Tel: 7676775624 | Mail: info@yellowandred.in

Language: EN KAN

    Follow us :


ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ

Posted date: 10 Jul, 2021

Powered by:     Yellow and Red

ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ

ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ  ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್ವದಲ್ಲಿ ನೀಡಲಾಗುತ್ತಿದ್ದು, ಇಂದು ಜೆಡಿಎಸ್ ನೇತೃತ್ವದಲ್ಲಿ ನೀಡಿದ ದಿನಸಿ ಕಿಟ್‌ಗಳಿಗೆ ಜನರು ಕೊರೊನಾ ಲೆಕ್ಕಿಸದೆ ಮುಗಿಬಿದ್ದಿದ್ದರು.


ಇಲಾಖೆಯು ಹತ್ತು ದಿನಗಳ ಹಿಂದೆಯೇ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಅವರ ನೇತೃತ್ವದಲ್ಲಿ ಹಂಚಲು 10 ಸಾವಿರ ಮತ್ತು ಶಾಸಕರಾದ ಹೆಚ್.ಡಿ ಕುಮಾರಸ್ವಾಮಿಯವರು ಹಂಚಲು 5 ಸಾವಿರ ದಿನಸಿ ಕಿಟ್‌ಗಳನ್ನು ಇಲಾಖೆವತಿಯಿಂದ ತಾಲ್ಲೂಕಿಗೆ ನೀಡಲಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.

ತಾಲ್ಲೂಕಿನಲ್ಲಿ 8 ಸಾವಿರ ಮಂದಿ ನೋಂದಾಯಿತ ಕಾರ್ಮಿಕರಿದ್ದು, ಉಳಿದವರು ಅಸಘಂಟಿತರಾಗಿದ್ದಾರೆ. ಆದರೆ ಇಲಾಖೆ ಶನಿವಾರ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಕಿಟ್ ನೀಡುತ್ತಿದ್ದು, ಕಾರ್ಮಿಕರು ಯಾವುದೇ ರೀತಿಯ ಕೊರೊನಾ ಮುನ್ನೆಚ್ಚರಿಕೆ ವಹಿಸದೆ ನಾಮುಂದು ತಾಮುಂದು ಎಂದು ಕಿಟ್ ಪಡೆದುಕೊಳ್ಳಲು ಮುಗಿಬಿದ್ದಿದ್ದರು.


ಬೆರಣಿಕೆಯಷ್ಟಿದ್ದ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಳು ಕಂಡೂ ಕಾಣದಂತೆ ಮೌನವಹಿಸಿದ್ದರು.

8 ಸಾವಿರ ಮಂದಿಗೆ 15 ಸಾವಿರ ಕಿಟ್ ಅನ್ನು ಇಲಾಖೆ ನೀಡಿದ್ದು, ಯಾವ ಲೆಕ್ಕಾಚಾರದ ಮೇಲೆ ಇಲಾಖೆಯು ಕಿಟ್ ಕೊಟ್ಟಿದೆ?  ಎಂಬುದನ್ನು ತಿಳಿಯಲು ಕಾರ್ಮಿಕ ಇಲಾಖೆಯ ಸಹಾಯ ನಿರ್ದೇಶಕ ಮುನಿಲಿಂಗೇಗೌಡರಿಗೆ ಪತ್ರಿಕೆಯು ಹತ್ತಕ್ಕೂ ಹೆಚ್ಚು ಬಾರಿ ಕರೆ ಮಾಡಿದರೂ ಸ್ಪಂದಿಸಲಿಲ್ಲ.


ಶನಿವಾರ ಕಿಟ್ ಪಡೆದವರಲ್ಲಿ, ಕಟ್ಟಡ ಕಾರ್ಮಿಕರಿಗಿಂತ ಸ್ಥಳೀಯ ನಾಯಕರ ಹಿಂಬಾಲಕರೇ ಹೆಚ್ಚು ಮಂದಿ ಕಿಟ್ ಪಡೆದರು ಎಂದು ಕಾರ್ಮಿಕರ ಆರೋಪವಾಗಿದೆ. ಇಲಾಖೆಯು ಯಾವ ಆಧಾರದ ಮೇಲೆ ಕಿಟ್ ಗಳನ್ನು ಹಂಚಿದ್ದಾರೆ ಎಂಬುದು ತಿಳಿದು ಬರಬೇಕಾಗಿದೆ.

ಶನಿವಾರದ ವೇಳೆ ಕಿಟ್ ಪಡೆದುಕೊಳ್ಳುವ ಸಂದರ್ಭದಲ್ಲಿ ಕೊರೊನಾ ಮುಜಾಗ್ರತೆ ವಹಿಸದಿರುವುದರಿಂದ ಸಂಬಂಧಿಸಿದ ಇಲಾಖೆಗಳು ಕಾರ್ಮಿಕ ಇಲಾಖೆ ಮತ್ತು ಸ್ಥಳೀಯ ನಾಯಕರ ಮೇಲೆ ಕ್ರಮತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.


ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ ನೀಡುವ ಕಿಟ್ ನೆಪಮಾತ್ರವಾಗಿದ್ದು, ಸ್ಥಳೀಯ ನಾಯಕರ ಹಿಂಬಾಲಕರು, ಕೆಲ ಗುತ್ತಿಗೆದಾರರ ಬಳಿ ಕೆಲಸ ನಿರ್ವಹಿಸುವ ಕಾರ್ಮಿಕರು ಹೆಚ್ಚಾಗಿದ್ದರು. ಇವರುಗಳಿಂದ ನಿಜವಾದ ಕಾರ್ಮಿಕರು ಕಿಟ್ ಪಡೆದುಕೊಳ್ಳಲು ಸಾಹಸ ಪಡಬೇಕಾಯಿತು ಎಂದು ಸ್ಥಳೀಯ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ದೂರಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑