Tel: 7676775624 | Mail: info@yellowandred.in

Language: EN KAN

    Follow us :


ಟಿಎಪಿಸಿಎಂಎಸ್ ಗೆ ಭೇಟಿ ನೀಡಿದ ಉನ್ನತಾಧಿಕಾರಿಗಳು, ಹಳೆಯ ಗೋದಾಮಿನಲ್ಲೇ ಬಾಳೆಕಾಯಿ ಮಂಡಿ ಸ್ಥಾಪನೆ

Posted date: 22 Jul, 2021

Powered by:     Yellow and Red

ಟಿಎಪಿಸಿಎಂಎಸ್ ಗೆ ಭೇಟಿ ನೀಡಿದ ಉನ್ನತಾಧಿಕಾರಿಗಳು, ಹಳೆಯ ಗೋದಾಮಿನಲ್ಲೇ ಬಾಳೆಕಾಯಿ ಮಂಡಿ ಸ್ಥಾಪನೆ

ಚನ್ನಪಟ್ಟಣ: ನಗರದಲ್ಲಿನ ಟಿಎಪಿಸಿಎಂಸ್ ಗೆ ರಾಜ್ಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯಪಾಲಕ ಇಂಜಿನಿಯರ್ ಹಾಗೂ ಸ್ಥಳೀಯ ಹಾಪ್ ಕಾಮ್ಸ್ ನ ನಿರ್ದೇಶಕರಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬಾಳೆ ಕಾಯಿ ಮಂಡಿಯ ಜಾಗದಲ್ಲೇ ಮುಂದುವರೆಸಲಾಗುವುದು ಎಂದು ತಿಳಿಸಿದರು.


ರೈತರು ತಾವು ಬೆಳೆದು ತಂದ ಬಾಳೆಕಾಯಿಯನ್ನು ನಗರದ ಬಸ್ ನಿಲ್ದಾಣದ ಸಮೀಪವಿರುವ ಟಿಎಪಿಸಿಎಂಎಸ್ ಗೋದಾಮಿನಲ್ಲೇ ಈ ಹಿಂದೆ ಖರೀದಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಕೇವಲ ರಾಸಾಯನಿಕ ಗೊಬ್ಬರಕ್ಕೆ ಸೀಮಿತಗೊಳಿಸಿಕೊಂಡಿದ್ದು, ಬಾಳೆಕಾಯಿ ಮಂಡಿಯನ್ನು ಕೆಂಗಲ್ ದೇವಾಲಯದ ಮುಂಭಾಗವಿರುವ ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು.


ಸ್ವಂತ ವಾಹನವಿಲ್ಲದಿರುವವರು ಬಾಡಿಗೆ ವಾಹನದಲ್ಲಿ ಬಾಳೆಕಾಯಿಯನ್ನು ಕೆಂಗಲ್ ಬಳಿ ತೆಗೆದುಕೊಂಡು ಹೋಗಲು ಅನಾನುಕೂಲ, ಸಮಯದ ಜೊತೆಗೆ ಬಾಡಿಗೆಯೂ ಸಹ ದುಪ್ಪಟ್ಟಾಗುತ್ತಿದ್ದು. ಆದ್ದರಿಂದ ಸ್ಥಳೀಯ ರೈತರು ಮತ್ತು ಸ್ಥಳೀಯ ನಿರ್ದೇಶಕರು ಇದನ್ನು ವಿರೋಧಿಸಿ ಹಾಪ್ ಕಾಮ್ಸ್ ಗೆ ಮನವಿ ಸಲ್ಲಿಸಿ, ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಜಾಗದಲ್ಲೇ ಬಾಳೆಕಾಯಿಯ ಖರೀದಿ ಕೇಂದ್ರ ಸ್ಥಾಪಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದರು.


ರೈತರ ಒತ್ತಾಯದ ಮೇರೆಗೆ ಹಾಪ್ ಕಾಮ್ಸ್ ಅಧ್ಯಕ್ಷರಾದ ದೇವರಾಜು, ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಮತ್ತು ಕಾರ್ಯಪಾಲಕ ಇಂಜಿನಿಯರ್ ದಯಾನಂದ ಭೇಟಿ ನೀಡಿ ಹಳೆಯ ಖರೀದಿ ಕೇಂದ್ರವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ದೇವರಾಜು ರವರು ಕೆಂಗಲ್ ಬಳಿ ತೆರವಾಗುವ ಹಾಪ್ ಕಾಮ್ಸ್ ಕಟ್ಟಡವನ್ನು ಮಾವಿನ ಮಂಡಿಯನ್ನಾಗಿ ಪರಿವರ್ತಿಸಿ, ಅದೇ ಸ್ಥಳದಲ್ಲಿ ಮ್ಯಾಂಗೋ ಜ್ಯೂಸ್ ಕಾರ್ಖಾನೆ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಶಿವಮಾದು ಮತ್ತು ರಾಜಶೇಖರ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑