Tel: 7676775624 | Mail: info@yellowandred.in

Language: EN KAN

    Follow us :


ಗ್ರಾಮೀಣ ಭಾಗದಲ್ಲಿ ನೆಲೆಸಿರುವ ವಲಸಿಗರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದ ಅಕ್ಕೂರು ಪೋಲೀಸ್ ಠಾಣೆಯ ಸಿಬ್ಬಂದಿ

Posted date: 22 May, 2021

Powered by:     Yellow and Red

ಗ್ರಾಮೀಣ ಭಾಗದಲ್ಲಿ ನೆಲೆಸಿರುವ ವಲಸಿಗರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದ ಅಕ್ಕೂರು ಪೋಲೀಸ್ ಠಾಣೆಯ ಸಿಬ್ಬಂದಿ

ಈಗ ಕೋವಿಡ್ ಸಮಯ. ಅದರಲ್ಲೂ ಇಂದಿನಿಂದ ಮುಂದಿನ ಜೂನ್ 7 ರ ತನಕ ಕಟ್ಟುನಿಟ್ಟಿನ ಲಾಕ್ಡೌನ್ ನ್ನು ಸರ್ಕಾರ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಕೂಲಿಗಾಗಿ ಬಂದವರ ಪಾಡು ಹೇಳತೀರದಾಗಿದೆ. ಇಂತಹವರ ಕಷ್ಟಕ್ಕೆ ಸರ್ಕಾರ ಇನ್ನೂ ಸರಿಯಾಗಿ ಸ್ಪಂದಿಸಿಲ್ಲ. ಇವರ ಬದುಕು ಅಲ್ಲಿಯೂ ಸಲ್ಲದೆ, ಇಲ್ಲಿಯೂ ಸಲ್ಲದೆ ಬೀದಿಗೆ ಬಿದ್ದಿದೆ.


ನಗರದಲ್ಲಿನ ಭಿಕ್ಷುಕರಿಗೆ, ನಿರಾಶ್ರಿತರಿಗೆ ಮತ್ತು ವಲಸಿಗರಿಗೆ ಸಿ ಪಿ ಯೋಗೇಶ್ವರ್, ಸಿಂಚನ ಗೆಳೆಯರ ಬಳಗ ಸೇರಿದಂತೆ ಐದಾರು ತಂಡಗಳು ದಿನನಿತ್ಯವೂ ಊಟ ನೀಡುತ್ತಿವೆ. ಆದರೆ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಇವರು ಆಹಾರಕ್ಕಾಗಿ ಪರದಾಡುವಂತಾಗಿದೆ.


ಇದನ್ನು ಗಮನಿಸಿದ ಅಕ್ಕೂರು ಪೋಲೀಸ್ ಠಾಣೆಯ ಮೂವರು ಪೇದೆಗಳಾದ ಬಸವಪ್ರಭು ಪಾಪಣ್ಣ ಲಮಾಣಿ ಮತ್ತು ಸೋಮನಾಥ ಕೌಲಗಿ ಯವರು ಆಹಾರದ ಕಿಟ್ ಗಳನ್ನು ವಿತರಿಸಿದರು.


ಮೊದಲಿಗೆ ಕೋಡಂಬಳ್ಳಿ ಗ್ರಾಮದಲ್ಲಿ 25 ಮಂದಿಗೆ ಕಿಟ್ ನೀಡಿದ್ದು ಶುಕ್ರವಾರ ಸಂಜೆಯ ವೇಳೆಯಲ್ಲಿ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ 25 ಮಂದಿಗೆ ಆಹಾರ , ನೀಡಿದರು.


ಗ್ರಾಮೀಣ ಪ್ರದೇಶಗಳಲ್ಲೂ ಬಡವರನ್ನು ಗುರುತಿಸಿ ಕಿಟ್ ನೀಡುತ್ತಿರುವ ಈ ಪೋಲಿಸ್ ಸಿಬ್ಬಂದಿಗಳನ್ನು ಗ್ರಾಮಾಂತರ ಪೋಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್, ಅಕ್ಕೂರು ಪೋಲೀಸ್ ಠಾಣೆಯ ಎಸ್ಐ ಸರಸ್ವತಿ ಮತ್ತು ಸಹೋದ್ಯೋಗಿಗಳು, ಮುಖಂಡರಾದ ಕೋಡಂಬಳ್ಳಿ ನಾಗರಾಜು ಹಾಗೂ ಮುಖಂಡರು ಅಭಿನಂದಿಸಿದ್ದಾರೆ. 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑