Tel: 7676775624 | Mail: info@yellowandred.in

Language: EN KAN

    Follow us :


ಬಯಲುಸೀಮೆ ಸಂಜೆ ದಿನಪತ್ರಿಕೆಯ ಕನಕಪುರ ವರದಿಗಾರ ಶಿವಲಿಂಗಯ್ಯ ನಿಧನ. ಸಂಪಾದಕ ಸು ತ ರಾ ತೀವ್ರ ಸಂತಾಪ

Posted date: 19 May, 2021

Powered by:     Yellow and Red

ಬಯಲುಸೀಮೆ ಸಂಜೆ ದಿನಪತ್ರಿಕೆಯ ಕನಕಪುರ ವರದಿಗಾರ ಶಿವಲಿಂಗಯ್ಯ ನಿಧನ. ಸಂಪಾದಕ ಸು ತ ರಾ ತೀವ್ರ ಸಂತಾಪ

ಕನಕಪುರ:ಮೇ.19. ಬಯಲುಸೀಮೆ ಸಂಜೆ ದಿನಪತ್ರಿಕೆಯ ಕನಕಪುರ ವರದಿಗಾರ ಎಲ್ ಶಿವಲಿಂಗಯ್ಯ(62) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು  ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡಿ ಸರಿ ಸುಮಾರು ೨೮ ವರ್ಷಗಳು ಸಂದಿವೆ.

ಈ ಅವಧಿಯಲ್ಲಿ ಅವರು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡುತ್ತಾ, ಪ್ರಾಮಾಣಿಕತೆ ಮತ್ತು ಶಿಸ್ತಿನಿಂದ ಬದುಕು ಸಾಗಿಸಿಕೊಂಡು ಅತಿಯಾದ ಆಸೆಗೆ ಒಳಗಾಗದೆ ಬದುಕಿದವರು.


ಇವರು ಮೂಲತಃ ಚನ್ನಪಟ್ಟಣ ತಾಲ್ಲೂಕು ಸುಳ್ಳೇರಿ ಗ್ರಾಮದವರು ಅಂದರೆ ಬಯಲುಸೀಮೆ ಸಂಜೆ ದಿನಪತ್ರಿಕೆ ಸಂಪಾದಕರಾದ ಸು ತ ರಾಮೇಗೌಡ ರ ಊರಿನವರು, ಇವರ ತಂದೆ ತೋಟಗಾರಿಕೆ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಆಗ ಅವರು ಲಾಲ್‌ಬಾಗ್‌ನಲ್ಲಿ ಕೆಲಸ ಮಾಡಿ, ನಿವೃತ್ತಿ ನಂತರ ಸಾವಿಗೆ ಒಳಗಾದರು.


ಆಮೇಲೆ ಅವರು ಬೆಂಗಳೂರಿನಲ್ಲಿ ಬದುಕು ಸಾಗಿಸಲು ಸಾಧ್ಯವಾಗದೆ ಊರಿನ ಕಡೆಗೆ ಬಂದರು. ಆಗ ಶಿವಲಿಂಗಯ್ಯ ನನ್ನ ಕಡೆಗೆ ಬಂದು ನನಗೆ ಏನಾದರು ಕೆಲಸ ಕೊಡಿ ಮಾಡುತ್ತೇನೆ ಎಂದ.

ಆತ ಎಸ್‌ಎಸ್‌ಎಲ್‌ಸಿ ಓದಿದ್ದರಿಂದ ಆತನಿಗೆ ಪತ್ರಿಕೆಯ ವರದಿಗಾರಿಕೆಯ ಸಂಬಂಧ ತರಬೇತಿ ನೀಡಿ ಅವನನ್ನು ಕನಕಪುರಕ್ಕೆ ಕಳುಹಿಸಿಕೊಡಲಾಯಿತು.

ಆತ ಅಲ್ಲಿ ಜನಸಂಪರ್ಕ ಹೊಂದಿ, ಎಲ್ಲರೊಳಗೆ ಒಂದಾಗಿ ಹಲವು ಸಾರಿ ಬಹಳಷ್ಟು ಹಿರಿಯರು, ಪತ್ರಕರ್ತರ ಸಮಸ್ಯೆ ಇದ್ದರೆ ಶಿವಲಿಂಗಯ್ಯ ಅವರನ್ನು ಕರೆದು ತನ್ನಿ ಎಂದು ಹೇಳುವಷ್ಟರ ಮಟ್ಟಿಗೆ ಅಲ್ಲಿ ಹಾಸು ಹೊಕ್ಕಾಗಿದ್ದರು.


ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಪತ್ರಕರ್ತರ ಹಿತಕ್ಕಾಗಿ ದುಡಿದಿದ್ದರ ಬಗ್ಗೆ ಈಗಲೂ ಸಹ ಹಲವರು ಸ್ಮರಿಸಿಕೊಳ್ಳುತ್ತಾರೆ.

ನೆನ್ನೆ ರಾತ್ರಿ ಇದ್ದಕ್ಕಿದ್ದಂತೆ ಹೃದಯಘಾತವಾಗಿದೆ, ತಕ್ಷಣ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಗಿದೆ, ಆದರೂ ಕೂಡ ಅವರು ಬದುಕಿ ಉಳಿಯಲಿಲ್ಲ.


ಇಂದು ಮಧ್ಯಾಹ್ನ ಅವರ ಹುಟ್ಟೂರಾದ ಸುಳ್ಳೇರಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

ಇವರು ಮಗ, ಮಗಳು ಹಾಗೂ ಬಂಧುಗಳನ್ನು ಅಗಲಿ ಹೋಗಿದ್ದಾರೆ. ಶ್ರೀಯುತರ ಪತ್ರಿಕಾ ಸೇವೆ ಸ್ಮರಣಾರ್ಹವಾದುದು. ಪತ್ರಿಕೆಯ ವರದಿಗಾರರಾಗಿ ಪತ್ರಿಕೆಗೂ ಗೌರವ ತಂದು ಕೊಟ್ಟಿದ್ದಾರೆ. ಇವರ ಸಾವಿನಿಂದ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ‘ಬಯಲುಸೀಮೆ’ ಪತ್ರಿಕಾ ಬಳಗವು ಅವರ ಆತ್ಮಕ್ಕೆ ಶಾಂತಿ ಬಯಸಿ, ಅವರ ಕುಟುಂಬಕ್ಕೆ ಅವರ ಸಾವಿನ ದುಃಖ ಭರಿಸುವ ಶಕ್ತಿ ಬರಲಿ ಎಂದು ಕೋರಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑