Tel: 7676775624 | Mail: info@yellowandred.in

Language: EN KAN

    Follow us :


ಆದಿಚುಂಚನಗಿರಿ ಮಠದ ವತಿಯಿಂದ ತಾಲ್ಲೂಕಿನಾದ್ಯಂತ ಇರುವ ಕೊರೊನಾ ಸೋಂಕಿತರಿಗೆ ಔಷಧ ಕಿಟ್ ನೀಡಿದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

Posted date: 14 May, 2021

Powered by:     Yellow and Red

ಆದಿಚುಂಚನಗಿರಿ ಮಠದ ವತಿಯಿಂದ ತಾಲ್ಲೂಕಿನಾದ್ಯಂತ ಇರುವ ಕೊರೊನಾ ಸೋಂಕಿತರಿಗೆ ಔಷಧ ಕಿಟ್ ನೀಡಿದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇರುವ ಕೊರೊನಾ ಸೋಂಕಿತರಿಗೆ ಆಯಾಯ ಭಾಗದಲ್ಲಿರುವ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಗೆ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ಕೊರೊನಾ ಮೆಡಿಸನ್ ಕಿಟ್ ಗಳನ್ನು ವಿತರಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ದ ಗುರು ಶ್ರೀ ಡಾ ಬಾಲಗಂಗಾಧರನಾಥ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ, ಪೀಠಾಧಿಪತಿಗಳಾದ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಇರುವ ಕೊರೊನಾ ರೋಗಿಗಳಿಗೆ ಮೆಡಿಸನ್ ಕಿಟ್ ಗಳನ್ನು ಹಂಚುತ್ತಿದ್ದು, ರಾಮನಗರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ಗುರುವಾರ ದಂದು ಹಂಚಿದರು.


ಇದೇ ವೇಳೆ ಮಾತನಾಡಿದ ಸ್ವಾಮೀಜಿಗಳು ನಿರ್ಮಲಾನಂದನಾಥ ಸ್ವಾಮೀಜಿಗಳು ಜನರ ಆರೋಗ್ಯ ದೃಷ್ಟಿಯಿಂದ ಈ ಮೆಡಿಸನ್ ಕಿಟ್ ಗಳನ್ನು ನೀಡಲು ಮುಂದಾಗಿದ್ದಾರೆ. ಕೊರೊನಾ ಎಂಬುದು ಜಗತ್ತಿಗೆ ಅಂಟಿದ ಮಹಾಮಾರಿ ಆಗಿದೆ. ಇದರಿಂದ ಪಾರಾಗಲು ಸರ್ವರೂ ಕೈಜೋಡಿಸಬೇಕಿದೆ. ವೈದ್ಯರು, ದಾದಿಯರು, ಪೋಲೀಸರು ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ಸ್‌ ಗಳಿಗೆ ಸೋಂಕಿತರು ಮತ್ತು ಪೋಷಕರು ಸಾಥ್ ನೀಡಿದರೆ ಕೊರೊನಾ ತೊಲಗಿಸಲು ಸಾಧ್ಯ ಎಂದರು.


ತಾಲ್ಲೂಕಿನ ಆರೋಗ್ಯ ಕೇಂದ್ರಗಳಾದ ಬಿ ವಿ ಹಳ್ಳಿ, ಅಕ್ಕೂರುಹೊಸಹಳ್ಳಿ, ಇಗ್ಗಲೂರು, ಸಂತೆಮೊಗೇನಹಳ್ಳಿ, ಹೊಂಗನೂರು, ನಗರದ ಇಸ್ಲಾಂಪುರ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನಾದ್ಯಂತ ಇರುವ ಎಲ್ಲಾ ಆರೋಗ್ಯ ಕೇಂದ್ರಗಳ ಮೂಲಕ ಹೋಂ ಐಸೋಲೇಷನ್ ನಲ್ಲಿರುವ ಕೊರೊನಾ ರೋಗಿಗಳಿಗೆ ಕೊರೊನಾ ಮೆಡಿಸನ್ ಕಿಟ್ ಗಳನ್ನು ವಿತರಿಸಿದರು.


ಕಿಟ್ ವಿತರಣಾ ಸಂದರ್ಭದಲ್ಲಿ ಆಯಾಯ ಆರೋಗ್ಯ ಕೇಂದ್ರಗಳ ವೈದ್ಯರು, ತಹಶಿಲ್ದಾರ್ ನಾಗೇಶ್, ತಾಲ್ಲೂಕು ವೈದ್ಯಾಧಿಕಾರಿ ಕೆ ಪಿ ರಾಜು, ಆಸ್ಪತ್ರೆಯ ಸಿಬ್ಬಂದಿಗಳು, ಶ್ರೀ ನಂದಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಮತ್ತು ಸ್ನೇಹಿತರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑