Tel: 7676775624 | Mail: info@yellowandred.in

Language: EN KAN

    Follow us :


ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ, ಕಕಜವೇ ಯಿಂದ ಹೋರಾಟ

Posted date: 05 Jul, 2021

Powered by:     Yellow and Red

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ, ಕಕಜವೇ ಯಿಂದ ಹೋರಾಟ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಮಿಳುನಾಡಿನ ಮುಖ್ಯಮಂತ್ರಿ ಎಂ‌ಕೆ ಸ್ಟಾಲಿನ್ ರವರಿಗೆ ಪತ್ರ ಬರೆದು, ಮೇಕೆದಾಟು ಕುಡಿಯುವ ನೀರು ಮತ್ತು ವಿದ್ಯುತ್ ಯೋಜನೆಗೆ ತಡೆ ಒಡ್ಡಬಾರದು ಎಂದು ಮನವಿ ಮಾಡಿದ್ದಾರೆ. ಎಂ ಕೆ ಸ್ಟಾಲಿನ್ ರವರು ಇದಕ್ಕೆ ಒಪ್ಪಿಗೆ ನೀಡಿ, ಯೋಜನೆಗೆ ಕೈಜೋಡಿಸಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧಕ್ಷ ಎಲ್ ರಮೇಶ್ ಗೌಡ ಒತ್ತಾಯಿಸಿದರು.

ಅವರು ಸೋಮವಾರ ಬೆಳಿಗ್ಗೆ ನಗರದ ಕಾವೇರಿ ವೃತ್ತದಲ್ಲಿ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.


ಮೇಕೆದಾಟು ಯೋಜನೆಯು ಕಳೆದ 50 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಮೊದಲು ಎಐಎಡಿಎಂಕೆ ಮತ್ತು ಡಿಎಂಕೆ ನಾಯಕರಾಗಿದ್ದ ಜಯಲಲಿತಾ ಹಾಗೂ ಕರುಣಾನಿಧಿ ಯವರಿಂದ ತಡೆಯಾಗುತ್ತಿತ್ತು. ಆದರೆ ಉತ್ತಮ ವ್ಯಕ್ತಿತ್ವ ಹೊಂದಿರುವ ಎಂ ಕೆ ಸ್ಟಾಲಿನ್ ರವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸದೇ, ಈ ಯೋಜನೆಗೆ ರಹದಾರಿ ನೀಡಬೇಕು. ಈ‌ ಯೋಜನೆ ಕೇವಲ ಕನ್ನಡಿಗರಿಗಷ್ಟೇ ಸೀಮಿತವಲ್ಲ. ತಮಿಳುನಾಡಿನ ಲಕ್ಷಾಂತರ ಮಂದಿಗೂ ಉಪಯುಕ್ತವಾಗುತ್ತದೆ‌ ಎಂದರು.


ಮುಖ್ಯಮಂತ್ರಿ ಯಡಿಯೂರಪ್ಪ ನವರು, ಶೀಘ್ರವಾಗಿ ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್, ಅಶ್ವಥ್ ನಾರಾಯಣ ಸೇರಿದಂತೆ ಸರ್ವ ಪಕ್ಷಗಳ ನಿಯೋಗವೊಂದನ್ನು ತಮಿಳುನಾಡಿನ ಮುಖ್ಯಮಂತ್ರಿ ಬಳಿ‌ ಕರೆದೊಯ್ಯಬೇಕು. ಮೇಕೆದಾಟು ಯೋಜನೆಯ‌ ಫಲಾಫಲಗಳನ್ನು ಬಿಡಿಸಿ ಹೇಳಿ, ಮತ್ತೊಮ್ಮೆ ಅಡ್ಡಿಪಡಿಸದಂತೆ ಕರಾರು ಮಾಡಿಸಬೇಕು. ತಡಮಾಡದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.


ಮುಂದಿನ ತಿಂಗಳು 180 ಮಂದಿ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಸನ್ಮಾನಿಸುವುದಾಗಿ ಇದೇ ವೇಳೆ ಅವರು ತಿಳಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಕಕಜವೇ ಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑