Tel: 7676775624 | Mail: info@yellowandred.in

Language: EN KAN

    Follow us :


ಸಾರ್ವಜನಿಕರು ಲಸಿಕೆ ಪಡೆಯದಿರಲು ಕಾಂಗ್ರೆಸ್ ನಾಯಕರೇ ಕಾರಣ ಸಚಿವ ಸಿ ಪಿ ಯೋಗೇಶ್ವರ್

Posted date: 21 Jun, 2021

Powered by:     Yellow and Red

ಸಾರ್ವಜನಿಕರು ಲಸಿಕೆ ಪಡೆಯದಿರಲು ಕಾಂಗ್ರೆಸ್ ನಾಯಕರೇ ಕಾರಣ ಸಚಿವ ಸಿ ಪಿ ಯೋಗೇಶ್ವರ್

ಚನ್ನಪಟ್ಟಣ: ಸಾರ್ವಜನಿಕರು ಕೋವಿಡ್ ಲಸಿಕೆ ಬಂದ ಸಂದರ್ಭದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕಿ ಕೊರೊನಾ ನೂರ್ಮಡಿಯಾಗಿ, ಸಾವನ್ನಪ್ಪಲು ಕಾರಣವಾದವರಲ್ಲಿ ಕಾಂಗ್ರೆಸ್ ನಾಯಕರು ಮೊದಲಿಗರು. ಸಾರ್ವಜನಿಕರ ಸಾವಿಗೆ ನೇರ ಹೊಣೆಯನ್ನು ಕಾಂಗ್ರೆಸ್ ನಾಯಕರೇ ಹೊರಬೇಕು ಎಂದು ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಖಾತೆ ಸಚಿವ ಸಿ.ಪಿ ಯೋಗೇಶ್ವರ್ ಕಿಡಿಕಾರಿದರು.

ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರ ಗುರುತಿಸಿರುವ 18 ವರ್ಷ ಮೇಲ್ಪಟ್ಟ ಆದ್ಯತಾ ವಲಯ ದವರಿಗೆ ಕೊರೊನಾ ಲಸಿಕೆ ಅಭಿಯಾನದ ಕಾರ್ಯ ಕ್ರಮವನ್ನು ವೀಕ್ಷಿಸಿ ಮಾತನಾಡಿದರು.


ಮೊದಲು ಬಾರಿ ಲಸಿಕೆ ಬಂದಾಗ ಸಾರ್ವಜನಿಕರು ಲಸಿಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ, ಕಾಂಗ್ರೆಸ್ ನಾಯಕರು ಇದು ಬಿಜೆಪಿ ಲಸಿಕೆ, ಇದು ಉತ್ತಮವಾದುದ್ದಲ್ಲ, ತಜ್ಞರು ಇನ್ನೂ ದೃಢಪಡಿಸಿಲ್ಲ ಎಂದು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿ ಸಿದರು. ಹೀಗಾಗಿ ಜನರು ಲಸಿಕೆ ಪಡೆದು ಕೊಳ್ಳಲು ಹಿಂದೇಟು ಹಾಕಿದರು.

ಆದರೆ ಇದೇ ನಾಯಕರು ಹಂತ ಹಂತವಾಗಿ ಲಸಿಕೆಗಳನ್ನು ಹಾಕಿಸಿಕೊಂಡರು. ಇದನ್ನು ಮನಗಂಡ ನಾಗರೀಕರು ಲಸಿಕೆ ಇಲ್ಲದೆ ಒದ್ದಾಡುವಂತಾಯಿತು. ಕೆಲಕಾಲ ಲಸಿಕೆಯ ದಾಸ್ತಾನು ಕಡಿಮೆ ಇದ್ದುದರಿಂದ ಲಸಿಕೆ ಕೊಡುವುದು ತಡವಾಗಿದೆ. ಇನ್ನು ಮುಂದೆ ಹೀಗಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ವರಿಗೂ ಕೊರೊನಾ ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ ಎಂದರು.


ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಧ್ಯಮದವರ ಮುಂದೆ ರಾಜಕೀಯದ ಯಾವ ಸುದ್ದಿಯನ್ನೂ ಮಾತನಾಡುವುದಿಲ್ಲ. ಅರುಣ್ ಸಿಂಗ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ನಾಯಕರುಗಳ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ರಾಷ್ಟ್ರ ನಾಯಕರುಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಜೊತೆಗೆ ಮನವಿಯನ್ನೂ ಮಾಡಿದ್ದೇನೆ. ರಾಜ್ಯ ರಾಜಕೀಯ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳು ಸದ್ಯಕ್ಕೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ನಾನೇ ನಿಮ್ಮನ್ನು ಕರೆದು ಮಾತನಾಡುತ್ತೇನೆ ಎಂದು ತಿಳಿಸಿದರು.


ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿಶ್ವವೇ ಒಪ್ಪಿಕೊಂಡಿರುವಂತಹ ಪುರಾತನ ಯೋಗ ಮತ್ತು ಧ್ಯಾನವು ನಮ್ಮ ದೇಶದ ಕೊಡುಗೆ ಎಂಬುದು ನಮ್ಮೆಲ್ಲರ ಹೆಮ್ಮೆಯಾಗಿದೆ.

ನಾನೂ ಸಹ ಇಂದು ನಗರದ ಮೂರ‍್ನಾಲ್ಕು ಕಡೆ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದೆ. ನಗರದ ಹೊರವಲಯದಲ್ಲಿರುವ ಎಲ್‌ಎನ್ ಕಲ್ಯಾಣ ಮಂಟಪ ದಲ್ಲಿ ಬಿಜೆಪಿ ಪಕ್ಷದ ವತಿಯಿಂದ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ ಎಂದರು.


ಯೋಗದಿಂದ ಎಲ್ಲಾ ರೋಗವು ನಿರ್ಮೂಲನೆಯಾಗುವುದು ಖಂಡಿತ. ಈ ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ನಿತ್ಯ ಕರ್ಮಗಳಲ್ಲಿ ಒಂದನ್ನಾಗಿಸಿ ಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು.

ಸಂದರ್ಭದಲ್ಲಿ  ತಾಲೂಕು ವೈದ್ಯಾಧಿಕಾರಿ ರಾಜು, ತಾಲೋಕು ದಂಡಾಧಿಕಾರಿ ನಾಗೇಶ್, ಇಓ ಚಂದ್ರು, ಪೌರಾಯುಕ್ತ ಶಿವನಾಂಕರಿಗೌಡ, ಚನ್ನಪಟ್ಣಣ ಯೋಜನ ಪ್ರಾಧಿಕಾರದ ಅಧ್ಯಕ್ಷ  ಮಲವೇಗೌಡ, ಬಿಜೆಪ ಜಿಲ್ಲಾದ್ಯಕ್ಷ ದೇವರಾಜು, ನಾಗೇಶ್, ಕುಳ್ಳಪ್ಪ (ಶಿವಲಿಂಗಯ್ಯ)  ಹಲವಾರು ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑