Tel: 7676775624 | Mail: info@yellowandred.in

Language: EN KAN

    Follow us :


ದೊಡ್ಡಮರಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಇ.ಸಿ.ಜಿ. ಸೇವೆ ಸಿಇಓ ಇಕ್ರಂ

Posted date: 02 Jul, 2021

Powered by:     Yellow and Red

ದೊಡ್ಡಮರಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಇ.ಸಿ.ಜಿ. ಸೇವೆ ಸಿಇಓ ಇಕ್ರಂ

  • ಗ್ರಾಮೀಣ ಪ್ರದೇಶದ ಜನರಿಗೆ ಎಲ್ಲಾ ರೀತಿಯ ಆರೋಗ್ಯ   ಸೇವೆಗಳು ದೊರೆಯಬೇಕು ಎಂಬ ದೃಷ್ಟಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆರೋಗ್ಯ ಸೇವೆಗೆ ಬೇಕಿರುವ ಉಪಕರಣಗಳನ್ನು ಒದಗಿಸಲು ಮುಂದಾಗಿದ್ದಾರೆ.

  • ದೊಡ್ಡಮರಳವಾಡಿ ಪ್ರಾಥಮಿಕ‌ ಆರೋಗ್ಯ ಕೇಂದ್ರಕ್ಕೆ ಟ್ರಿನಿಟಿ ಕೇರ್ ಸಂಸ್ಥೆಯ ಡಾ: ಟೋನಿ ಥಾಮಸ್ ಹಾಗೂ ಸಿರಾಜುದ್ದೀನ್ ಅವರ ಸಂಸ್ಥೆಯಿಂದ ನೀಡಲಾಗಿದ್ದ ಇ.ಸಿ.ಜಿ. ವೈದ್ಯಕೀಯ ಉಪಕರಣವನ್ನು ಇತ್ತೀಚೆಗೆ ನೀಡಿದ್ದರು.ಇದರಿಂದ ಈ ಭಾಗದ ಜನರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಲ್ಲಿ ಪತ್ತೆ ಹಚ್ಚಿ  ಚಿಕಿತ್ಸೆ ನೀಡಬಹುದು.

  •  ಇದೇ ರೀತಿ ಬಹಳಷ್ಟು ಸಂಸ್ಥೆಗಳೊಂದಿಗೆ ಮಾತನಾಡಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳನ್ನು ಒದಗಿಸಿ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಯನ್ನು ಸುಧಾರಿಸಿ, ಗ್ರಾಮೀಣ ಜನರಿಗೆ ಮನೆಗಳ ಹತ್ತಿರ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡಲಾಗುವುದು. ಸ್ಥಳೀಯ ಅನುದಾನವನ್ನು ಸಹ ಬಳಸಿಕೊಂಡು ಉಪಕರಣಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಜಿಲ್ಲಾ‌ ಪಂಚಾಯತ್ ಸಿ.ಇ.ಓ ಇಕ್ರಂ.

  • ಇತ್ತೀಚೆಗೆ ದೊಡ್ಡಮರಳವಾಡಿ ಆರೋಗ್ಯ ಕೇಂದ್ರದಲ್ಲಿ.ಇ.ಸಿ.ಜಿ ಸೇವೆಯನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ದೊಡ್ಡಮರಳವಾಡಿ ವೈದ್ಯಾಧಿಕಾರಿ ಡಾ: ಬಸಕೇರ್ ನಾಥ್, ಕನಕಪುರ ಕಾರ್ಯನಿರ್ವಾಹಕ ಅಧಿಕಾರಿ ಮಧು, ಗ್ರಾಮ ಪಂಚಾಯತಿ ಅಧ್ಯಕ್ಷ ಚಲುವರಾಜು, ಉಪಾಧ್ಯಕ್ಷೆ ಕನಿಜಾ ಫತೀಮಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑