Tel: 7676775624 | Mail: info@yellowandred.in

Language: EN KAN

    Follow us :


ವಾರದಲ್ಲಿ ಎರಡು ದಿನ ವಿಶೇಷ ಲಸಿಕೆ ಅಭಿಯಾನ:ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಿ : ಡಾ.ರಾಕೇಶ್ ಕುಮಾರ್

Posted date: 02 Jul, 2021

Powered by:     Yellow and Red

ವಾರದಲ್ಲಿ ಎರಡು ದಿನ ವಿಶೇಷ ಲಸಿಕೆ ಅಭಿಯಾನ:ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಿ : ಡಾ.ರಾಕೇಶ್ ಕುಮಾರ್

ರಾಮನಗರ, ಜುಲೈ.01. ಮಕ್ಕಳಿಗೆ ನೀಡಲಾಗುವ ಬಿ.ಸಿ.ಜಿ, ಪೆಂಟಾವೆಲೆಂಟ್ ದಡಾರಾ ರುಬೆಲ್ಲಾ, ಡಿ.ಟಿ.ಪಿ ವರ್ಧಕ ಮುಂತಾದ ಲಸಿಕೆಯನ್ನು ನೀಡಲು  ವಾರದಲ್ಲಿ ಎರಡು ದಿನ,  ಮಂಗಳವಾರ ಮತ್ತು ಬುಧವಾರ ವಿಶೇಷ ಲಸಿಕಾ ಅಭಿಯಾನ  ಹಮ್ಮಿಕೊಂಡು, ಶೇ.100 ರಷ್ಟು ಗುರಿ ಸಾಧಿಸುವಂತೆ  ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಲಸಿಕೆ ನೀಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಲಸಿಕೆ ಪಡೆಯುವುದರಿಂದ ಬಿಟ್ಟು ಹೋಗಿರಬಹುದು. ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವಂತೆ ಅವರು ತಿಳಿಸಿದರು.


ಆರೋಗ್ಯ ಇಲಾಖೆಯು ಯಾವ ಯಾವ ಹಂತದಲ್ಲಿ ಯಾವ ಬಗೆಯ ಲಸಿಕೆ ನೀಡುತ್ತದೆ ಮತ್ತು ಇವುಗಳು ಯಾವ ಖಾಯಿಲೆಯನ್ನು ತಡೆಗಟ್ಟುತ್ತದೆ, ಮುಂದಿನ ಹಂತದ ಲಸಿಕೆ ಯಾವಾಗ ಪಡೆಯಬೇಕು, ಲಸಿಕೆ ಪಡೆಯದಿದ್ದಲ್ಲಿ ಯಾವ ರೀತಿ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಎಂದರು.


ರೋಗ ನಿರೋಧಕ ಚುಚ್ಚು ಮದ್ದು ಕಾರ್ಡ್ ಅನ್ನು  ಆರೋಗ್ಯ ಇಲಾಖೆಯಿಂದ  ನೀಡಲಾಗುವುದು. ಕಾರ್ಡನ್ನು ಸುರಕ್ಷಿತವಾಗಿ ಇಟ್ಟುಕೊಂಡು ಮುಂದಿನ ಲಸಿಕೆ ಪಡೆಯುವ ಸಂದರ್ಭದಲ್ಲಿ ಜೋತೆಯಲ್ಲಿ ತರಬೇಕು ಎಂದರು.


*ಮಕ್ಕಳಿಗೆ ನೀಡುವ ಲಸಿಕೆ ವಿವರ*


ಹುಟ್ಟಿದ ಕೂಡಲೇ ಬಿ.ಸಿ.ಜಿ, ಓ.ಪಿ.ವಿ ಹಾಗೂ ಹೆಪಪೈಟಿಸ್ ಬಿ ಲಸಿಕೆಯನ್ನು ಪಡೆಯಬೇಕು. ಕಾರಣಾಂತರದಿಂದ ಲಸಿಕೆ ಪಡೆಯದಿದ್ದಲ್ಲಿ, ಬಿ.ಸಿ.ಜಿ ಯನ್ನು 1 ವರ್ಷದ ವಯಸ್ಸಿನ ವರೆಗೆ  ಓ.ಪಿ.ವಿ ಯನ್ನು ಹುಟ್ಟಿದ  15  ದಿನವರೆಗೆ  ಹಾಗೂ ಹೆಪಪೈಟಿಸ್ ಬಿ ಲಸಿಕೆಯನ್ನುಹುಟ್ಟಿದ 24 ಗಂಟೆ ಒಳಗೆ  ಪಡೆಯಬಹುದು.


6 ವಾರದ ಮಗು ಓ.ಪಿ.ವಿ.-1, ರೊಟಾ-1, ಐ.ಪಿ.ವಿ-1 ಹಾಗೂ ಪೆಟಾವೆಲೆಂಟ್-1 ಲಸಿಕೆ ಪಡೆಯಬೇಕು, 10 ವಾರದ ಮಗು ಓ.ಪಿ.ವಿ.-2, ರೊಟಾ-2 ಹಾಗೂ ಪೆಟಾವೆಲೆಂಟ್-2,  14  ವಾರದ ಮಗು ಓ.ಪಿ.ವಿ.-3, ರೊಟಾ-3, ಐ.ಪಿ.ವಿ-2 ಹಾಗೂ ಪೆಟಾವೆಲೆಂಟ್-3 ಪಡೆಯಬೇಕು.


 ಓ.ಪಿ.ವಿ ಯನ್ನು ಕಾರಣಾಂತರಗಳಿಂದ ಪಡೆಯದಿದ್ದಲ್ಲಿ 5 ವರ್ಷ ವಯಸ್ಸಿನ ವರೆಗೆ ,ಐ.ಪಿ.ವಿ, ಪೆಟಾವೆಲೆಂಟ್ ಹಾಗೂ  ರೊಟಾವನ್ನು 1ವರ್ಷ ವಯಸ್ಸಿನ ವರೆಗೆ ಲಸಿಕೆ ಪಡೆಯಬಹುದು ಎಂದು ತಿಳಿಸಿದರು.


9 ತಿಂಗಳಿನ ಮಗು ದಡಾರ, ರುಬೆಲ್ಲಾ-1, ಜೆಇ-1* ಲಸಿಕೆ ಪಡೆಯಬೇಕು ಕಾರಣಾಂತರಗಳಿಂದ ಪಡೆಯದಿದ್ದಲ್ಲಿ ದಡಾರ, ರುಬೆಲ್ಲಾ 5 ವರ್ಷ ವಯಸ್ಸಿನ ವರೆಗೆ ಹಾಗೂ ಜೆಇ 15 ವರ್ಷ ವಯಸ್ಸಿನ ವರೆಗೆ ಲಸಿಕೆಯನ್ನು ಪಡೆಯಬಹುದು.


16-24  ತಿಂಗಳಿನ ಮಗು ದಡಾರ, ರುಬೆಲ್ಲಾ-2, ಜೆಇ-2, ಓ.ಪಿ.ವಿ ವರ್ಧಕ, ಡಿಪಿಟಿ ವರ್ಧಕ-1 ಲಸಿಕೆ ಪಡೆಯಬೇಕು ಕಾರಣಾಂತರಗಳಿಂದ ಪಡೆಯದಿದ್ದಲ್ಲಿ

ಡಿಪಿಟಿ ವರ್ಧಕ 7 ವರ್ಷದ ವರೆಗೆ ಪಡೆಯಬಹುದಾಗಿದೆ.


5-6 ವರ್ಷದ ಮಗು ಡಿಪಿಟಿ ವರ್ಧಕ-2  ಹಾಗೂ10 ವರ್ಷದ ಮಗು ಟಿ.ಡಿ, 16 ವರ್ಷದವರು  ಟಿ.ಡಿ ಲಸಿಕೆ ಪಡೆಯಬಹುದು ಎಂದರು.


ಲಸಿಕೆಗೆ ಸಂಭಂದಿಸಿದಂತೆ ದಿನ ನಿಗದಿ ಪಡಿಸಿ ಗುರಿ ಇಟ್ಟು ಕೊಂಡು 2 ಸೆಕ್ಷನ್ ವಿಭಾಗಿಸಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಅಂಗನವಾಡಿ ಸೂಪರ್‌ವೇಜರ್ ಹಾಗೂ ಕಾರ್ಯಕರ್ತೆಯರು ಮತ್ತು ಶಾಲಾ ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಿ ಎಲ್ಲರೂ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದರು.


ಜಿಲ್ಲಾದ್ಯಾಂತ ಹುಟ್ಟಿದ ಮಕ್ಕಳ ಮಾಹಿತಿ ಪಡೆದು ಅಂಗನವಾಡಿ ಆಶಾ ಕಾರ್ಯಕರ್ತೆಯರು ಮಕ್ಕಳಿಗೆ ಬಿಸಿಜಿ ಲಸಿಕೆ ಕೊಡಿಸಿರುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.  ಇಲ್ಲಾವಾದಲ್ಲಿ ಲಸಿಕೆ ಪಡೆಯುವಂತೆ ತಿಳಿ ಹೇಳಬೇಕು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ವೈಜ್ಞಾನಿಕ ವೈಧ್ಯಿಕಾರಿ ಡಾ.ನಾಗರಾಜು,  ಆರ್.ಸಿ.ಹೆಚ್ ಅಧಿಕಾರಿ ಡಾ: ಪದ್ಮಾ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಬಿ.ಎಸ್ ಗಂಗಾಧರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑