Tel: 7676775624 | Mail: info@yellowandred.in

Language: EN KAN

    Follow us :


ಪರಿಸರ ಉಳಿದರೆ ಮನು ಸಂಕುಲ ಉಳಿಯಲು ಸಾಧ್ಯ. ಸಚಿವ ಸಿ ಪಿ ಯೋಗೇಶ್ವರ್

Posted date: 05 Jul, 2021

Powered by:     Yellow and Red

ಪರಿಸರ ಉಳಿದರೆ ಮನು ಸಂಕುಲ ಉಳಿಯಲು ಸಾಧ್ಯ. ಸಚಿವ ಸಿ ಪಿ ಯೋಗೇಶ್ವರ್

ನಮ್ಮ ಪೂರ್ವಜರು ಪರಿಸರಕ್ಕೆ ಬಹಳ ಒತ್ತು ನೀಡಿದ್ದರು. ಅವರ ಜಮೀನಿನ ಜೊತೆಗೆ ರಸ್ತೆ ಬದಿಯಲ್ಲಿಯೂ ಸಹ ಗಿಡಗಳನ್ನು ನೆಟ್ಟು ಪೋಷಿಸಿತ್ತಿದ್ದರು. ಎಲ್ಲಿ ಒಂದು ಆಲದ ಮರ ಕಡಿದರೂ ಸಹ, ಅದೇ ಆಲದ ಮರದ ಹತ್ತಾರು ಸಣ್ಣ ರೆಂಬೆಗಳನ್ನು ಕತ್ತರಿಸಿ ರಸ್ತೆ ಬದಿಯಲ್ಲಿ ನೆಟ್ಟು ಪೋಷಿಸುತ್ತಿದ್ದರು. ಇದಕ್ಕೆ ನಮ್ಮ ಜಿಲ್ಲೆಯ ಹೆಮ್ಮೆಯ ಅಮ್ಮ ತಿಮ್ಮಕ್ಕ ನವರೇ ಜೀವಂತ ಸಾಕ್ಷಿಯಾಗಿದ್ದಾರೆ ಎಂದು ಸಚಿವ ಸಿ ಪಿ ಯೋಗೇಶ್ವರ್ ಪರಿಸರದ ಕುರಿತು ಮಾತನಾಡಿದರು.

ಅವರು ರಾಮನಗರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ, ಚನ್ನಪಟ್ಟಣ ನಗರದಲ್ಲಿ ಆಯೋಜಿಸಿದ್ದ ವೃಕ್ಷಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಸಸಿಗಳನ್ನು ನೆಟ್ಟು ಮಾತನಾಡಿದರು.


ವೃಕ್ಷಾರೋಹಣ  ಹೆಸರಿನಡಿ ರಾಷ್ಟ್ರದಾದ್ಯಂತ ಭಾರತೀಯ ಜನತಾ ಪಕ್ಷದ ವತಿಯಿಂದ ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಯನ್ನು ಕಾಪಾಡುವ ಕೆಲಸವನ್ನು ಮಾಡಲಾಗುತ್ತಿದೆ. ಕೇವಲ ಬಿಜೆಪಿ ಪಕ್ಷದವರೇ ಪರಿಸರ ಕಾಪಾಡಬೇಕೆಂದಾಗಲಿ, ಗಿಡ ನೆಡಬೇಕೆಂದಾಗಲಿ ಇಲ್ಲ. ಭಾರತದ ಎಲ್ಲಾ ಪ್ರಜೆಗಳು ಇದರಲ್ಲಿ ಭಾಗಿಯಾಗಿ ಗಿಡಗಳನ್ನು ನೆಟ್ಟು, ಪೋಷಿಸಿ ಪರಿಸರ ಕಾಳಜಿಯನ್ನು ಮೆರೆಯಬೇಕು. ಕೊರೊನಾ ದಂತಹ ಮಹಾಮಾರಿಯಿಂದ ನಾವು ತಪ್ಪಿಸಿಕೊಳ್ಳಬೇಕಾದರೆ ಪರಿಸರ ಚನ್ನಾಗಿರಬೇಕು. ಆದ್ದರಿಂದ ನಾವೆಲ್ಲರೂ ಪರಿಸರ ಉಳಿಸುವ ನಿಟ್ಟಿನಲ್ಲಿ ಮುಂದಾಗುವಂತೆ ಕರೆ ನೀಡಿದರು.


ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜು ಓಬಿಸಿ ಜಿಲ್ಲಾಧ್ಯಕ್ ಟಿ ಕೃಷ್ಣಪ್ಪ, ಚನ್ನಪಟ್ಟಣ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಕೆ ಟಿ ಜಯರಾಮ್ ನಗರಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್ ಎಂ ಮಲವೇಗೌಡ ಸೇರಿದಂತೆ ಅನೇಕರು  ಭಾಗಿಯಾಗಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑