Tel: 7676775624 | Mail: info@yellowandred.in

Language: EN KAN

    Follow us :


2022 ರ ವೇಳೆಗೆ ಸತ್ತೇಗಾಲ ನೀರಾವರಿ ಯೋಜನೆ ಪೂರ್ಣ. ಹೆಚ್ ಡಿ ಕುಮಾರಸ್ವಾಮಿ

Posted date: 23 Jul, 2021

Powered by:     Yellow and Red

2022 ರ ವೇಳೆಗೆ ಸತ್ತೇಗಾಲ ನೀರಾವರಿ ಯೋಜನೆ ಪೂರ್ಣ. ಹೆಚ್ ಡಿ ಕುಮಾರಸ್ವಾಮಿ

ಚನ್ನಪಟ್ಟಣ: ರಾಮನಗರ ಜಿಲ್ಲೆಯನ್ನು ಶಾಶ್ವತ ನೀರಾವರಿಯನ್ನಾಗಿಸಬೇಕು ಎಂಬ ಉದ್ದೇಶದಿಂದ ನನ್ನ ಅಧಿಕಾರವಧಿಯಲ್ಲಿ ಮಂಜೂರಾತಿ ನೀಡಿದ್ದ ಸತ್ತೇಗಾಲ ನೀರಾವರಿ ಯೋಜನೆ 2022 ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಕಣ್ವ ಜಲಾಶಯದ ಬಳಿ ಈ ಯೋಜನೆಯ ಭಾಗವಾದ ಪಂಪ್‍ಹೌಸ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಕಾವೇರಿ ನದಿನೀರನ್ನು ಮಳವಳ್ಳಿ ತಾಲೂಕು ಸತ್ತೇಗಾಲದಿಂದ ಗುರುತ್ವಾರ್ಕಷಣೆಯ ಮೂಲಕ ಇಗ್ಗಲೂರು ಜಲಾಶಯಕ್ಕೆ ತಂದು ಅಲ್ಲಿಂದ ಕಣ್ವ ಜಲಾಶಯಕ್ಕೆ ಹರಿಸಿ, ಕಣ್ವದಿಂದ ಮಂಚನಬೆಲೆ ಹಾಗೂ ವೈಜಿ ಗುಡ್ಡ ಜಲಾಶಯಕ್ಕೆ ಪೈಪ್‍ಲೈನ್ ಮೂಲಕ ಹರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯ ಮೂಲಕ ಇಡೀ ಜಿಲ್ಲೆಗೆ ಶಾಶ್ವತ ನೀರಾವರಿ ಸಾಧ್ಯವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು 2022ಕ್ಕೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.


ನನ್ನ ಅಧಿಕಾರವಧಿಯಲ್ಲಿ 540 ಕೋಟಿ ರೂ. ವೆಚ್ಚದ ಈ ಯೋಜನೆಗೆ ಚಾಲನೆ ನೀಡಿದ್ದೆ. ಕೆಲವು ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ತಡವಾಗಿತ್ತು. ಅವೆಲ್ಲವೂ ಬಗೆಹರಿದಿದ್ದು, ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಈ ಯೋಜನೆಯ ಅಂಗವಾದ ಕಣ್ವ ಜಲಾಶಯದ ಬಳಿ ನಡೆಯುತ್ತಿರುವ ಪಂಪ್ ಹೌಸ್ ಕಾಮಗಾರಿ ಇದೇ ಡಿಸೆಂಬರ್ 21ರ ಒಳಗೆ ಮುಗಿಯಲಿದೆ ಎಂದರು.


ಮಂಡ್ಯಕ್ಕೂ ಅನುಕೂಲ: ಈ ಯೋಜನೆಯಿಂದ ಮಂಡ್ಯಕ್ಕೆ ಅನ್ಯಾಯವಾಗಿದೆ. ತಮ್ಮ ಜಿಲ್ಲೆಗೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಅಪಪ್ರಚಾರ ನಡೆಸಿದ್ದರು. ಆದರೆ, ಈ ಯೋಜನೆ ಕೇವಲ ರಾಮನಗರಕಷ್ಟೇ ಅಲ್ಲದೆ, ಮಂಡ್ಯಭಾಗಕ್ಕೂ ಅನುಕೂಲವಾಗಲಿದೆ. ಜಿಲ್ಲೆಯಂತೆ ಮಂಡ್ಯ ಜಿಲ್ಲೆಯಲ್ಲಿನ ಜನತೆಯೂ ನನ್ನ ಅಣ್ಣ ತಮ್ಮಂದಿರೇ. ಈ ಬಗ್ಗೆ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಮತ್ತು ಮಳವಳ್ಳಿ ಶಾಸಕ ಅನ್ನದಾನಿಯೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.


*ತನ್ನ ಕನಸಿನ ಯೋಜನೆ ಕಣ್ತುಂಬಿಕೊಂಡ ಎಚ್‍ಡಿಕೆ:*

ಇದಕ್ಕೂ ಮೊದಲು ತಾಲೂಕಿನ ಪಕ್ಷದ ಮುಖಂಡರು ಹಾಗೂ ಪತ್ರಕರ್ತರ ಜೊತೆಗೂಡಿ ಸತ್ತೇಗಾಲ ಬಳಿ ನಡೆಯುತ್ತಿರುವ ಯೋಜನೆಯ ಟನಲ್ ಕಾಮಗಾರಿಯನ್ನು ಎಚ್‍ಡಿಕೆ ವೀಕ್ಷಿಸಿದರು. ಗುತ್ತಿಗೆ ಕಂಪನಿಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಜೊತೆಗೂಡಿ ಸುಮಾರು 1.5 ಕಿ.ಮೀ ಉದ್ದದ ಸುರಂಗದ ಒಳಗೆ ಹಾದು ವೀಕ್ಷಣೆ ಮಾಡಿದರು. ಕಾಮಗಾರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಎಚ್‍ಡಿಕೆ ಈ ಯೋಜನೆಗೆ ಹಣ ನೀಡಿದ್ದು ಸಾಧನೆಯಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸಿರುವ ಪ್ರತಿ ಕಾರ್ಮಿಕರ ಶ್ರಮವೂ ಅಪಾರವಾದದ್ದು ಎಂದು ಶ್ಲಾಘಿಸಿದರು.


ಶಾಸಕರಾದ ಅನಿತಾಕುಮಾರಸ್ವಾಮಿ, ಎ. ಮಂಜುನಾಥ್, ಶಾಸಕರಾದ ಡಿ.ಸಿ.ತಮ್ಮಣ್ಣ, ಎ.ಮಂಜುನಾಥ್, ಅನ್ನದಾನಿ ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑