟಣ ಕೆಂಗಲ್ ದೇವಾಲಯದ ಕೂಗಳತೆ ದೂರಿನ ಜಯಪುರ ಗ್ರಾಮದ ಬಳಿ ಸುಸಜ್ಜಿತ ಎರಡು ಅಂತಸ್ತಿನ, ನಾಲ್ಕು ಸಂಸಾರಗಳು ವಾಸಿಸುವ, ಸರಿಸುಮಾರು ನೂರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದು ಹತ್ತಿರಹತ್ತಿರ ದಶಕಗಳೇ ಕಳೆಯುತ್ತಿವೆ. ಈ ಎಲ್ಲಾ ಮನೆಗಳ ಸುತ್ತಾ ಗಿಡಗಂಟಿಗಳು ಬೆಳೆದುನಿಂತಿದ್ದು, ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲಾದ್ಯಂತ ಕೊರೊನಾ ಸೋಂಕಿತರು ಹೆಚ್ಚಾಗಿದ್ದು, ಅವರಿಗೆ ಚಿಕಿತ್ಸೆ ನೀಡಲು ಈ ಮನೆಗಳನ್ನು ಉಪಯೋಗಿಸಿಕೊಂಡರೆ ಎರಡು ಲಾಭಗಳನ್ನು ಪಡೆಯಬಹುದಾಗಿದೆ.


ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕೋವಿಡ್ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಸಿಗದೆ ನೂರಾರು ಸಂಖ್ಯೆಯಲ್ಲಿ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಸದ್ಯ ಇಲ್ಲಿರುವ ಎಲ್ಲಾ ಮನೆಗಳಿಗೂ ವಿದ್ಯುತ್ ಮತ್ತು ನೀರಿನ ಸೌಕರ್ಯಳಿದ್ದು, ಅಲ್ಲಲ್ಲೇ ಟ್ರಾನ್ಸ್ ಫಾರ್ಮರ್ ಗಳು, ಬೋರ್ ವೆಲ್ ಗಳು, ನೀರಿನ ತೊಟ್ಟಿಗಳು ಮತ್ತು ತೊಂಬೆಗಳೂ ಇವೆ. ಕಿಟಕಿ ಮತ್ತು ಬಾಗಿಲುಗಳನ್ನು ಹಾಕಿಸಿ, ಸ್ವಚ್ಚಗೊಳಿಸಿದರೆ ಸಂಪೂರ್ಣವಾಗಿ ವಾಸಕ್ಕೆ ಯೋಗ್ಯವಾಗುತ್ತವೆ. ಮನೆಗಳನ್ನು ಸುಸ್ಥಿತಿಗೆ ತರಲು ಕೊಳಚೆ ನಿರ್ಮೂಲನಾ ಮಂಡಳಿ ಪ್ರಯತ್ನ ಮಾಡಿದರೆ, ಯಾವುದೋ ಭವನಕ್ಕೋ, ಕಲ್ಯಾಣ ಮಂಟಪಕ್ಕೋ ಬೆಡ್,ಆಕ್ಸಿಜನ್ ಜೋಡಿಸುವ ಬದಲು ಇಲ್ಲೇ ಜೋಡಿಸಬಹುದು.


ಈ ಮನೆಗಳ ಬಳಿ ಒಂದು ವಾಸದ ಮನೆ ಹೊರತುಪಡಿಸಿದರೆ ಕಿಲೋಮೀಟರ್ ಯಾವುದೇ ಗ್ರಾಮಗಳಿಲ್ಲ. ಮನೆಗಳಿರುವ ಜಾಗಕ್ಕೆ ಚನ್ನಪಟ್ಟಣ, ರಾಮನಗರ ಮತ್ತು ಮಾಗಡಿ ಕಡೆಯಿಂದ ಬರಲು ಉತ್ತಮ ರಸ್ತೆಗಳಿವೆ. ಬಹಳ ಮುಖ್ಯವಾಗಿ ಅತಿ ಹೆಚ್ಚು 'ಸಹಜ' ಆಕ್ಸಿಜನ್ ಸಿಗುವ ವಾತಾವರಣವಿರುವಿದ್ದು, ಸಂಪರ್ಕ ಕಡಿಮೆ ಇರುವುದರಿಂದ, ಮಾನಸಿಕವಾಗಿ ಮತ್ತು ದೈಹಿಕವಾಗಿ ರೋಗಿ ಗುಣಮುಖನಾಗಲು ಅನುಕೂಲವಾಗುವುದರಲ್ಲಿ ಅನುಮಾನವೇ ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಮ್ಮೆ ಭೇಟಿ ಕೊಟ್ಟು ಅವಲೋಕಿಸದರೆ ಎರಡು ಕೆಲಸಗಳು ಸುಲಭವಾಗಿ ಆಗುವುದರಲ್ಲಿ ಅನುಮಾನವೇ ಇಲ್ಲ.


ಇತ್ತೀಚೆಗೆ ಬೆಂಗಳೂರಿನಿಂದ ಎರಡು ಕಾರಿನಲ್ಲಿ ಆರು ಮಂದಿ (ಮೂರು ಹುಡುಗರು ಮತ್ತು ಮೂರು ಹುಡುಗಿಯರು) ಪೋಟೋ ಶೂಟ್ ನೆಪದಲ್ಲಿ ಬಂದು ಅನೈತಿಕ ಚಟುವಟಿಕೆ ನಡೆಸುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಏಟು ತಿಂದಿದ್ದರು. ತದನಂತರ ರಾಮನಗರ ಗ್ರಾಮಾಂತರ ಪೋಲೀಸರು ಬಂದು ಕರೆದೊಯ್ದರಾದರೂ ಯಾವುದೇ ದೂರು ದಾಖಲಿಸದೆ ಬಿಟ್ಟು ಕಳುಹಿಸಿದ್ದಾಗಿ ತಿಳಿದುಬಂತು. ಇದಕ್ಕಿಂತಲೂ ಘೋರ ಅಪರಾಧಗಳು ನಡೆಯುವ ಮುನ್ನಾ ಎಚ್ಚೆತ್ತುಕೊಂಡರೆ ಒಳ್ಳೆಯದು.


ಈಗಾಗಲೇ ಮನೆಗಳನ್ನು ನಿರ್ಮಿಸಿ ದಶಕ ಕಳೆಯುತ್ತಿರುವುದರಿಂದ, ಈ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಅಥವಾ ಈಗಾಗಲೇ ನೀಡಿದರೇ ಅವರು ವಾಸಿಸಲು ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ, ತೀರ್ಮಾನ ತೆಗೆದುಕೊಳ್ಳುವ ಮೂಲಕ ಇಲ್ಲಿ ನಡೆಯುವ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳನ್ನು ತಡೆಯುವುದರ ಜೊತೆಗೆ, ಅದಕ್ಕೆ ದಾಸರಾಗುವವರು ಹಾಗೂ ತೊಡಗಿಸಿಕೊಳ್ಳುವವರನ್ನು ತಡೆಗಟ್ಟಂತಾಗುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑