Tel: 7676775624 | Mail: info@yellowandred.in

Language: EN KAN

    Follow us :


ಕಬ್ಬಾಳು ಅರಣ್ಯದಲ್ಲಿ ಹತ್ತಕ್ಕೂ‌ ಹೆಚ್ಚು ಆನೆಗಳು

Posted date: 17 Jun, 2021

Powered by:     Yellow and Red

ಕಬ್ಬಾಳು ಅರಣ್ಯದಲ್ಲಿ ಹತ್ತಕ್ಕೂ‌ ಹೆಚ್ಚು ಆನೆಗಳು

ರಾಮನಗರ: ಹಲವು ತಿಂಗಳಿಂದ ರೈತರಿಗೆ ಉಪಟಳ ನೀಡುತ್ತಿದ್ದ 7 ಕಾಡಾನೆಗಳನ್ನು ಮುತ್ತತ್ತಿಯ ಕಾವೇರಿ ವನ್ಯಜೀವಿ ಧಾಮಕ್ಕೆ ಅಟ್ಟಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ.


23 ಆನೆಗಳ‌ ಪೈಕಿ ರಾಮನಗರದ ತೆಂಗಿನಕಲ್ಲು ಹಾಗು ಚನ್ನಪಟ್ಟಣ ದ ನರಿಕಲ್ಲುಗುಡ್ಡ ಅರಣ್ಯದಿಂದ ಹತ್ತಕ್ಕೂ ಹೆಚ್ಚು ಆನೆಗಳು ಕನಕಪುರ ತಾಲೂಕಿನ  ಕಬ್ಬಾಳು ಅರಣ್ಯದಲ್ಲಿ ಬೀಡು ಬಿಟ್ಟಿವೆ.


ರಾಮನಗರದ ಕೈಲಾಂಚ, ಚನ್ನಪಟ್ಟಣದ ವಿರುಪಾಕ್ಷಿಪುರ ಹೋಬಳಿಯ ಗ್ರಾಮಗಳಲ್ಲಿ 23 ಕ್ಕೂ ಹೆಚ್ಚು ಆನೆಗಳು ರೈತರ ತೋಟಗಳಿಗೆ ಮೇಲಿಂದ ಮೇಲೆ ದಾಳಿ ಮಾಡಿ, ಬೆಳೆ ಹಾಗು ಕೃಷಿ ಪರಿಕರಗಳನ್ನು ನಾಶ ಮಾಡುತ್ತಿದ್ದವು.


ರೈತರ ಆಕ್ರೋಶದಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ಕಳೆದ ಒಂದು ವಾರದಿಂದ ಈ ಆನೆಗಳನ್ನು ಕಾವೇರಿ ವನ್ಯಜೀವಿ ಧಾಮ, ಹಾಗು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹಟ್ಟಲು ಹರಸಾಹಸ ಪಡುತ್ತಿದ್ದಾರೆ.


ಸದ್ಯ ಕನಕಪುರ ತಾಲೂಕಿನ ಸಾತನೂರಿನ ವಲಯದ ಕಬ್ಬಾಳು ಅರಣ್ಯದಲ್ಲಿ ಆನೆಗಳು ಬೀಡು‌ ಬಿಟ್ಟಿದ್ದು, ಇವುಗಳನ್ನು ಕೂಡ ಸಾತನೂರು ಅರಣ್ಯದ ಮೂಲಕ ಮಳವಳ್ಳಿ ತಾಲೂಕಿನ‌ ಮುತ್ತತ್ತಿ ಕಾವೇರಿ ವನ್ಯಜೀವಿ ಧಾಮಕ್ಕೆ ಅಟ್ಟುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ   ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑