Tel: 7676775624 | Mail: info@yellowandred.in

Language: EN KAN

    Follow us :


ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಸಿಡಿಪಿಓ ಮತ್ತು ತಂಡ

Posted date: 14 Jun, 2021

Powered by:     Yellow and Red

ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಸಿಡಿಪಿಓ ಮತ್ತು ತಂಡ

ಚನ್ನಪಟ್ಟಣ: ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳು ಸರಳಗೊಂಡಿವೆ. ಇದರೊಂದಿಗೆ ಕೆಲವೆಡೆ ಬಾಲ್ಯವಿವಾಹ ಪ್ರಕರಣಗಳು ಸಹ ಕಂಡು ಬರುತ್ತಿವೆ.

ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವೊಂದನ್ನು ಅಧಿಕಾರಿಗಳು ತಡೆದು, ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ..


ಭಾನುವಾರ ಬೆಳಿಗ್ಗೆ ಕೋಡಂಬಳ್ಳಿ ಸಮೀಪದ ಹುಚ್ಚಯ್ಯನದೊಡ್ಡಿ ಗ್ರಾಮದ ಗದ್ದಿಗೆ ಮಹದೇಶ್ವರ ದೇವಾಲಯದಲ್ಲಿ ಅಂಬಾಡಹಳ್ಳಿ ಗ್ರಾಮದ 15 ವರ್ಷದ ರೂಪ ( ಹೆಸರು ಬದಲಾಯಿಸಿದೆ) ಹಾಗೂ 26 ವರ್ಷದ ಹುಣಸನಹಳ್ಳಿ ಗ್ರಾಮದ (ಅನಿಲ್) ಹೆಸರು ಬದಲಾಯಿಸಿದೆ. ಈ ಇಬ್ಬರಿಗೂ  ವಿವಾಹ ನಡೆಸಲಾಗುತಿತ್ತು.


ಅಪ್ರಾಪ್ತ ಬಾಲಕಿಗೆ ವಿವಾಹ ನಡೆಸಲಾಗುತ್ತಿದೆ ಎಂಬ ದೂರುಬಂದ ಹಿನ್ನೆಲೆಯಲ್ಲಿ ಮುಂಜಾನೆಯೇ ಮದುವೆಯ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು  ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಂ.ಕೆ.ಸಿದ್ದಲಿಂಗಯ್ಯ ಹಾಗೂ ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಅಕ್ಕೂರು ಪೊಲೀಸರ ಸಹಕಾರದೊಂದಿಗೆ ಹಸೆಮಣೆಗೆ ಏರುತ್ತಿದ್ದ ಬಾಲಕಿಯನ್ನು ರಕ್ಷಿಸಿ, ಮದುವೆಯನ್ನು ರದ್ದುಪಡಿಸಿದ್ದಾರೆ.


ಬಾಲಕಿಯನ್ನು ರಕ್ಷಿಸಿ ಬಾಲಕಿಯರ ಬಾಲಮಂದಿರಕ್ಕೆ ಬಿಡಲಾಗಿದೆ. ಅಪ್ರಾಪ್ತ ಬಾಲಕಿಗೆ ತಂದೆ ಇಲ್ಲವಾಗಿದ್ದು, ಆಕೆಯ ತಾಯಿ ಮತ್ತು ಸಂಬಂಧಿಕರು ಮದುವೆ ಮಾಡಲು ಸಿದ್ದತೆ ನಡೆಸಿದ್ದರು ಎಂದು ತಿಳಿದುಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑