Tel: 7676775624 | Mail: info@yellowandred.in

Language: EN KAN

    Follow us :


ನಗರದ ಉದ್ಯಮಿ ಮೆಡಿಕಲ್ ಕಿರಣ ಆತ್ಮಹತ್ಯೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ 105 ದಿನಕ್ಕೆ ಪತಿಯೂ ಆತ್ಮಹತ್ಯೆ. ಅನಾಥವಾದ ಮಗು. ಕಾರಣವೇನು ?

Posted date: 10 Jun, 2021

Powered by:     Yellow and Red

ನಗರದ ಉದ್ಯಮಿ ಮೆಡಿಕಲ್ ಕಿರಣ ಆತ್ಮಹತ್ಯೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ 105 ದಿನಕ್ಕೆ ಪತಿಯೂ ಆತ್ಮಹತ್ಯೆ. ಅನಾಥವಾದ ಮಗು. ಕಾರಣವೇನು ?

ಮೆಡಿಕಲ್ ಕಿರಣ ಎಂದೇ ಪ್ರಸಿದ್ಧಿಯಾದ ಗುತ್ತಿಗೆದಾರ, ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಎಂ ರಸ್ತೆಯಲ್ಲಿನ ಮೆಡಿಕಲ್ ಸ್ಟೋರ್ ನ ಮಾಲೀಕ ತಾಲ್ಲೂಕಿನ ಮೆಣಸಿಗನಹಳ್ಖಿ ಗ್ರಾಮದ ಕಿರಣ್ ಬುಧವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡ 100 ದಿನಗಳ ಅಂತರದಲ್ಲಿ ಬೆಳ್ಳಂಬೆಳಿಗ್ಗೆ ತನ್ನ ಮೆಡಿಕಲ್ ಸ್ಟೋರ್ ಗೆ ತೆರಳಿ, ತನ್ನ ಮುಷ್ಠಿ ಹಿಡಿಯುವಷ್ಟು ಯಾವುದೋ ಮಾತ್ರೆಗಳನ್ನು ತಂದು, ನುಂಗಿದ್ದು, ನುಂಗಿದ ತಕ್ಷಣ ಮನೆಯ ಹಿಂದಿನ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡಿದ್ದಾರೆ. ಆಗ ತಾನೆ ವಾಕಿಂಗ್ ಮುಗಿಸಿ ಬಂದ ಅವರ ದೊಡ್ಡಪ್ಪ, ತಕ್ಷಣ ಎಚ್ಚೆತ್ತುಕೊಂಡು, ಉರುಳಿನಿಂದ ಬಿಡಿಸಿ, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾ ಕುಮಾರಿ ಮತ್ತು  ಅವರ ಪತಿ ರೇಷ್ಮೆ ಉದ್ಯಮಿ ಚಂದ್ರು ರವರ ಸಹಾಯದೊಂದಿಗೆ, ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಜೀವನ್ಮರಣದ ಹೋರಾಟದಲ್ಲಿ ಗೆದ್ದ ಕಿರಣ್ ನನ್ನು ಶನಿವಾರ ಸಂಜೆ ಮನೆಗೆ ಕರೆತಂದಿದ್ದರು.


ಲವಲವಿಕೆಯಿಂದ ಇದ್ದ ಕಿರಣ್ ಬುಧವಾರ ರಾತ್ರಿ ಮತ್ತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕಿರಣ್ ರವರ ಸಹೋದರ ಅರುಣ್ ನಗರ ಠಾಣೆಗೆ ದೂರು ದಾಖಲಿಸಿದ್ದಾರೆ. ಕಿರಣ್ ರವರ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷಿಸಿ ವಾರಸುದಾರರಿಗೆ ಒಪ್ಪಿಸಿದ್ದು, ಅವರ ಸ್ವಗ್ರಾಮ ಮೆಣಸಿಗನಹಳ್ಳಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಿತು.


ಆದರೆ ಇದ್ದೊಬ್ಬ ಮೂರೂವರೆ ವರ್ಷದ ಪುಟ್ಟ ಬಾಲಕಿ, ಅನಾಥೆಯಾಗಿದ್ದು, ಅರಿಯದ ಪಾಪು ಏನು ಪಾಪ ಮಾಡಿತ್ತು ಎಂದು ಸಾರ್ವಜನಿಕರ ಅಳಲಾಗಿದೆ. ಪತ್ನಿ ಸಾಯಲು ಏನು ಕಾರಣ ? ಪತ್ನಿಯ ಸಾವಿನಿಂದ ಪತಿ ಖಿನ್ನತೆಗೊಳಗಾಗಿದ್ದರಾ ? ಆಗಿದ್ದರೆ ನೂರು ದಿನಗಳ ನಂತರ ಆತ್ಮಹತ್ಯೆಗೆ ಶರಣಾಗಿದ್ದೇಕೆ ? ಕಿರಣ್ ರವರ ಕುಟುಂಬದವರು ಕಿರಣ್ ರವರ ಪುತ್ರಿಯನ್ನು ದ್ವೇಷಿಸುತ್ತಿರುವುದೇಕೆ (ಊಹಾಪೋಹ) ? ಈ ಎರಡು ಆತ್ಮಹತ್ಯೆಯ ಹಿಂದಿನ ರಹಸ್ಯವನ್ನು ಪೋಲೀಸರು ಬಿಚ್ಚಿಡಬೇಕಾಗಿದೆ. ಆಗಲೇ ಆತ್ಮಗಳಿಗೆ ತೃಪ್ತಿ ದೊರೆಯುವ ಜೊತೆಗೆ ಆ ಪುಟ್ಟ ಬಾಲಕಿಗೆ ನ್ಯಾಯ ಸಿಗಬಹುದು. ಇಲ್ಲವಾದರೆ ಆ ಬಾಲೆಯ ಬದುಕು ನರಕ ಸದೃಶವಾಗುವುದರಲ್ಲಿ ಆಶ್ಚರ್ಯ ಅನುಮಾನವೇನಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑